ಹೆಲಿಕಾಪ್ಟರ್ ರೆಕ್ಕೆ ಬಡಿದು ಭಾರತೀಯ ಯಾತ್ರಿಯ ಶಿರಚ್ಛೇದ

ಈ ಸುದ್ದಿಯನ್ನು ಶೇರ್ ಮಾಡಿ

Helicaptar--01

ಕಠ್ಮಂಡು, ಆ.15-ಹೆಲಿಕಾಪ್ಟರ್ ಹಿಂಬದಿಯ ರೆಕ್ಕೆಗಳ ಬ್ಲೇಡ್ ಬಡಿದು ಭಾರತದ ಕೈಲಾಸ ಮಾನಸ ಸರೋವರ ಯಾತ್ರಿಯೊಬ್ಬರ ತಲೆ ಕತ್ತರಿಸಿ ಹೋದ ಘಟನೆ ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ನಿನ್ನೆ ಸಂಭವಿಸಿದೆ.  ಮುಂಬೈನ ನಾಗೇಂದ್ರಕುಮಾರ್ ಕಾರ್ತಿಕೆ ಮೆಹ್ತಾ ಮೃತಪಟ್ಟ ದುರ್ದೈವಿ. ನೇಪಾಳದ ಹಿಲ್ಸಾ ಎಂಬ ಪ್ರದೇಶದ ಗುಡ್ಡಗಾಡು ಹೆಲಿಪ್ಯಾಡ್‍ನಲ್ಲಿ ಹೆಲಿಕಾಪ್ಟರ್ ನಿಲ್ಲುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಹೆಲಿಕಾಪ್ಟರ್‍ನಿಂದ ಕೆಳಗಿಳಿದ ಯಾತ್ರಿ ದೂರ ಹೋಗುವ ಬದಲು ಹಿಂಭಾಗಕ್ಕೆ ಬಂದಾಗ ಬ್ಲೇಡ್ ಬಡಿದು ಈ ದುರಂತ ಸಂಭವಿಸಿದೆ. ನಾಗೇಂದ್ರ ಮೆಹ್ತಾ ಅವರ ಮೃತದೇಹವನ್ನು ಸಿಮಿಕೋಟ್‍ನಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ನಂತರ ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin