ರಾಜಭವನ ವೀಕ್ಷಣೆಗೆ ಮುಗಿಬಿದ್ದ ಜನ, ಆನ್ಲೈನ್ ನಲ್ಲಿ 2,500 ಮಂದಿ ನೋಂದಣಿ

ಈ ಸುದ್ದಿಯನ್ನು ಶೇರ್ ಮಾಡಿ

Rajbhavan--01
ಬೆಂಗಳೂರು, ಆ.16-ರಾಜಭವನಕ್ಕೆ ಇಂದಿನಿಂದ ಸಾರ್ವಜನಿಕರ ಭೇಟಿಗೆ ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಜನ ಮುಗಿಬಿದ್ದು ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಕಳೆದ ಏಳು ದಿನಗಳ ಹಿಂದೆ ಆನ್‍ಲೈನ್ ಮೂಲಕ ನೋಂದಣಿಗೆ ಅವಕಾಶ ಮಾಡಿಕೊಟ್ಟಿದ್ದು, ಇದುವರೆಗೂ 2,500 ಮಂದಿ ನೋಂದಣಿ ಮಾಡಿಕೊಂಡಿದ್ದು, ಒಬ್ಬರಿಗೆ 9 ಜನರನ್ನು ಕರೆದುಕೊಂಡು ಬರುವ ಅವಕಾಶವಿರುವುದರಿಂದ 8 ಸಾವಿರ ಮಂದಿ ರಾಜಭವನಕ್ಕೆ ವೀಕ್ಷಣೆಗೆ ಆಸಕ್ತಿ ತೋರಿಸಿದ್ದಾರೆ.

ಇಂದಿನಿಂದ ಆರಂಭವಾಗಿರುವ ರಾಜಭವನ ವೀಕ್ಷಣೆಗೆ ಇದೇ 31 ರವರೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಬೇಡಿಕೆ ಹೆಚ್ಚಾದರೆ ದಿನಾಂಕ ವಿಸ್ತರಣೆ ಸಂಬಂಧ ಚಿಂತನೆ ನಡೆಸಲಾಗುವುದು ಎಂದು ರಾಜ್ಯಪಾಲರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಕಷ್ಟು ಮಂದಿ ಈ ಪುರಾತನ ಕಟ್ಟಡ ವೀಕ್ಷಣೆಗೆ ಕುತೂಹಲದಿಂದ ಆಗಮಿಸುತ್ತಿದ್ದಾರೆ. ಪ್ರತಿದಿನ ಸಂಜೆ 4 ರಿಂದ 7.30ರವರೆಗೆ ವೀಕ್ಷಣೆಗೆ ಅನುವು ಮಾಡಿಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು.

20 ಮಂದಿಯ ತಂಡವಾಗಿ ವಿಂಗಡಿಸಿ ರಾಜಭವನ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದ್ದು, ಪ್ರವೇಶ ಬಯಸುವವರು ಮೊದಲೇ ಬುಕ್ಕಿಂಗ್ ಮಾಡಿಕೊಳ್ಳಬೇಕು. ಅತ್ಯಂತ ಪುರಾತನ ಕಟ್ಟಡವಾಗಿರುವ ರಾಜಭವನ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿತ್ತು. ಹಾಗಾಗಿ ಸಾರ್ವಜನಿಕರು ಸೇರಿದಂತೆ ವಿದ್ಯಾರ್ಥಿಗಳಿಗೆ ಸಾಕಷ್ಟು ಕುತೂಹಲವಿದ್ದು, ಅಧ್ಯಯನ ವಿಷಯವಾಗಿಯೂ ಹಲವಾರುಮಂದಿ ರಾಜಭವನಕ್ಕೆ ಭೇಟಿ ನೀಡುತ್ತಿದ್ದಾರೆ. ರಾಜಭವನದ ವೆಬ್‍ಸೈಟ್‍ನಲ್ಲಿ ಇ-ಬುಕ್ಕಿಂಗ್ ಮೂಲಕ ವೀಕ್ಷಣೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.

Facebook Comments

Sri Raghav

Admin