ಪೆಟ್ರೋಲ್ ಹಾಕಿಸುವ ನೆಪದಲ್ಲಿ ಬಂದು ಬಂಕ್‍’ನಲ್ಲಿ 1.20 ಲಕ್ಷ ರೂ ದರೋಡೆ

ಈ ಸುದ್ದಿಯನ್ನು ಶೇರ್ ಮಾಡಿ

Petrol-Bunk--01

ತುಮಕೂರು,ಆ.18- ಡೀಸೆಲ್ ಹಾಕಿಸುವ ನೆಪದಲ್ಲಿ ಪೆಟ್ರೋಲ್ ಬಂಕ್‍ಗೆ ಕಾರಿನಲ್ಲಿ ಬಂದ ಆರು ಮಂದಿ ಡಕಾಯಿತರ ತಂಡ ನೌಕರರ ಮೇಲೆ ಹಲ್ಲೆ ನಡೆಸಿ ಸುಮಾರು 1.20 ಲಕ್ಷ ರೂ. ಕಸಿದುಕೊಂಡು ಪರಾರಿಯಾಗಿರುವ ಘಟನೆ ಇಂದು ಬೆಳಗಿನ ಜಾವ ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 48ರ ವಿಆರ್‍ಎಲ್ ಹೋಟೆಲ್ ಸಮೀಪದ ಸ್ಟಾರ್ ಪೆಟ್ರೋಲ್ ಬಂಕ್‍ಗೆ ಇಂದು ಬೆಳಗಿನ ಜಾವ 3.45ರಲ್ಲಿ ಡೀಸೆಲ್ ಹಾಕಿಸುವ ನೆಪದಲ್ಲಿ ಕಾರಿನಲ್ಲಿ ಆರು ಮಂದಿ ಬಂದಿದ್ದಾರೆ.  ಇವರ ಪೈಕಿ ಮೂವರು ಕಾರಿನಿಂದ ಕೆಳಗಿಳಿದು ಪೆಟ್ರೋಲ್ ಬಂಕ್ ಸುತ್ತಮುತ್ತ ಓಡಾಡಿ ಸಿಸಿಟಿವಿಯನ್ನು ಗಮನಿಸಿ ಯಾರಾದರೂ ಇತ್ತ ಬರುತ್ತಾರೆಯೇ ಎಂದು ಅಲ್ಲೇ ನಿಂತಿದ್ದಾರೆ.

ಕಾರಿನ ಬಳಿ ಇದ್ದ ಮೂವರು ಏಕಾಏಕಿ ಪೆಟ್ರೋಲ್ ಬಂಕ್‍ನ ನೌಕರರಾದ ದಾನಪ್ಪ, ರಜನೀಕಾಂತ್, ರಂಗಸ್ವಾಮಿ, ಮಾಂತೇಶ್ ಸೇರಿದಂತೆ ಇನ್ನಿಬ್ಬರ ಮೇಲೆ ಏಕಾಏಕಿ ಕೈ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದಾಗ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದಂತೆ ಅವರ ಬಳಿ ಇದ್ದ ಸುಮಾರು 1.20 ಲಕ್ಷ ಹಣವನ್ನು ಕಸಿದುಕೊಂಡು ಆರು ಮಂದಿ ಡಕಾಯಿತರು ಪರಾರಿಯಾಗಿದ್ದಾರೆ.

ಹಲ್ಲೆಯಿಂದ ಇಬ್ಬರು ನೌಕರರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.   ಈ ಬಗ್ಗೆ ಪೆಟ್ರೋಲ್ ಬಂಕ್‍ನ ನೌಕರ ದಾನಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.

Facebook Comments

Sri Raghav

Admin