ಅಕ್ರಮ ವಲಸಿಗರ ಹೆಸರಿನಲ್ಲಿ ಸ್ಥಳೀಯ ಅಸ್ಸಾಮಿಗಳಿಗೆ ಕಿರುಕುಳ

ಈ ಸುದ್ದಿಯನ್ನು ಶೇರ್ ಮಾಡಿ

NCR

ನವದೆಹಲಿ, ಆ.17- ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಪ್ರಜೆಗಳನ್ನು ಹೊರದಬ್ಬುವ ಚರ್ಚೆಗಳು ನಡೆಯುತ್ತಿರುವ ವೇಳೆಯಲ್ಲಿ ಅಕ್ರಮ ವಲಸಿಗರ ಹೆಸರಿನಲ್ಲಿ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಅಸ್ಸೋಂನಲ್ಲಿ ಸುಮಾರು 70 ವರ್ಷಗಳಿಂದ ನೆಲೆಸಿರುವ ಸ್ಥಳೀಯರನ್ನು ಅಕ್ರಮ ವಲಸಿಗರು ಎಂದು ತೀರ್ಮಾನಿಸಿ ಗಡಿಪಾರು ಮಾಡುವ ಪ್ರಯತ್ನಗಳು ನಡೆದಿವೆ ಎಂದು ಸಮೀಕ್ಷೆಯೊಂದು ಆರೋಪಿಸಿದೆ.

ದೇಶದಲ್ಲಿ ಸುಮಾರು 20ಮಿಲಿಯನ್ ಬಾಂಗ್ಲಾ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಕೇಂದ್ರ ಸರ್ಕಾರ ಕಳೆದ ಎರಡು ವರ್ಷಗಳ ಹಿಂದೆ ಸುಪ್ರೀಂಕೋರ್ಟ್‍ಗೆ ಪ್ರಮಾಣಪತ್ರ ಸಲ್ಲಿಸಿತ್ತು. ಅದರಲ್ಲಿ ನಾಲ್ಕು ಮಿಲಿಯನ್ ಜನ ಅಸ್ಸೋಂನಲ್ಲೇ ಇದ್ದಾರೆ ಎಂಬ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಕ್ರಮ ವಲಸಿಗರನ್ನು ಹೊರದಬ್ಬಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‍ಆರ್‍ಸಿ)ಯಲ್ಲಿ ದಾಖಲಾಗದೆ ಇರುವ ಜನರನ್ನು ಅಕ್ರಮ ವಾಸಿಗಳು ಎಂದು ಪರಿಗಣಿಸಲಾಗಿದ್ದು, 2016ರ ಮತದಾರರ ಪಟ್ಟಿಯನ್ನು ಮೂಲಾಧಾರವಾಗಿ ಇಟ್ಟುಕೊಳ್ಳಲಾಗಿದೆ.
ಬ್ರಹ್ಮಪುತ್ರ ನದಿಗೆ ಹೊಂದಿಕೊಂಡಂತೆ ಇರುವ ಅಸ್ಸೋಂ ಗಡಿ ಭಾಗದಲ್ಲಿರುವ ಅಲ್ಪಸಂಖ್ಯಾತರನ್ನು ಅನುಮಾನದಿಂದ ನೋಡಲಾಗುತ್ತಿದ್ದು, ಭಾರತೀಯ ಪ್ರಜೆ ಎಂಬುದಕ್ಕೆ ಸೂಕ್ತ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಲಾಗಿದೆ.

ನಾವು ಅನಕ್ಷರಸ್ಥರಾಗಿದ್ದು, ದಿನದ ಜೀವನ ನಿರ್ವಹಣೆಗೆ ಕೂಲಿ ಕೆಲಸ ಮಾಡಿ ಬದುಕುತ್ತಿದ್ದೇವೆ. ನಮಗೆ ಈ ದಾಖಲೆ, ನೋಂದಣಿಗಳ ಪರಿಚಯವಿಲ್ಲ. ಇದ್ದಕ್ಕಿದ್ದ ಹಾಗೆ ಈಗ ನಮ್ಮನ್ನು ಭಾರತದ ಪ್ರಜೆಗಳೇ ಅಲ್ಲ ಎಂದು ಹೇಳಲಾಗುತ್ತಿದೆ. ನನಗೀಗ 33 ವರ್ಷ. ನನ್ನ ತಂದೆ ಭಾರತದ ಪ್ರಜೆಯಾಗಿದ್ದು, ನಾನು ಭಾರತದ ಪ್ರಜೆ ಅಲ್ಲ ಎಂದು ಹೇಳಲಾಗುತ್ತಿದೆ. ಇದು ಯಾವ ನ್ಯಾಯ ಎಂದು ದುಬ್ರಿ ಪಟ್ಟಣದ ರಿಯಾಜ್‍ಉಲ್ಲಾ ಇಸ್ಲಾಂ ಅಳಲು ತೋಡಿಕೊಂಡಿದ್ದಾರೆ.

ಇನ್ನೂ ಕೆಲವರ ಬಳಿ ದಾಖಲೆಗಳಿವೆ. ಆದರೆ, ಅವುಗಳಲ್ಲಿ ಹೆಸರು, ಅಂಕಿ-ಅಂಶಗಳು ತಪ್ಪಿವೆ. ಅಂತಹ ಸುಮಾರು 12ಕ್ಕೂ ಹೆಚ್ಚು ಪ್ರಕರಣಗಳು ಅಸ್ಸೋಂ ಅಕ್ರಮ ವಲಸೆಯ ವಿದೇಶಿ ನ್ಯಾಯಾಧೀಕರಣದಲ್ಲಿ ದಾಖಲಾಗಿವೆ. ಅನಕ್ಷರಸ್ಥರು ತಮ್ಮ ದಾಖಲೆಗಳಲ್ಲಾಗಿರುವ ತಪ್ಪುಗಳನ್ನು ಗುರುತಿಸುವುದು ಕಷ್ಟ. ಬಹಳ ದಿನಗಳ ನಂತರ ಈಗ ಎಲ್ಲವೂ ಪರಿಶೀಲನೆಗೆ ಒಳಪಡುತ್ತಿದ್ದು, ನೈಜ ವಾಸಿಗಳನ್ನು ಅಕ್ರಮ ವಲಸಿಗರು ಎಂದು ಭಾವಿಸಲಾಗುತ್ತಿದೆ ಎಂದು ವಕೀಲರಾದ ಅಮನ್‍ವಾಡೂಡ್ ಹೇಳಿದ್ದಾರೆ.

ಬಾಂಗ್ಲಾದಿಂದ ವಲಸೆ ಬಂದ ನಾಗರಿಕರು ಅಸ್ಸೋಂನ ಸ್ಥಳೀಯ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ನಷ್ಟವಾಗುತ್ತಿದೆ. ಆಚಾರ, ವಿಚಾರ, ಸಂಸ್ಕøತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಅಸ್ಸೋಂನ ಬಿಜೆಪಿ ಘಟಕ ಅಸಮಾಧಾನ ವ್ಯಕ್ತಪಡಿಸಿದ್ದು, ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ವೇಳೆ ಧರ್ಮ ಪ್ರಮುಖ ವಿಷಯವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Facebook Comments

Sri Raghav

Admin