ಮಲಗುವಾಗ ಕಾಲಿನ ಮಧ್ಯದ ಬೆರಳುಗಳಿಗೆ ಟೇಪ್ ಸುತ್ತಿಕೊಳ್ಳುವುದರಿಂದ ಏನುಲಾಭ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Leg-Finger--01

ಸಾಮಾನ್ಯವಾಗಿ ನಮಗೆ ನಿದ್ದೆ ಎಷ್ಟು ಮುಖ್ಯವೋ ಮಲಗುವ ಶೈಲಿ ಕೂಡ ಅಷ್ಟೇ ಮುಖ್ಯ, ಮಲಗುವಾಗ ಹೇಗೆ ಮಲಗಬೇಕು ? ಯಾವ ದಿಕ್ಕಿಗೆ ಮಲಗಬೇಕು ? ಯಾವ ಭುಜ ಮೇಲೆ ಮಾಡಿ ಮಲಗಬೇಕು ಎಂದೆಲ್ಲ ನಿಮಗೆ ಗೊತ್ತಿರುತ್ತೆ. ಆದರೆ ಇಲ್ಲಿ ಹೊಸ ವಿಧಾನವೊಂದನ್ನು ತಿಳಿಸಿಕೊಡುತ್ತೇವೆ. ಎತ್ತರದ ಹಿಮ್ಮಡಿ ಯುಳ್ಳ ಪಾದರಕ್ಷೆಗಳನ್ನು ಧರಿಸುವುದು,ಸ್ಥೂಲವಾದ ದೇಹ,ಬಹಳ ಹೊತ್ತು ನಿಂತಿರುವುದು, ಓಡಾಡುವುದು…. ಹೀಗೆ ಕಾರಣಗಳಿಂದ,ಹೆಚ್ಚಿನ ಜನ ಕಾಲು ನೋವಿನಿಂದ ನರಳುತ್ತಿದ್ದಾರೆ. ಮುಖ್ಯವಾಗಿ ರಾತ್ರಿಯ ವೇಳೆ ಕಾಣಿಸಿಕೊಳ್ಳುವ ನೋವು ಸಹಿಸಲು ಅಸಾಧ್ಯ. ಹೀಗಾದಾಗ ನೋವು ನಿವಾರಕಗಳು ,ಸ್ಪ್ರೇ ಗಳನ್ನು ಉಪಯೋಗಿಸುವುದರ ಬದಲು ಕೆಳಗೆ ತಿಳಿಸಲಾದ ಒಂದು ಸಣ್ಣ ಪ್ರಯೋಗದಿಂದ ಕಾಲು ನೋವು ತನ್ನಿಂದ ತಾನೇ ಕಡಿಮೆಯಾಗುತ್ತದೆ.

Leg--01

ಸರ್ಜಿಕಲ್ ಹಾಗೂ ಮೆಡಿಲ್ ಸ್ಟೋರ್ ಗಳಲ್ಲಿ ಕಡಿಮೆ ಬೆಲೆಗೆ ಲಭಿಸುವ 0.38 ಮಿ.ಮೀ ದಪ್ಪವಿರುವ ರಿಜಿಡ್ ಸ್ಪೋರ್ಟ್ಸ್ ಟೇಪ್ (ಖigiಜ sಠಿoಡಿಣs ಣಚಿಠಿe) ನ್ನು, ರಾತ್ರಿ ವೇಳೆ ಮಲಗುವಾಗ ಕಾಲಿನ ಹೆಬ್ಬೆರಳು ಹಾಗೂ ಮಧ್ಯ ಬೆರಳನ್ನು ಸೇರಿಸಿ ಪ್ಲಾಸ್ಟರ್ ರೀತಿಯಲ್ಲಿ ಸುತ್ತಬೇಕು.ಈ ಸಮಯದಲ್ಲಿ ಕಾಲುಗಳು ವಿಶ್ರಾಂತಿಯಲ್ಲಿರುತ್ತವೆ. ರಾತ್ರಿಯೆಲ್ಲಾ ಹಾಗೇ ಇರಿಸಿ ಬೆಳಿಗ್ಗೆ ತೆಗೆಯಬೇಕು. ಪದೇ ಪದೇ ಈ ರೀತಿ ಮಾಡುತ್ತಿದ್ದರೆ, ಸಾಮಾನ್ಯವಾದ ಕಾಲು ನೋವು ಗುಣವಾಗುತ್ತದೆ. ಪಾದಗಳ ಮೇಲೆ ಹೆಚ್ಚಿನ ಒತ್ತಡ ಬೀಳುವುದಿಲ್ಲ.

Leg--02

ನಡೆಯುವಾಗ ಪಾದಗಳು ಭೂಮಿಯನ್ನು ಸಂಪೂರ್ಣವಾಗಿ ಸ್ಪರ್ಶಿಸುವ ಹಾಗೆ ಆಕಾರ ಬರುತ್ತದೆ. ಪಾದಗಳಿಗೆ,ಕಾಲಿನ ಕೆಳಗಿನ ಭಾಗಕ್ಕೆ ಆದ ಗಾಯಗಳು ಬೇಗನೆ ಗುಣವಾಗಲು ಸಹಕಾರಿಯಾಗುತ್ತದೆ. ಹೆಚ್ಚು ದೂರ ಓಡಿದರೂ ಪಾದಗಳ ಮೇಲೆ ಹೆಚ್ಚಿನ ಒತ್ತಡ ಬೀಳುವುದಿಲ್ಲ. ಯಾವುದಾದರೂ ಆಟಗಳನ್ನು ಆಡುವಾಗ ಈ ರೀತಿ ಟೇಪ್ ಹಾಕಿಕೊಳ್ಳುವುದರಿಂದ ಬೆರಳುಗಳ ಮೇಲೆ ಹೆಚ್ಚಿನ ಒತ್ತಡ ಬೀಳದೆಯಿರುತ್ತದೆ.ಗಾಯಗಳು ಆಗದಂತೆ ನೋಡಿಕೊಳ್ಳುತ್ತದೆ. ಆದರೆ,ಟೇಪ್ ಸುತ್ತುವುದರಿಂದ ಬೆರಳುಗಳಲ್ಲಿ ಬಾವುಬರುವುದು,ಕೆಂಪಗಾಗುವುದು,ತುರಿಕೆ ಮೊದಲಾದ ಲಕ್ಷಣಗಳು ಕಂಡು ಬಂದಲ್ಲಿ ಒಡನೆಯೇ ಫಿಸಿಯೋ ಥೆರಪಿಸ್ಟ್ ರನ್ನು ಸಂಪರ್ಕಿಸಿ ನಂತರವೇ ಟೇಪ್ ಹಾಕಿಕೊಳ್ಳಬೇಕು.

Facebook Comments

Sri Raghav

Admin