ನಿರಂತರ ಮಳೆ : ಬುಕ್ ಮಾಡಿದ್ದ ಟೆಕೆಟ್ ಕ್ಯಾನ್ಸಲ್, ಪ್ರಯಾಣಿಕರಿಗೆ 52 ಲಕ್ಷ ರೂ. ಮರುಪಾವತಿ

ಈ ಸುದ್ದಿಯನ್ನು ಶೇರ್ ಮಾಡಿ

KSRTC-Bus-Pass

ಬೆಂಗಳೂರು, ಆ.17- ನಿರಂತರ ಮಳೆ ಹಾಗೂ ಪ್ರವಾಹದಿಂದಾಗಿ ಮುಂಗಡ ಕಾಯ್ದಿರಿಸಿದ್ದ ಪ್ರಯಾಣಿಕರ ಟಿಕೆಟ್‍ಗಳನ್ನು ರದ್ದುಪಡಿಸಿರುವ ಕೆಎಸ್‍ಆರ್’ಟಿಸಿ 52,78,126ರೂ.ಅವನ್ನು ಮರುಪಾವತಿ ಮಾಡಿದೆ.

ಆ.9ರಿಂದ ಇಂದಿನವರೆಗೆ ಮುಂಗಡ ಕಾಯ್ದಿರಿಸಿದ್ದ 8,415 ಟಿಕೆಟ್‍ಗಳನ್ನು ರದ್ದುಪಡಿಸಿದೆ. ಒಟ್ಟು 918 ಟ್ರಿಪ್‍ಗಳನ್ನು ಮಳೆಯಿಂದಾಗಿ ರದ್ದುಪಡಿಸಿತ್ತು. ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿರುವ ಮಡಿಕೇರಿ, ಮಂಗಳೂರು ಹಾಗೂ ಕೇರಳ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‍ಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ರದ್ದುಪಡಿಸಲಾಗಿತ್ತು.

Facebook Comments

Sri Raghav

Admin