ಬಾಲಿಕಾಶ್ರಮ ಲೈಂಗಿಕ ದುರಾಚರ ಪ್ರಕರಣದಲ್ಲಿ ಮಾಜಿ ಸಚಿವೆ ಮನೆ ಮೇಲೆ ಸಿಬಿಐ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Manju-Varma--01

ನವದೆಹಲಿ, ಆ.17- ದೇಶವನ್ನು ಬೆಚ್ಚಿ ಬೀಳಿಸಿದ್ದ ಬಿಹಾರದ ಮುಜಾಫರ್‍ಪುರ್ ಬಾಲಿಕಾಶ್ರಮದಲ್ಲಿ ನಡೆದ ಲೈಂಗಿಕ ದುರಾಚಾರ ಪ್ರಕರಣಗಳ ಸಂಬಂಧ ತನಿಖೆ ತೀವ್ರಗೊಳಿಸಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳು ಇಂದು ಮುಂಜಾನೆ ಸಮಾಜ ಕಲ್ಯಾಣ ಖಾತೆ ಮಾಜಿ ಸಚಿವೆ ಮಂಜು ವರ್ಮ ಅವರ ಮನೆ ಸೇರಿದಂತೆ ಐದು ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.

ಬಾಲಿಕಾಶ್ರಮದಲ್ಲಿ ಸುಮಾರು 30 ಬಾಲಕಿಯರು ಮತ್ತು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಶೋಷಣೆ ಮತ್ತು ಅತ್ಯಾಚಾರ ನಡೆಸಲಾಗಿತ್ತು ಎಂಬ ವ್ಯಾಪಕ ಆರೋಪ ಮತ್ತು ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅವರು ಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈ ಐದು ಸ್ಥಳಗಳೊಂದಿಗೆ ಸಿಬಿಐ ಅಧಿಕಾರಿಗಳು, ಎನ್‍ಜಿಒ ಮಾಲೀಕ ಬ್ರಜೇಶ್ ಠಾಕೂರ್, ಆತನ ಗೆಳೆಯರು ಮತ್ತು ಸಂಬಂಧಿಕರ ಮನೆ ಮತ್ತು ಕಚೇರಿಗಳೂ ಒಳಗೊಂಡ ಏಳು ಸ್ಥಳಗಳಲ್ಲಿ ರೇಡ್ ಮಾಡಿದ್ದಾರೆ.

ಪಾಟ್ನಾ, ಮೋತಿಹಾರಿ ಮತ್ತು ಭಗಲ್ಪುರ್‍ನಲ್ಲಿರುವ ಮಾಜಿ ಸಚಿವೆ ಮಂಜು ವರ್ಮ ಅವರಿಗೆ ಸೇರಿದ ಮೂರು ನಿವಾಸಗಳೂ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಸಿಬಿಐ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂದು ಮುಂಜಾನೆಯಿಂದ ಸಚಿವರ ಮನೆಗಳು ಮತ್ತು ನಿವಾಸಗಳೂ ಸೇರಿದಂತೆ ಒಟ್ಟು 12 ಸ್ಥಳಗಳ ಮೇಲೆ ದಾಳಿ ನಡೆಸಿದ ಸಿಬಿಐ ಕೆಲವೊಂದು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ತನಿಖೆ ತೀವ್ರಗೊಳಿಸಿದೆ.

Facebook Comments

Sri Raghav

Admin