ಮಾಣಿಕ್ ಷಾ ಮೈದಾನದಲ್ಲಿ ಸ್ವಾತಂತ್ರೋತ್ಸವದ ಸಂಭ್ರಮ ಹೇಗಿತ್ತು ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

KumaraSwamy

ವಿದ್ಯಾರ್ಥಿಗಳ ಪ್ರತಿಭೆ ಅನಾವರಣ
ಬೆಂಗಳೂರು,ಆ.15-ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಇಂದು 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ವೇಳೆ ಸ್ವಾತಂತ್ರ್ಯದ ಹೋರಾಟವನ್ನು ನೆನಪಿಸುವಂತಹ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟರು. ಮೊದಲಿಗೆ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ತಂಡದವರು ನಾಡಗೀತೆ ಹಾಗೂ ರೈತ ಗೀತೆಯನ್ನು ಹಾಡಿದರು. ನೆಲಗದರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 650 ಮಕ್ಕಳು, ಕ್ರಾಂತಿವೀರ ಮುಂಡರಗಿ ಭೀಮರಾಯರ ಕುರಿತು ನಡೆಸಿಕೊಟ್ಟ ಸಾಂಸ್ಕøತಿಕ ಕಾರ್ಯಕ್ರಮ ಜನರ ಮನ ಮುಟ್ಟಿತು.

ಬ್ರಿಟಿಷರ ವಿರುದ್ಧ ಮುಂಡರಗಿ ಭೀಮರಾಯ ಹೋರಾಟ ಮಾಡಿದುದ್ದನ್ನು ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಹೈದರಾಬಾದ್‍ನ ಮಾನ್ಸಿ ಗುಲ್ಲಾಟ ಅವರು ಫೇಸ್ ಯೋಗ ಪ್ರದರ್ಶಿಸಿದರು.  ಸೇನೆಯವರು ಬೈಕ್‍ಗಳ ಮೂಲಕ ಮೈನವೀರೇಳಿಸುವಂತಹ ಸಾಹಸಗಳನ್ನು ಪ್ರದರ್ಶಿಸಿದ ವೇಳೆ ಸಭಿಕರು ಚಪ್ಪಾಳೆ ತಟ್ಟಿ ಹರ್ಷೋದ್ಘಾರ ಮಾಡಿ ಸ್ವಾಗತಿಸಿದರು. ಎಎಸ್‍ಸಿ ಟಾರ್ನಾಡೊ ತಂಡದವರು ಬೈಕ್‍ಗಳಲ್ಲಿ ಸಾಗುತ್ತಾ ಏಣಿ ಹತ್ತುವುದು, ಪತ್ರಿಕೆ ಓದುವುದು, ಬೈಕ್‍ಗಳನ್ನು ಹಿಮ್ಮುಕವಾಗಿ ಚಲಿಸುವುದು, ಬೆಂಕಿಯ ವೃತ್ತದಲ್ಲಿ ಹಾಯುವುದು ಹೀಗೆ ಹಲವಾರು ಚಮತ್ಕಾರಗಳನ್ನು ಪ್ರದರ್ಶಿಸಿದರು.

ಭೈರವೇಶ್ವರನಗರದ ಬಿಬಿಎಂಪಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರ, ಉಜ್ವಲ ದೇಶಭಕ್ತ ಮೈಲಾರ ಮಹದೇವ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಹೋರಾಡಿದುದ್ದನ್ನು ನೆನಪಿಸುವಂತಹ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಬನ್ನೇರುಘಟ್ಟದ ಲಿಲ್ಲಿ ರೋಜ್ ಪ್ರೌಢಶಾಲೆ ಮಕ್ಕಳು ಜೈ ಹಿಂದ್, ಜೈ ಭಾರತ ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶಿಸಿ ಅಪ್ಪಟ್ಟ ದೇಶಪ್ರೇಮಿಗಳು, ಹೋರಾಟಗಾರರ ತ್ಯಾಗ, ಬಲಿದಾನದ ನೆನಪು ತಂದುಕೊಟ್ಟರು.

ಬಹುಮಾನ:
ಲಿಲ್ಲಿ ರೋಜ್ ಪ್ರೌಢಶಾಲೆಯ ಜೈ ಹಿಂದ್, ಜೈ ಭಾರತ್ ಪ್ರದರ್ಶನಕ್ಕೆ ಪ್ರಥಮ, ನೆಲಗದರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ನಡೆಸಿಕೊಟ್ಟ ಕ್ರಾಂತಿವೀರ ಮುಂಡರಗಿ ಭೀಮರಾಯ ಪ್ರದರ್ಶನಕ್ಕೆ ದ್ವಿತೀಯ ಬಹುಮಾನ, ಉಜ್ವಲ ದೇಶ ಭಕ್ತ ಮೈಲಾರ ಮಹದೇವನ ಹೋರಾಟ ಪ್ರದರ್ಶಿಸಿದ ಬಿಬಿಎಂಪಿ ಪ್ರೌಢಶಾಲೆ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ತೃತೀಯ ಬಹುಮಾನ ದೊರೆಯಿತು.

IMG-20180815-WA0061 IMG-20180815-WA0063 IMG-20180815-WA0064 IMG-20180815-WA0065 IMG-20180815-WA0066 IMG-20180815-WA0067 IMG-20180815-WA0068 IMG-20180815-WA0070 IMG-20180815-WA0072 IMG-20180815-WA0075 IMG-20180815-WA0077 MCS_5654 MCS_5670

kumar MCS_5615 MCS_5626 MCS_5670 MCS_5710 MCS_5713 MCS_5716 MCS_5719 MCS_5733 MCS_5741 MCS_5749 MCS_5761 MCS_5767 MCS_5775 MCS_5783 MCS_5788 MCS_5791 MCS_5800 MCS_5803 MCS_5804 MCS_5808 MCS_5812 MCS_5813 MCS_5823 MCS_5826

Facebook Comments

Sri Raghav

Admin