ಮಳೆ ನೆಪವೊಡ್ಡಿ ಶಾಲೆಗೆ ರಜೆ ನೀಡಿದ ಶಿಕ್ಷಕನಿಗೆ ನೋಟೀಸ್..!

ಈ ಸುದ್ದಿಯನ್ನು ಶೇರ್ ಮಾಡಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಿರಿಯಾಪಟ್ಟಣ, ಆ.17- ತಾಲೂಕಿನಾದ್ಯಂತ ಎಡೆಬಿಡದೆ ಸುರಿಯುತ್ತಿದ್ದ ಮಳೆ ನೆಪವೊಡ್ಡಿ ಮೇಲಧಿಕಾರಿಗಳಿಂದ ಮಾಹಿತಿ ಪಡೆಯದೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಮೇಸೇಜ್ ಮಾಡಿದ ಶಿಕ್ಷಕನಿಗೆ ಬಿಇಒ ನೋಟೀಸ್ ಜಾರಿ ಮಾಡಿರುವ ಘಟನೆ ನಡೆದಿದೆ.

ತಾಲೂಕಿನಲ್ಲಿ ಅತಿಯಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸುವ ಸಾಧ್ಯತೆ ಹೆಚ್ಚಿತ್ತು. ಅದರಲ್ಲಿಯೂ ನಿನ್ನೆ ಬೆಳಿಗ್ಗೆಯಿಂದಲೆ ಸತತ ಮಳೆ ಸುರಿಯುತ್ತಿತ್ತು. ಈ ಬಗ್ಗೆ ಚರ್ಚೆ ನಡೆಸಿ ಬಿಇಒ ನೆರೆ ಹಾವಳಿ ಇರುವ ಹಾರನಹಳ್ಳಿ ಹೋಬಳಿಯ ಶಾಲೆಗಳಿಗೆ ತಹಸೀಲ್ದಾರ್‍ಗೆ ಮಾಹಿತಿ ನೀಡಿ ರಜೆ ಘೋಷಣೆ ಮಾಡಿದ್ದರು. ಆದರೆ ಇತ್ತ ಏಕಾಏಕಿ ಶಾಸಕರ ಆದೇಶದ ಮೇರೆಗೆ ತಾಲೂಕಿನಾದ್ಯಂತ ಶಾಲೆಗಳಿಗೆ ರಜೆ ಘೋಷಣೆಯಾಗಿದೆ ಎಂದು ಮಾಹಿತಿ ರವಾನಿಸಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೂರ್ತಿಗೆ ಬಿಇಒ ನೊಟೀಸ್ ಜಾರಿಮಾಡಿದ್ಧಾರೆ. ಈ ಹಿಂದೆ ಜೂನ್ 17ರಲಿಯೂ ಇದೇ ರೀತಿ ವಾಟ್ಸ್ ಅಪ್‍ನಲ್ಲಿ ಮೇಸೇಜ್ ಹಾಕಿ ಗೊಂದಲ ಉಂಟು ಮಾಡಿದ್ದ ಇವರು ಮೇಲಧಿಕಾರಿಗಳು ಘೋಷಣೆ ಮಾಡದೆ ಏಕಾಏಕಿ ರಜೆ ಘೋಷಣೆ ಬಗ್ಗೆ ಮಾಹಿತಿ ರವಾನಿಸಿರುವುದಕ್ಕೆ ಕಾರಣ ಕೇಳಿ ನೋಟೀಸ್ ಜಾರಿಮಾಡಿದ್ದಾರೆ.

ರಜೆ ಗೊಂದಲ:
ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಹಕ್ಕು ಜಿಲ್ಲಾಧಿಕಾರಿ ಮತ್ತು ಉಪನಿರ್ದೇಶಕರಿಗೆ ಇದ್ದು ಮಳೆ ಮತ್ತಿತರರ ಸಂದರ್ಭದಲ್ಲಿ ತಹಸೀಲ್ದಾರ್‍ಗೆ ಬಿಇಒ ವರದಿ ನೀಡಿ ನಂತರ ಜಿಲ್ಲಾಧಿಕಾರಿ ಮತ್ತು ಉಪನಿರ್ದೇಶಕರ ಸೂಚನೆಯ ಮೇರೆಗೆ ಬಿಇಒ ರಜೆಯನ್ನು ಅಧಿಕೃತವಾಗಿ ಘೋಷಿಸಬೇಕು. ಆದರೆ ಶಾಸಕರು ಆದೇಶ ಮಾಡಿದ್ದಾರೆ ರಜೆ ನೀಡಿದ್ದಾರೆ ಎಂಬ ಗೊಂದಲ ಮೂಡಿಸಿ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದ್ದಾರೆ.

Facebook Comments

Sri Raghav

Admin