80 ನಿಮಿಷಗಳ ಕಾಲ ಸುದೀರ್ಘ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಪ್ರಧಾನಿ

ಈ ಸುದ್ದಿಯನ್ನು ಶೇರ್ ಮಾಡಿ

Modi-Speech--01

ನವದೆಹಲಿ, ಆ.15-ದೇಶದ ಪ್ರಧಾನಮಂತ್ರಿಯಾದ ನಂತರ ನರೇಂದ್ರ ಮೋದಿ ಈವರೆಗೆ ನಾಲ್ಕು ಬಾರಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿದ್ದಾರೆ. 72ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮೋದಿ ಇಂದು ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ತಮ್ಮ ಕೊನೆಯ ಭಾಷಣ ಮಾಡಿದರು. 2019ರ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಅವರ ಭಾಷಣ ಮಹತ್ವ ಪಡೆದುಕೊಂಡಿದೆ.  ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಎಂದಿನಂತೆ ಸಾಂಪ್ರದಾಯಿಕ ಕೇಸರಿ ರುಬಾಲು ಧರಿಸಿದ ಅವರು ಧ್ವ ಜಾರೋಹಣ ನೆರವೇರಿಸಿ ದೇಶದ ಜನರನ್ನು ಉದ್ದೇಶಿಸಿ 80 ನಿಮಿಷಗಳ ಕಾಲ ಸುದೀರ್ಘ ಭಾಷಣ ಮಾಡಿ ಗಮನಸೆಳೆದರು.

ಕಳೆದ ವರ್ಷ ಮೋದಿ 57 ನಿಮಿಷಗಳ ಕಾಲ ಭಾಷಣ ಮಾಡಿದ್ದರು. ಐದು ವರ್ಷಗಳಲ್ಲಿ ಅವರ ಅತ್ಯಂತ ಕಡಿಮೆ ಅವಧಿಯ ಭಾಷಣವಾಗಿತ್ತು. 2016ರಲ್ಲಿ ಅವರು 96 ನಿಮಿಷ ಮಾತನಾಡಿದ್ದರು. ಅದು ಭಾರತದ ಪ್ರಧಾನಿಯೊಬ್ಬರ ಅತ್ಯಂತ ದೀರ್ಘಾವಧಿ ಭಾಷಣ ಎಂದು ದಾಖಲೆ ನಿರ್ಮಿಸಿತ್ತು.

ಭಾರತದ ಪ್ರಥಮ ಪ್ರಧಾನಮಂತ್ರಿ ಜವಹರ್‍ಲಾಲ್ ನೆಹರು ಅವರು 1947ರಲ್ಲಿ 72 ನಿಮಿಷ ಭಾಷಣ ಮಾಡಿದ್ದರು. ಅದು 2015ರವರೆಗೆ ಚಾರಿತ್ರಿಕ ಕೆಂಪು ಕೋಟೆಯ ಮೇಲೆ ಅತಿ ದೀರ್ಘಾವಧಿಯ ಭಾಷಣ ಎನಿಸಿತ್ತು. ಪ್ರಧಾನಿ ಮೋದಿ 2014ರಲ್ಲಿ 65 ನಿಮಿಷಗಳು ಹಾಗೂ 2015ರಲ್ಲಿ 86 ನಿಮಿಷ ಭಾಷಣ ಮಾಡಿದ್ದರು. 10 ಬಾರಿ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ್ದ ಡಾ. ಮನಮೋಹನ್ ಸಿಂಗ್ 50 ನಿಮಿಷಗಳ ಒಳಗೆ ತಮ್ಮ ಭಾಷಣ ಮುಗಿಸುತ್ತಿದ್ದರು.

Facebook Comments

Sri Raghav

Admin