1984ರ ಒಲಿಂಪಿಕ್ ನಲ್ಲಿ ಚಿನ್ನದ ಪದಕ ಕೈತಪ್ಪಿದ ಕಾರಣ ಬಿಚ್ಚಿಟ್ಟ ಪಿ.ಟಿ.ಉಷಾ..!

ಈ ಸುದ್ದಿಯನ್ನು ಶೇರ್ ಮಾಡಿ

PT-Usha--01

ನವದೆಹಲಿ,ಆ.16- ಅಮೆರಿದ ಲಾಸ್‍ಏಂಜಲಿಸ್‍ನಲ್ಲಿ ನಡೆದ 1984ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಅವಕಾಶ ಕೈ ತಪ್ಪಲು ಕಾರಣವಾದ ವಾಸ್ತವ ಸಂಗತಿಯನ್ನು ಭಾರತದ ಟ್ರ್ಯಾಕ್ ಸೂಪರ್‍ಸ್ಟಾರ್ ಪಿ.ಟಿ.ಉಷಾ ಬಹಿರಂಗಗೊಳಿಸಿದ್ದಾರೆ.  ಒಲಿಂಪಿಕ್ ಗ್ರಾಮದಲ್ಲಿ ತಮಗೆ ಪೌಷ್ಠಿಕಾಂಶದ ಆಹಾರದ ಕೊರತೆ ಇತ್ತು. ತಾವು ಗಂಜಿ ಮತ್ತು ಉಪ್ಪಿನಕಾಯಿಯನ್ನು ಸೇವಿಸಬೇಕಾಯಿತು. ಇದರಿಂದ 400 ಮೀಟರ್ ಓಟದಲ್ಲಿ ತಾವು ಕಂಚಿನ ಪದಕ ಗಳಿಸಲಷ್ಟೇ ಸಾಧ್ಯವಾಯಿತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಓಟ ಸ್ಪರ್ಧೆಯ ಕಡೆಯ 35 ಮೀಟರ್ ಇದ್ದಾಗ ನನ್ನ ಶಕ್ತಿ ಮಟ್ಟ ಕುಸಿಯಿತು. ಪೌಷ್ಠಿಕಾಂಶ ಆಹಾರದ ಕೊರತೆಯೇ ಇದಕ್ಕೆ ಕಾರಣ. ಚಿನ್ನ ಮತ್ತು ರಜತ ಪದಕ ಗೆಲ್ಲಬೇಕಾಗಿದ್ದ ತಾವು ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು ಎಂದು ಭಾರತದ ಹೆಮ್ಮೆಯ ಪುತ್ರಿ ಪಿ.ಟಿ.ಉಷಾ ನೊಂದು ನುಡಿದಿದ್ದಾರೆ.

Facebook Comments

Sri Raghav

Admin