ಇಲಿ-ಹೆಗ್ಗಣಗಳನ್ನು ತಿನ್ನುತ್ತವೆ ಈ ಮಾಂಸಾಹಾರಿ ಸಸ್ಯಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ds
ಪರಭಕ್ಷಕ ಮತ್ತು ಮಾಂಸಾ ಹಾರಿ ಗಿಡ-ಮರಗಳು, ಸಸ್ಯ ಸಂಕುಲದ ವಿಸ್ಮಯ. ನೋಡಲು ಅತ್ಯಂತ ಸುಂದರವಾಗಿ ಕಾಣುವ ಇವು ಕ್ರಿಮಿ-ಕೀಟಗಳು ಮತ್ತಿತರ ಜೀವಿಗಳನ್ನು ಆಕರ್ಷಿಸಿ ಭಕ್ಷಿಸುತ್ತವೆ. ಇಂಥ ಮಾಂಸಾ ಹಾರಿ ಗಿಡ-ಮರಗಳ ಪ್ರದರ್ಶನ ಕೊಲಂಬಿಯಾದಲ್ಲಿ ನಡೆಯಿತು. ಬನ್ನಿ ಕಾರ್ನಿವೋರಸ್ ಪ್ಲಾಂಟ್‍ಗಳನ್ನು ನಾವೂ ನೋಡೋಣ..!

ds-1

ಕೊಲಂಬಿಯಾ ರಾಜಧಾನಿ ಬೊಗೊಟಾದ ಬೊಟಾನಿಕಲ್ ಗಾರ್ಡನ್‍ನಲ್ಲಿ ಸಸ್ಯಸಂಕುಲದ ಮಾಂಸ ಭಕ್ಷಕ ಗಿಡಮರಗಳ ಪ್ರದರ್ಶನ ನಡೆಯಿತು. ಇದಕ್ಕೆ ಗೇಟ್ ಕಾಟ್ ಎಂದು ಹೆಸರಿಡಲಾಗಿತ್ತು. ಪರಭಕ್ಷಕ ಮತ್ತು ಮಾಂಸಾಹಾರಿ ಗಿಡಗಳ ಈ ಮೇಳದಲ್ಲಿ ಅರಳಿ ನಿಂತ ಇವು ಪ್ರೇಕ್ಷಕರ ಕುತೂಹಲ ಕೆರಳಿಸಿದವು. ಮಾಂಸ ಭಕ್ಷಕ ಗಿಡಗಳ ಆಕ್ರಮಣಗಳನ್ನು ಪ್ರೇಕ್ಷಕರು ಕಣ್ಣಾರೆ ಕಂಡು ವಿಸ್ಮಯ ಗೊಂಡರು. ನೋಡಲು ಸುಂದರವಾಗಿ ಕಾಣುವ ಈ ಸಸ್ಯಸಂಕುಲಗಳು ಕ್ರಿಮಿ-ಕೀಟಗಳು ಮತ್ತಿತರ ಜೀವಿಗಳನ್ನು ಆಕರ್ಷಿಸಿ ತಿಂದು ಹಾಕುತ್ತವೆ. ಕೆಲವು ಗಿಡಗಳು ತಮ್ಮ ತಂಟೆಗೆ ಬಂದರೆ ಕಚ್ಚುತ್ತವೆ

ds-2

ಈ ಪ್ರದರ್ಶನಲ್ಲಿ ವಿಶ್ವದ 500ಕ್ಕೂ ಹೆಚ್ಚು ವಿವಿಧ ತಳಿಗಳ ಪರಭಕ್ಷಕ ಮತ್ತು ಮಾಂಸಾಹಾರಿ ಸಸ್ಯಗಳನ್ನು ಪ್ರದರ್ಶಿಸಲಾಯಿತು. ವೀನಸ್ ಫ್ಲೈಟ್ರಾಪ್ ಮತ್ತು ಕೋಬ್ರಾ ಲಿಲ್ಲಿಯಂಥ 52 ಅಪರೂಪದ ಪ್ರಭೇದಗಳನ್ನು ಇಲ್ಲಿ ನೋಡುವ ಅವಕಾಶ ಸಸ್ಯಪ್ರಿಯರಿಗೆ ಲಭಿಸಿತು.  ಮಾಂಸಭಕ್ಷಕ ಗಿಡಗಳನ್ನು ಬೆಳಸುವುದು ಸುಲಭ. ಇವು ಮಣ್ಣಿನ ಅತ್ಯಂತ ಕಡಿಮೆ ಪೋಷಕಾಂಶದೊಂದಿಗೆ ಬದುಕುತ್ತವೆ. ಕ್ರಿಮಿ-ಕೀಟಗಳು, ಇಲಿ-ಹೆಗ್ಗಣಗಳು ಇವುಗಳ ಆಹಾರ. ಇವು ಮಾನವರ ಮಾಂಸವನ್ನು ತಿನ್ನುತ್ತವೆ ಎಂಬ ಮೂಢನಂಬಿಕೆಗಳನ್ನು ಹೋಗಲಾಡಿಸುವುದು ಈ ಪ್ರದರ್ಶನದ ಉದ್ದೇಶ ಎನ್ನುತ್ತಾರೆ ಸಂಘಟಕರು.

 

Facebook Comments

Sri Raghav

Admin