ಕನ್ನಡದಲ್ಲಿ ಸ್ವಾತಂತ್ರೋತ್ಸವ ಶುಭಾಶಯ ಕೋರಿದ ಇಸ್ರೇಲ್

ಈ ಸುದ್ದಿಯನ್ನು ಶೇರ್ ಮಾಡಿ

Istal--01
ಜೆರುಸಲೆಂ (ಪಿಟಿಐ), ಆ.16-ಇದು ಕನ್ನಡಿಗರೆಲ್ಲರೂ ಹೆಮ್ಮೆಪಡುವ ಸಂಗತಿ. ಆ.15ರಂದು ಇಡೀ ಭಾರತಕ್ಕೆ ಸ್ವಾತಂತ್ರೋತ್ಸವದ ಸಡಗರ. ಇದೇ ಸಂದರ್ಭದಲ್ಲಿ ಭಾರತದ ಮಿತ್ರ ರಾಷ್ಟ್ರಗಳಲ್ಲಿ ಒಂದಾದ ಇಸ್ರೇಲ್ ಭಾರತೀಯರಿಗೆ 72ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದೆ. ಮತ್ತೊಂದು ವಿಶೇಷ ಎಂದರೆ ಕನ್ನಡ ಭಾಷೆಯಲ್ಲೂ ಶುಭಾಶಯ ಸಲ್ಲಿರುವ ಮೂಲಕ ಇಸ್ರೇಲ್ ಕನ್ನಡಿಗರ ಮನಗೆದ್ದಿದೆ.  ಸ್ವಾತಂತ್ರೋತ್ಸವಕ್ಕೆ ಅನೇಕ ದೇಶಗಳು ಶುಭ ಕೋರಿವೆ. ಆದರೆ ಈ ಎಲ್ಲ ರಾಷ್ಟ್ರಗಳಿಗಿಂತಲೂ ಇಸ್ರೇಲ್ ಶುಭಾಶಯ ಭಿನ್ನವಾಗಿದೆ. ಭಾರತದ ವಿವಿಧ ಭಾಷೆಗಳಲ್ಲಿ ಶುಭ ಹಾರೈಸಿರುವ ಇಸ್ರೇಲ್ ಕನ್ನಡಕ್ಕೂ ಆದ್ಯತೆ ನೀಡಿರುವುದು ಗಮನಾರ್ಹ.

ಅಧಿಕೃತ ಟ್ವೀಟರ್‍ನಲ್ಲಿ ಇಸ್ರೇಲ್, “ಆತ್ಮೀಯ ಭಾರತ, ಸ್ವಾತಂತ್ರ್ಯ ದಿನ ಶುಭಾಷಯಗಳು” ಎಂದು ಹೇಳಿದೆ.
ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಕನ್ನಡ ಭಾಷೆಯಲ್ಲಿ ಟ್ವೀಟ್ ಮಾಡಿರುವ ಆ ದೇಶವು ಭಾರತದ ತ್ರಿವರ್ಣ ಧ್ವಜದ ಚಿತ್ರವನ್ನೂ ಸಹ ಪೋಸ್ಟ್ ಮಾಡಿದೆ.

Facebook Comments

Sri Raghav

Admin