2022ಕ್ಕೆ ಭಾರತೀಯ ಖಗೋಳಯಾತ್ರಿಕರ ಗಗನಯಾನ : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ನವದೆಹಲಿ, ಆ.15-ಪುರುಷರಿರಲಿ ಅಥವಾ ಮಹಿಳೆಯರಿರಲಿ, 2022ಕ್ಕೆ ಗಗನಯಾನ ನೌಕೆ ಮೂಲಕ ಭಾರತೀಯರು ಬಾಹ್ಯಾಕಾಶ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.  ರಾಜಧಾನಿ ನವದೆಹಲಿಯ ಐತಿಹಾಸಿಕ ಕೆಂಪುಕೋಟಿಯ ಮೇಲೆ 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರದ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಮೋದಿ, 2022ಕ್ಕೆ ಭಾರತಕ್ಕೆ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ.

ಇದೇ ಸಂದರ್ಭದಲ್ಲಿ ಭಾರತದ ಗಗನಯಾನ ನೌಕೆಯು ಅಂತರಿಕ್ಷಕ್ಕೆ ಚಿಮ್ಮಲಿದೆ. ಇದರಲ್ಲಿ ಭಾರತೀಯ ಖಗೋಳಯಾತ್ರಿಕರು ತೆರಳಲಿದ್ದಾರೆ. ಇವರು ಭಾರತದ ಪುತ್ರ ಅಥವಾ ಪುತ್ರಿಯೇ ಆಗಿರುತ್ತಾರೆ. ಗಗನಯಾನ ನೌಕೆಯು ಭಾರತದ ತ್ರಿವರ್ಣ ಧ್ವಜವನ್ನು ನಭೋ ಮಂಡಲಕ್ಕೆ ಕೊಂಡೊಯ್ಯಲಿದೆ ಎಂದು ಘೋಷಿಸಿದರು. ಚಂದ್ರಯಾನ-1 ಭಾರತದ ಪ್ರಥಮ ಚಂದ್ರಲೋಕ ಪ್ರಯಾಣವಾಗಿದೆ. ಸದಸ್ಯದಲ್ಲೇ ಚಂದ್ರಯಾನ್-2 ಯೋಜನೆಯೂ ಸಾಕಾರಗೊಳ್ಳಲಿದೆ ಎಂದು ಮೋದಿ ಹೇಳಿದರು.

Facebook Comments

Sri Raghav

Admin