ವರನನ್ನು ಸೇರಲು ಈ ಸಾಹಸಿ ವಧು ತೆಗೆದುಕೊಂಡ ರಿಸ್ಕ್ ಎಂಥದ್ದು ಗೊತ್ತೇ..!?

ಈ ಸುದ್ದಿಯನ್ನು ಶೇರ್ ಮಾಡಿ

Moyar--01

ಎರೋಡ್(ತ.ನಾ.) (ಪಿಟಿಐ), ಆ.18-ಸಿನಿಮೀಯ ಸಾಹಸವೊಂದು ತಮಿಳುನಾಡಿನ ಎರೋಡ್ ಜಿಲ್ಲೆಯಲ್ಲಿ ನಡೆದಿದೆ. ಭೋರ್ಗರೆಯುತ್ತಿದ್ದ ಅಪಾಯಕಾರಿ ಪ್ರವಾಹ ಲೆಕ್ಕಿಸದೇ 24 ವರ್ಷದ ನೀಲಗಿರಿ ಯುವತಿಯೊಬ್ಬಳು ತನ್ನ ಕುಟುಂಬದ ಸದಸ್ಯರೊಂದಿಗೆ ಹರಿಗೋಲು ಸಹಾಯದಿಂದ ಮೊಯಾರ್ ನದಿ ದಾಟಿ ತನ್ನ ಮದುವೆಗೆ ನಿಗದಿಯಾಗಿದ್ದ ಸ್ಥಳವನ್ನು ಸೇರಿದ ರೋಚಕ ಸಾಹಸ ಇದು.

ನೀಲಗಿರಿ ಜಿಲ್ಲೆಯ ಪರ್ವತದ ಇಳಿ ಜಾರಿನಲ್ಲಿರುವ ಥೆಂಗುಮರಹಡ ಎಂಬ ಪುಟ್ಟ ಹಳ್ಳಿ ಇದೆ. ಇದು ಸತ್ಯಮಂಗಲ ಹುಲಿ ಅಭಯಾರಣ್ಯದ ದಟ್ಟ ಕಾನನ. ಈ ತಾಂಡಾದ ರಸತಿ ಎಂಬ ಯುವತಿಯ ವಿವಾಹ ಪಕ್ಕದ ಗ್ರಾಮದ ಯುವಕನ ಜೊತೆ ಆ.20ರಂದು ನಿಶ್ಚಯವಾಗಿದೆ. ಆದರೆ ಅಲ್ಲಿಗೆ ಹೋಗಬೇಕಾದರೆ ಭವಾನಿ ನದಿಯ ಮೊಯಾರ್ ಉಪನದಿ ದಾಟಬೇಕು. ಆದರೆ ಭಾರೀ ಮಳೆಯಿಂದ ಈ ಉಪನದಿ ಅಪಾಯ ಮಟ್ಟ ಮೀರಿ ಪ್ರವಾಹದಿಂದ ಭೋರ್ಗರೆಯುತ್ತಿದೆ. ಅಲ್ಲಿಗೆ ಹೋಗಲು ಅನ್ಯ ಮಾರ್ಗವಿಲ್ಲ. ಸೇತುವೆಯಂತೂ ಇಲ್ಲವೇ ಇಲ್ಲ.

ಆದರೆ, ಇಂಥ ಸನ್ನಿವೇಶದಲ್ಲಿ ಮದುವೆ ತಪ್ಪಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ರಸತಿ ಕುಟುಂಬದ ಸದಸ್ಯರು ಅರಣ್ಯ ಸಿಬ್ಬಂದಿಯ ಎಚ್ಚರಿಕೆಯನ್ನೂ ಲೆಕ್ಕಿಸದೇ ಉಕ್ಕಿ ಹರಿಯುತ್ತಿದ್ದ ನದಿಯನ್ನು ಎರಡು ಹರಿಗೋಲುಗಳ ಮೂಲಕ ಯಶಸ್ವಿಯಾಗಿ ದಾಟಿಕೊಂಡುಬಿಟ್ಟರು. ಒಂದು ಹಂತದಲ್ಲಿ ಪ್ರವಾಹ ಮತ್ತು ಗಾಳಿಯಿಂದ ಎರಡು ದೋಣಿಗಳು ಮುಳುಗುವ ಆತಂಕವಿದ್ದರೂ ದೃತಿಗೆಡದೇ ದಡ ತಲುಪಿ ವಧುವಿನ ಕುಟುಂಬ ವರನ ಮನೆಯನ್ನು ಸೇರಿತು. ವಧು ಮತ್ತು ಆಕೆಯ ಕುಟುಂಬದ ಸಾಹಸಕ್ಕೆ ಗ್ರಾಮಸ್ಥರೂ ಅಚ್ಚರಿ ವ್ಯಕ್ತಪಡಿಸಿದರೂ, ಸಂಭವನೀಯ ಅಪಾಯವನ್ನು ಎದುರಿಸಬೇಕಾದ ಬಗ್ಗೆ ವಿಷಾದಿಸಿದ್ದಾರೆ.

Facebook Comments

Sri Raghav

Admin