ಮತ್ತಷ್ಟು ಬಿಗಡಾಯಿಸಿದ ಮಾಜಿ ಪ್ರಧಾನಿ ವಾಜಪೇಯಿ ಆರೋಗ್ಯ, ಏಮ್ಸ್ ಗೆ ಮೋದಿ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

Vajapeyi--01

ನವದೆಹಲಿ, ಆ. 15 : ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯವನ್ನು ಇಂದು ಪ್ರಧಾನಿ ಮೋದಿ ಏಮ್ಸ್ ಭೇಟಿ ನೀಡಿ ವಿಚಾರಿಸಿದ್ದಾರೆ. ಕಳೆದ 24 ಗಂಟೆಯಲ್ಲಿ ವಾಜಪೇಯಿಯವರ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು , ಚಿತಾಜನಕ ಸ್ಥಿತಿ ತಪುಪಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಪ್ರಧಾನಿ ಮೋದಿ ಏಮ್ಸ್ ಭೇಟಿ ವಾಜಪೇಯಿವರ ಸದ್ಯದ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆದರು.

ವಾಜಪೇಯಿ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಅವರಿಗೆ ಜೀವರಕ್ಷಕ ಒದಗಿಸಲಾಗಿದೆ ಎಂದು ಏಮ್ಸ್ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ. 93 ವರ್ಷದ ವಾಜಪೇಯಿ ಅವರು ಮದುಮೇಹದಿಂದ ಬಳಲುತ್ತಿದ್ದು, ಅವರ ಒಂದು ಮೂತ್ರಪಿಂಡ ಮಾತ್ರ ಕೆಲಸ ಮಾಡುತ್ತಿದೆ. 2009ರಲ್ಲಿ ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದರು.

ವಾಜಪೇಯಿ ಅವರು ಮೂತ್ರಪಿಂಡ ಸೋಂಕಿಗೆ ತುತ್ತಾಗಿರುವುದು ಜೂನ್ 11ರಂದು ಪತ್ತೆಯಾಗಿತ್ತು. ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿರುವ ಅವರು ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೋದಿ ಅವರ ಭೇಟಿಗೂ ಮುನ್ನ ಜವಳಿ ಸಚಿವೆ ಸ್ಮೃತಿ ಇರಾನಿ ಕೂಡ ಏಮ್ಸ್‌ಗೆ ಭೇಟಿ ನೀಡಿ ವಾಜಪೇಯಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು.

Press Note

Facebook Comments

Sri Raghav

Admin