ಇಂದಿನ ಪಂಚಾಗ ಮತ್ತು ರಾಶಿಫಲ (16-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ದಾನ ಮಾಡಿದ ಹಣಕ್ಕೆ ಅಪೂರ್ವವಾದ ಮಹಿಮೆ ಯನ್ನು ಒಳ್ಳೆಯ ದೇಶ, ಕಾಲ ಮತ್ತು ಪಾತ್ರಗಳು ಉಂಟುಮಾಡುತ್ತವೆ. ಸಮುದ್ರದ ತಳದಲ್ಲಿನ ಚಿಪ್ಪಿನೊಳಗಡೆ ಸೇರಿದ ಮೋಡದ ಹನಿ ಮುತ್ತಿನ ರೂಪವನ್ನು ತಳೆಯುತ್ತದೆ. -ಸುಭಾಷಿತಸುಧಾನಿಧಿ

Rashi
ಪಂಚಾಂಗ : 16.08.2018 ಗುರುವಾರ

ಸೂರ್ಯ ಉದಯ ಬೆ.06.07 / ಸೂರ್ಯ ಅಸ್ತ ಸಂ.06.40
ಚಂದ್ರ ಉದಯ ಬೆ.10.38 / ಚಂದ್ರ ಅಸ್ತ ರಾ.10.48
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ : ಷಷ್ಠೀ (ರಾ.01.02)
ನಕ್ಷತ್ರ: ಚಿತ್ತಾ (ಮ.03.48) / ಯೋಗ: ಶುಭ (ಸಾ.04.49)
ಕರಣ: ಕೌಲವ-ತೈತಿಲ (ಮ.01.21-ರಾ.01.02)
ಮಳೆ ನಕ್ಷತ್ರ: ಆಶ್ಲೇಷಾ / ಮಾಸ: ಕಟಕ / ತೇದಿ: 32

ಇಂದಿನ ವಿಶೇಷ: ಶಿರಿಯಾಳ ಷಷ್ಠಿ ಸಾಯನ ವೈಧೃತಿ ರಾ.01.30

# ರಾಶಿ ಭವಿಷ್ಯ 
ಮೇಷ : ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿ
ವೃಷಭ : ಬಂಧು-ಮಿತ್ರರ ಆಗಮನದಿಂದ ಸಂತೋಷವಾಗುತ್ತದೆ. ಗೌರವ, ಸನ್ಮಾನ ಲಭಿಸುತ್ತದೆ
ಮಿಥುನ: ನ್ಯಾಯವಾದಿಗಳಿಗೆ ಪ್ರಗತಿ. ಆರೋಗ್ಯ ಸುಧಾರಣೆಯಾಗುತ್ತದೆ. ಧನಲಾಭವಾಗುವುದು
ಕಟಕ : ಅನಾವಶ್ಯಕ ಹಣ ವ್ಯಯವಾಗುವುದು
ಸಿಂಹ: ಶರೀರ ದುರ್ಬಲ ವಾಗುವುದು. ಕುಟುಂಬದಲ್ಲಿ ಅಂತಃಕಲಹ ಕಂಡುಬರುತ್ತದೆ
ಕನ್ಯಾ: ವ್ಯವಹಾರಗಳಲ್ಲಿ ಶತ್ರುಗಳು ಹಸ್ತಕ್ಷೇಪ ಮಾಡಬಹುದು
ತುಲಾ: ಪಿತ್ರಾರ್ಜಿತ ಆಸ್ತಿ ಕಳೆಯುವ ಸಾಧ್ಯತೆಗಳುಂಟು
ವೃಶ್ಚಿಕ: ನಿಮ್ಮ ಮಾತೇ ಸರಿ ಎಂದು ವಾದಿಸುವಿರಿ
ಧನುಸ್ಸು: ಬಂಧುಗಳು ಮೋಸ ಮಾಡಬಹುದು
ಮಕರ: ಸಮಾಜ ಸೇವಕರಿಗೆ ಕೀರ್ತಿ, ಗೌರವ, ಯಶಸ್ಸು, ಹಣ ಲಭಿಸುತ್ತದೆ. ಉತ್ತಮ ದಿನ
ಕುಂಭ: ಗೃಹದಲ್ಲಿ ಆಸ್ತಿ ವಿಚಾರವಾಗಿ ಮನಸ್ತಾಪ, ಭಿನ್ನಾಭಿಪ್ರಾಯಗಳು ಕಂಡುಬರುತ್ತದೆ
ಮೀನ: ಅತಿಯಾದ ಕೋಪ ಒಳ್ಳೆಯದಲ್ಲ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin