ಇಮ್ರಾನ್ ಖಾನ್’ಗೆ 176 ಸದಸ್ಯರ ಬೆಂಬಲ, ಪ್ರಧಾನಿಯಾಗಿ ನಾಳೆ ಪ್ರಮಾಣವಚನ

ಈ ಸುದ್ದಿಯನ್ನು ಶೇರ್ ಮಾಡಿ

Imran-Khan--01

ಕ್ರಿಕೆಟಿಗ ಮತ್ತು ರಾಜಕಾರಿಣಿ 65 ವರ್ಷದ ಇಮ್ರಾನ್ ಖಾನ್  ಅವರು ಪಾಕಿಸ್ತಾನದ ನೂತನ ಪ್ರಧಾನಿಯಾಗುವುದು ಖಚಿತವಾಗಿದೆ. ಇಂದು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆದ ವೋಟಿಂಗ್ ನಲ್ಲಿ ಇಮ್ರಾನ್ ಖಾನ್ ಅವರಿಗೆ 176 ಸದಸ್ಯರ ಬೆಂಬಲ ಸಿಕ್ಕಿದೆ. ಇನ್ನು ಎದುರಾಳಿ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ ( ಪಿಎಂಎಲ್-ಎನ್ ) ಪಕ್ಷದ ಅಧ್ಯಕ್ಷ ಶೆಹಬಾಜ್ ಷರೀಫ್ ಅವರಿಗೆ 96 ಸದಸ್ಯರ ಬೆಂಬಲ ಸಿಕ್ಕಿತು. ನಾಳೆ (ಆಗಸ್ಟ್18) ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Facebook Comments