ಎಂಪೈರ್ ಸ್ಟೇಟ್ ಟವರ್, ನಯಾಗರ ಫಾಲ್ಸ್ ನಲ್ಲೂ ಕಂಗೊಳಿಸಿದ ತ್ರಿವರ್ಣ ಧ್ವಜ..!

ಈ ಸುದ್ದಿಯನ್ನು ಶೇರ್ ಮಾಡಿ

Flag--01
ನ್ಯೂಯಾರ್ಕ್, ಆ.16-ಭಾರತದ 72ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಿನ್ನೆ ದೇಶ ವಿದೇಶಗಳ ಪ್ರಖ್ಯಾತ ಕಟ್ಟಡಗಳು, ಸ್ಮಾರಕಗಳು ಮತ್ತು ಪ್ರವಾಸಿ ತಾಣಗಳೂ ತ್ರಿವಣ ಬೆಳಕಿನಲ್ಲಿ ರಾರಾಜಿಸಿದೆ. ಈ ಮೂಲಕ ಭವ್ಯ ಭಾರತದ ಶ್ರೀಮಂತ ಸಂಸ್ಕøತಿ, ಪರಂಪರೆ ಮತ್ತು ಇತಿಹಾಸದ ವೈಭವ ಬಿಂಬಿತವಾಗಿದೆ.
ಅಮೆರಿಕದ ಗಗನಚುಂಬಿ ನಗರಿ ನ್ಯೂಯಾರ್ಕ್‍ನ ವಿಶ್ವವಿಖ್ಯಾತ ಎಂಪೈರ್ ಸ್ಟೇಟ್ ಕಟ್ಟಡವು ನಿನ್ನೆ ರಾತ್ರಿ ಭಾರತದ ತ್ರಿವರ್ಣ ಧ್ವಜದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಲ್ಲಿ ದೇದಿಪ್ಯಮಾನವಾಗಿ ಕಂಗೊಳಿಸಿತು. 102 ಮಹಡಿಗಳ (1,454 ಅಡಿಗಳು) ಎತ್ತರದ ಈ ಮುಗಿಲಚುಂಬಿ ಗೋಪುರವನ್ನು ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಶೇಷ ಬೆಳಕಿನಿಂದ ಸಿಂಗರಿಸಲಾಗಿತ್ತು.

Tricolor--01

ವಿಶ್ವದ ಅತ್ಯಂತ ಪ್ರಸಿದ್ಧ ರುದ್ರ ರಮಣೀಯ ನಯಾಗರ ಜಲಪಾತದ ಜಲಧಾರೆಗಳೂ ಸಹ ಉಜ್ವಲ ತ್ರಿವರ್ಣ ಬೆಳಕಿನಲ್ಲಿ ನಯನ ಮನೋಹರವಾಗಿ ಗೋಚರಿಸಿತು. ಅಮೆರಿಕ ಮತ್ತು ಕೆನಡಾದ ಮಧ್ಯ ಭಾಗದಲ್ಲಿರುವ ಈ ಜಲಪಾತದಲ್ಲಿ ಜಲಧಾರಿಗಳು ಕೇಸರಿ ಬಿಳಿ ಮತ್ತು ಹಸಿರು ಬಣ್ಣದ ಬೆಳಕಿನ ವೈಭವದಲ್ಲಿ ಧುಮ್ಮಿಕ್ಕಿ ಹರಿದ ದೃಶ್ಯವನ್ನು ಸಹಸ್ರಾರು ಪ್ರೇಕ್ಷಕರು ಕಣ್ತುಂಬಿಕೊಂಡು ಪುಳಕಗೊಂಡರು.  ಇದಲ್ಲದೇ ವಾಷಿಂಗ್ಟನ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸೇರಿದಂತೆ ವಿವಿಧ ದೇಶಗಳಲ್ಲಿನ ರಾಜತಾಂತ್ರಿಕ ಕಾರ್ಯಾಲಯಗಳನ್ನು ಇದೇ ರೀತಿಯ ತ್ರಿವರ್ಣ ಬೆಳಕಿನಲ್ಲಿ ಸಿಂಗರಿಸಲಾಗಿತ್ತು.   ಭಾರತದಲ್ಲಿರುವ ವಿವಿಧ ಐತಿಹಾಸಿಕ ಸ್ಮಾರಕಗಳು, ಕಟ್ಟಡಗಳು, ಗೋಪುರಗಳು ಹಾಗೂ ಪ್ರವಾಸಿ ತಾಣಗಳು ಸಹ ಉಜ್ವಲ ಬೆಳಕಿನ ಚಿತ್ತಾರದಲ್ಲಿ ರಾರಾಜಿಸಿದವು.

Tricolor--02

Facebook Comments

Sri Raghav

Admin