ಸ್ವಾತಂತ್ರ್ಯ ಹೋರಾಟಗಾರರನ್ನು ಭಕ್ತಿಯಿಂದ ಸ್ಮರಿಸಿ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramayya
ಬೆಂಗಳೂರು, ಆ.15-ಬ್ರಿಟೀಷರ ಗುಲಾಮಗಿರಿಯಿಂದ ಮುಕ್ತಗೊಳಿಸಿ ಸ್ವಾತಂತ್ರ್ಯವನ್ನು ತಂದುಕೊಟ್ಟ ನಮ್ಮ ದೇಶದ ಹೋರಾಟಗಾರರನ್ನು ಭಕ್ತಿ ಪೂರ್ವಕವಾಗಿ ಸ್ಮರಿಸುವಂತಹ ದಿನ ಈ ಸುದಿನವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಗರದ ಫ್ರೀಡಂ ಪಾರ್ಕ್‍ನಲ್ಲಿಂದು ಕಾಳಿದಾಸ ಹೆಲ್ತ್ ಅಂಡ್ ಎಜುಕೇಷನ್ ಟ್ರಸ್ಟ್ ಹಾಗೂ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವ ಹಾಗೂ ಸಂಗೊಳ್ಳಿರಾಯಣ್ಣ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದ ಹೋರಾಟಗಾರರ ಹೋರಾ ಟದ ಪ್ರತಿಫಲವೇ ಸ್ವಾತಂತ್ರ್ಯ. ನಾವೆಲ್ಲರೂ ಸ್ವತಂತ್ರವಾಗಿ ಉಸಿರಾ ಡುವುದಕ್ಕೆ ಪ್ರಮುಖ ಕಾರಣ ಸ್ವತಂತ್ರ ಹೋರಾಟಗಾರರು ಎಂದು ಹೇಳಿದರು.

ಕಾಳಿದಾಸ ಹೆಲ್ತ್ ಅಂಡ್ ಎಜುಕೇಷನ್ ಟ್ರಸ್ಟ್ ರಕ್ತದಾನ, ಉಚಿತ ಮಧುಮೇಹ ತಪಾಸಣಾ ಶಿಬಿರಗಳಂತಹ ಹಲವಾರು ಸಮಾಜ ಸೇವೆಗಳನ್ನು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿಯತ್ತ ಸಾಗಲಿ ಎಂದು ಹಾರೈಸಿದರು. ಟ್ರಸ್ಟ್ ಮುಖ್ಯಸ್ಥ ಡಾ.ಪರಮೇಶ್ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯಂದು ಸಂಗೊಳ್ಳಿ ರಾಯಣ್ಣ ನವರ ಜನ್ಮ ದಿನವೂ ಇರುವುದರಿಂದ ಎಲ್ಲರೂ ಆಚರಿಸುವಂತಾಗಬೇಕು ಎಂದ ಅವರು ಕರ್ನಾಟಕದ 45 ಆಸ್ಪತ್ರೆಗಳು ಈ ಟ್ರಸ್ಟ್‍ಗೆ ಸೇರ್ಪಡೆಯಾಗಿದ್ದು, ಇದೇ ಮೊದಲ ಬಾರಿಗೆ ಟ್ರಸ್ಟ್ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕುರುಬರ ಮಹಾಸಭಾ ವತಿಯಿಂದ ಇದೇ ವೇಳೆ ಕಂಕಣ ಧರಿಸಿ ಸಮಾಜ ರಕ್ಷಿಸಿ ಎಂಬ ಧ್ಯೇಯ ವಾಕ್ಯದಡಿ ಸಂಗೊಳ್ಳಿರಾಯಣ್ಣ ಯುವ ಸೇನೆಯ ಸದಸ್ಯರಿಗೆ ವಿಷನ್ ಇಂಡಿಯಾ ಸ್ಫೋಟ್ರ್ಸ್ ಅಕಾಡೆಮಿ ತಂಡದ ಎಲ್ಲಾ ಆಟಗಾರರಿಗೆ ಟ್ರಸ್ಟ್‍ನ ಕಾರ್ಯದರ್ಶಿ ಡಾ.ವಿಜಯಲಕ್ಷ್ಮಿಅವರು ಕಂಕಣ ಕಟ್ಟಿ ಸ್ತ್ರೀಯರ ನಡುವೆ ಯಾವುದೇ ರೀತಿಯ ದೌರ್ಜನ್ಯ, ಕಿರುಕುಳ, ಅನೈತಿಕ ಸಂಬಂಧವನ್ನು ಹೊಂದುವುದಿಲ್ಲ ಎಂದು ಪ್ರಮಾಣ ಸ್ವೀಕರಿಸುವ ಮೂಲಕ ಸ್ತ್ರೀಯರನ್ನು ಗೌರವಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ವಿಷನ್ ಇಂಡಿಯಾ ಸ್ಪೋಟ್ರ್ಸ್ ಅಕಾಡೆಮಿ ಆಯೋಜಿಸಿದ್ದ ಬಾಸ್ಕೆಟ್‍ಬಾಲ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುಮಾನ ವಿತರಿಸಿದರು. ಅಕಾಡೆಮಿ ಮುಖ್ಯ ತರಬೇತುದಾರ ರಾದ ನರೇಶ್ ದೈಹಿಕ ಶಿಕ್ಷಣ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ಪ್ರೋತ್ಸಾಹಿ ಸುವಂತೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪೋಷಕರಲ್ಲಿ ಮನವಿ ಮಾಡಿದರು.

Facebook Comments