ಬಾಣಂತಿಯರಿಗೊಂದು ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

Baby-Ansd-Women-01

ಬೆಂಗಳೂರು,ಆ.16- ಬಾಣಂತಿಯರಿಗೆ ಸೂಕ್ತ ನಿದ್ರೆ ಅಗತ್ಯ. ಇಲ್ಲದಿದ್ದರೆ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ತಾಯಿ ಮತ್ತು ಮಗು ಮಲಗುವ ಹಾಸಿಗೆ ಸ್ವಚ್ಚವಾಗಿರಬೇಕು. ಇದರಿಂದ ತಾಯಿ ಮತ್ತು ಮಗು ಹೆಚ್ಚು ಹೊತ್ತು ನಿದ್ರಿಸಲು ಸಾಧ್ಯವಾಗುತ್ತದೆ. ಈ ಹಿಂದೆ ಎಲ್ಲಾ ತಾಯಿ ಮತ್ತು ಮಗು ಒಟ್ಟಿಗೆ ಮಲಗುವುದು ಸಾಮಾನ್ಯವಾಗಿತ್ತು. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದು ವೇಕ್ ಫಿಟ್ ಸಂಸ್ಥೆಯ ಆಹಾರ ಮತ್ತು ಪೌಷ್ಠಿಕಾಂಶ ತಜ್ಞರಾದ ಡಾ. ಸಿಲ್ಕಿ ಮಹಾಜನ್ ತಿಳಿಸಿದ್ದಾರೆ.

ಹೆಚ್ಚು ಹೊತ್ತು ನಿದ್ರಿಸಲು ಕೆಲವು ಸಲಹೆಗಳು ಮತ್ತು ಇದು ತಾಯಿ ಹಾಗೂ ಮಗುವಿನ ಆರೋಗ್ಯವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಸಮಯ ಸಿಕ್ಕಾಗ ನಿದ್ರಿಸಿ: ಹಗಲಿನಲ್ಲಿ ಸಮಯ ಸಿಕ್ಕರೂ ನಿದ್ರಿಸಿ,. ಬಹುತೇಕ ಶಿಶುಗಳು ರಾತ್ರಿಹೊತ್ತು ಎಚ್ಚರಿದಂದ ಇರುತ್ತವೆ. ಇದರಿಂದ ತಾಯಿ ಕೂಡ ಮಗುವಿನೊಂದಿಗೆ ಎಚ್ಚರವಿರಬೇಕಾಗುತ್ತದೆ. ಆದ್ದರಿಂದ ಮಗು ಮಲಗಿದ ಸಂದರ್ಭದಲ್ಲಿ ತಾಯಿ ಕೂಡ ಮಲಗಬೇಕು.  ಹೆಚ್ಚು ನಿದ್ರಿಸುವುದು ತಾಯಿಗೆ ಒಳ್ಳೆಯದು. ಸುಖವಾದ ನಿದ್ರೆಯು ತಾಯಿ ಆರೋಗ್ಯ ಹೆಚ್ಚಿಸಲು ಕಾರಣವಾಗುತ್ತದೆ. ಇದರಿಂದ ಹಾಲು ಹೆಚ್ಚು ಬರುತ್ತದೆ. ಇದು ತಾಯಿ ಮತ್ತು ಮಗುವಿನ ಆರೈಕೆ ದೃಷ್ಟಿಯಿಂದ ತುಂಬಾ ಒಳ್ಳೆಯದು.

ರಾತ್ರಿ ಹೊತ್ತಲ್ಲಿ ಸ್ತನಪಾನ ಮಾಡಿಸುವುದರಿಂದ ಹಾಲು ಪೂರೈಕೆ ಹೆಚ್ಚಾಗುತ್ತದೆ. ಖಾಲಿ ಇರುವ ಸ್ತನಗಳಲ್ಲಿ ಹೆಚ್ಚು ಹಾಲು ಉತ್ಪಾದನೆ ಆಗುತ್ತದೆ. ಶಿಶುಗಳು ರಾತ್ರಿ ಹೊತ್ತಲ್ಲಿ ಶೇ 20ರಷ್ಟು ಹೆಚ್ಚು ಹಸಿದಿರುತ್ತಾರೆ. ಹೀಗಾಗಿ ರಾತ್ರಿ ಹೊತ್ತು ಹಾಲುಣಿಸುವುದು ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು ಎಂದು ವೇಕ್ ಫಿಟ್ ಸಂಸ್ಥೆಯ ಆಹಾರ ಮತ್ತು ಪೌಷ್ಠಿಕಾಂಶ ತಜ್ಞರಾದ ಡಾ. ಸಿಲ್ಕಿ ಮಹಾಜನ್ ತಿಳಿಸಿದ್ದಾರೆ.

Facebook Comments

Sri Raghav

Admin