ಒಂಟಿ ವಯೋವೃದ್ಧರ ಮನೆಗಳನ್ನೇ ಟಾರ್ಗೆಟ್ ಮಾಡಿ ದೋಚುತ್ತಿದ್ದ 14 ದರೋಡೆಕೋರರ ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

robbad

ಬೆಂಗಳೂರು, ಆ.18-ಈಶಾನ್ಯ ವಿಭಾಗದ ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 14 ಮಂದಿ ಕನ್ನಗಳವು, ಸುಲಿಗೆಕೋರರನ್ನು ಬಂಧಿಸಿ ಸುಮಾರು 75 ಲಕ್ಷ ರೂ. ಮೌಲ್ಯದ 2.25 ಕೆಜಿ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

# ವಿದ್ಯಾರಣ್ಯಪುರ
ಒಂಟಿಯಾಗಿ ವಾಸಿಸುವ ವಯೋವೃದ್ಧರ ಮನೆಗಳಿಗೆ ನುಗ್ಗಿ ಚಿನ್ನದ ಆಭರಣ ಮತ್ತು ಹಣವನ್ನು ದರೋಡೆ ಮಾಡುತ್ತಿದ್ದ ಐವರು ದರೋಡೆಕೋರರನ್ನು ಬಂಧಿಸಿರುವ ವಿದ್ಯಾರಣ್ಯಪುರ ಪೊ ಲೀಸರು, 25 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯ ಪಿ.ನಾಗೇನಹಳ್ಳಿ ಗ್ರಾಮದ ನಿವಾಸಿ ಎನ್.ವೈ. ನಾಗರಾಜ್ (30), ಅದೇ ಗ್ರಾಮದ ರವಿಕುಮಾರ್ (24), ಗೌರಿಬಿದನೂರಿನ ತೊಂಡೆಬಾವಿ ಹೋಬಳಿಯ ಬಸವನಹಳ್ಳಿ ಗ್ರಾಮದ ನಿವಾಸಿಗಳಾದ ಗಂಗಾಧರ್ (45), ಬಸವರಾಜ್ (19), ಗೌರಿಬಿದನೂರು ತಾಲೂಕಿನ ಪಿ.ನಾಗೇನಹಳ್ಳಿಯ ಗಂಗರಾಜ್ (25) ಬಂಧಿತ ಆರೋಪಿಗಳು. ವಿದ್ಯಾರಣ್ಯಪುರದ ದೇಶಬಂಧು ನಗರದಲ್ಲಿ ವಾಸವಾಗಿದ್ದ ಸುಮಾರು 85 ವರ್ಷ ವಯಸ್ಸಿನ ಇಲಾ ಚಂದ್ರಶೇಖರ್ ಅವರ ಮನೆಗೆ ನುಗ್ಗಿ ದರೋಡೆ ಮಾಡಿದ್ದರು. ಮಾತ್ರವಲ್ಲ ಯಲಹಂಕ ಪೊ ಲೀಸ್ ಠಾಣಾ ವ್ಯಾಪ್ತಿಯ ನ್ಯಾಯಾಂಗ ಬಡಾವಣೆಯಲ್ಲಿಯೂ ದರೋಡೆ ಮಾಡಿದ್ದರು.
ಪೂರ್ವ ವಿಭಾಗದ ಅಪರ ಪೊ ಲೀಸ್ ಆಯುಕ್ತ ಸೀಮಂತ್ ಕುಮಾರ ಸಿಂಗ್ ಅವರ ಮಾರ್ಗದರ್ಶನದಲ್ಲಿ ಉಪ ಪೊ ಲೀಸ್ ಆಯುಕ್ತ ಕಲಾ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಯಲಹಂಕ ಎಸಿಪಿ ಪ್ರಭಾಕರ್ ಬಿ.ಭಾರ್ಕಿ ಹಾಗೂ ಇನ್ಸ್‍ಪೆಕ್ಟರ್ ಬಿ.ರಾಮಮೂರ್ತಿ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

# ಮನೆಗಳ್ಳನ ಬಂಧನ
ಮನೆ ಕಳವು ಮಾಡುತ್ತಿದ್ದ ಕುಖ್ಯಾತ ಮನೆಗಳ್ಳನೊಬ್ಬನನ್ನು ಬಂಧಿಸಿರುವ ವಿದ್ಯಾರಣ್ಯಪುರ ಠಾಣೆ ಪೊ ಲೀಸರು, 1 ಕೆ.ಜಿ.ತೂಕದ 30 ಲಕ್ಷ ರೂ.ಬೆಲೆಬಾಳುವ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಹೆಣ್ಣೂರು ಕ್ರಾಸ್, ಕಲ್ಯಾಣನಗರದ ಪ್ರಕೃತಿ ಲೇಔಟ್‍ನ ಅಣ್ಣೇಶ್ವರಿ ಶಾಲೆ ಬಳಿಯ ನಿವಾಸಿ ಕಾರ್ತಿಕ್ ಕುಮಾರ್ (28) ಬಂಧಿತ ಆರೋಪಿ. ಈತನ ಬಂಧನದಿಂದ ವಿದ್ಯಾರಣ್ಯಪುರ 2, ಯಲಹಂಕ, ಅಮೃತಹಳ್ಳಿ, ಆರ್.ಟಿ.ನಗರ ತಲಾ ಒಂದು ಹಾಗೂ ಕೊಡಿಗೆಹಳ್ಳಿಯ ಮೂರು ಸೇರಿ ಒಟ್ಟು 8 ಮನೆಗಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಯಿಂದ ಸುಮಾರು 1 ಕೆಜಿ ತೂಕದ 30 ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಸಿಂಗಾಪುರ ಹಾಗೂ ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಮನೆಗಳವು ಮಾಡುತ್ತಿದ್ದ ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

# 6 ಲಕ್ಷ ರೂ.ಮಾಲು ವಶ
ಮನೆಗಳವು ಆರೋಪದಲ್ಲಿ ಜಗದೀಶ್ ಕುಮಾರ್ ಎಂಬಾತನನ್ನು ಬಂಧಿಸಿರುವ ವಿದ್ಯಾರಣ್ಯಪುರ ಠಾಣೆ ಪೊ ಲೀಸರು, 200 ಗ್ರಾಂ ತೂಕದ 6 ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಮಾದನಾಯಕನಹಳ್ಳಿಯ ಸರ್ಕಾರಿ ಸೈಟ್ ಜನತಾ ಕಾಲೋನಿ ನಿವಾಸಿಯಾಗಿರುವ ಜಗದೀಶ್ ಕುಮಾರ್ ಮೂಲತಃ ರಾಮನಗರ ಜಿಲ್ಲೆಯ ಮಾಗಡಿಯ ಸಿದ್ದಾಪುರ ಗ್ರಾಮದವನು. ಈತ ವಿದ್ಯಾರಣ್ಯಪುರ, ದೇವರಜೀವನಹಳ್ಳಿ ಠಾಣಾ ವ್ಯಾಪ್ತಿಗಳಲ್ಲಿ ಮನೆಗಳವು ಮಾಡುತ್ತಿದ್ದ. ಖಚಿತ ಮಾಹಿತಿ ಆಧಾರದಲ್ಲಿ ದಾಳಿ ನಡೆಸಿದ ಪೊಲೀಸರು ಈತನನ್ನು ಬಂಧಿಸಿ ಆರು ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

Facebook Comments

Sri Raghav

Admin