ಭಾರಿ ಮಳೆಗೆ ತತ್ತರಿಸಿದ ಕೊಳ್ಳೇಗಾಲ : ಜನಜೀವನ ಅಲ್ಲೋಲ ಕಲ್ಲೋಲ..!

ಈ ಸುದ್ದಿಯನ್ನು ಶೇರ್ ಮಾಡಿ

rain-in-Kollegala

ಕೊಳ್ಳೇಗಾಲ, ಆ.18- ಕಳೆದ ಒಂದು ತಿಂಗಳಿನಿಂದ ಪ್ರವಾಹದ ಭೀತಿಗೆ ತತ್ತರಿಸಿ ಹೋಗಿರುವ ತಾಲ್ಲೋಕಿನ ನದಿ ತೀರದ ಗ್ರಾಮಗಳಲ್ಲಿ ಜಿಲ್ಲಾಡಳಿತ ಗಂಜಿ ಕೇಂದ್ರ ತೆರೆಯುತ್ತೆವೆ ಸಕಲ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಹೇಳುತ್ತಿದೆಯೇ ಹೊರತು ಇದುವರೆಗೂ ತೆರೆದಿರಲಿಲ್ಲ. ಆದರೆ, ಕೊನೆಗೂ ಜಿಲ್ಲಾಡಳಿತ ನಿನ್ನೆಯಿಂದ ಹಳೇ ಹಂಪಾಪುರ ಗ್ರಾಮದಲ್ಲಿ ಒಂದುಗಂಜಿ ಕೇಂದ್ರ ತೆರೆದಿದೆ. ಆದರೆ, ಗಂಜಿ ಕೇಂದ್ರದಿಂದ ಸಂತ್ರಸ್ಥರಿಗೆ ಏನು ಪ್ರಯೋಜನವಿಲ್ಲ. ಕೇವಲ ಸಲ್ಪ ಜನರಿಗೆ ಮಾತ್ರ ಅಡಿಗೆ ಮಾಡಿಸಲಾಗುತ್ತದೆ. ಆದರೆ,ಅದು ಸಣ್ಣ ಪುಟ್ಟ – ಮಕ್ಕಳಿಗೆ ಸಾಲುವುದಿಲ್ಲ ಎಂದು ಸಂತ್ರಸ್ಥರು ಅಳಲು ತೋಡಿ ಕೊಂಡಿದ್ದಾರೆ.
ಈ ಗ್ರಾಮಗಳ ಜನತೆ ಕಳೆದ ಒಂದು ತಿಂಗಳಿನಿಂದ ಪ್ರವಾಹದ ಭೀತಿ ಎದುರಿಸುತ್ತಿದ್ದು ಕೆಲಸ -ಕೂಲಿ ಇಲ್ಲದೆ ಜೀವನ ನಿರ್ವಹಣೆ ದುಸ್ತರವಾಗಿ ಜನ ಜೀವನ ಅಸ್ತ- ವ್ಯಸ್ತವಾಗಿದೆ.

ಕಳೆದ ಒಂದು ತಿಂಗಳಿನಿಂದ ನದಿಯಲ್ಲಿ ಪ್ರವಾಹದ ಮಟ್ಟ ಹೆಚ್ಚಾಗಿ ನೀರು ಗ್ರಾಮಗಳನ್ನು ಸುತ್ತುವರೆದು ಆತಂಕ ಎದುರಾಗುತ್ತಿದಂತೆ. ಬುಧವಾರ ಸಂಜೆ ತಾಲ್ಲೋಕಿನ ಹಳೇ ಹಪಾಪುರ, ದಾಸನಪುರ, ಹಾಗೂ ಯಡಕುರಿಯಾ ಗ್ರಾಮಗಳಿಗೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅಧಿಕಾರಿಗಳೊಡನೆ ಭೇಟಿ ಪರಿಶೀಲನೆ ನಡೆಸಿದರು. ಬಹುತೇಕ ಕೃಷಿಯನ್ನೇ ನಂಬಿ ಬದುಕುವ ಈ ಗ್ರಾಮಗಳ ಜನತೆಯ ಜಮೀನುಗಳು ಪ್ರವಾಹದಲ್ಲಿ ಮುಳುಗಡೆಯಾಗಿವೆ. ಇದರಿಂದ ಜನ ನಿರಂತರವಾಗಿ ಕೆಲಸ – ಕೂಲಿ ಇಲ್ಲದೆ ಜನ ಮನೆಗಳಲ್ಲೆ ಕುಳಿತಿದ್ದಾರೆ. ತಿಂಗಳಿನಿಂದ ಕೆಲಸ ಕೂಲಿ ಇಲ್ಲದೆ ಸಂಕಷ್ಟದಲ್ಲಿ ಸಿಲುಕಿರುವ ಜನ ಜೀವನ ನಿರ್ವಹಣೆ ಹೇಗೆ ಎಂಬ ಚಿಂತೆಗೆ ಬಿದ್ದು ಕಂಗಾಲಾಗಿದ್ದಾರೆ.

ಗ್ರಾಮಸ್ಥರ ಮೊರೆಗೆ ಒಗೊಟ್ಟ ಜಿಲ್ಲಾಧಿಕಾರಿಗಳು ಪರಿಹಾರ ಒದಗಿಸಿ ಕೊಡುವ ಭರವಶೆ ನೀಡಿದರು. ಒಂದು ವೇಳೆ ಪ್ರವಾಹದ ತೀವ್ರತೆ ಹೆಚ್ಚಾಗಿ ಅಂತಹ ಪರಿಸ್ಥಿತಿ ಎದುರಾದರೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದ್ದು ಈಗಾಗಲೆ ಕಟ್ಟೆಚ್ಚರ ವಹಿಸಿದೆ.  ಪರಿಸ್ಥಿತಿಗೆ ತಕ್ಕಂತೆ ಅಗತ್ಯ ಕ್ರಮ ವಹಿಸಲಿದೆ. ಆಗಾಗಿ ತೀರದ ಗ್ರಾಮಗಳ ಜನರು ಯಾವುದೇ ಕ್ಷಣದಲ್ಲಾದರು ಸ್ಥಳಾಂತರಗೊಳ್ಳಲು ಸಿದ್ದರಿರಬೇಕು. ಅಧಿಕಾರಿಗಳು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹೇಳಿದ್ದರು.  ಉಪ ವಿಭಾಗಾಧಿಕಾರಿ ಪೌಜಿಯಾ ತರುನ್ನಮï ರವರಿಗೆ ಈ ಬಗ್ಗೆ ಕಟ್ಟೆಚ್ಚರ ವಹಿಸಲು ಅಗತ್ಯ ಬಿದ್ದರೆ ಗಂಜಿ ಕೇಂದ್ರ ತೆರೆಯಲು ಸಿದ್ದತೆ ಮಾಡಿಕೊಳ್ಳಲು ಸೂಚಿಸಿದರು.

ಸಚಿವರಾದ ಪುಟ್ಟರಂಗಶೆಟ್ಟಿ ಹಾಗೂ ಸಾ.ರಾ.ಮಹೇಶ್ ಅವರು ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ್ದರು. ಸಚಿವರ ಮುಂದೆಯ ಜನ ಇದೇ ಬೇಡಿಕೆ ಇಟ್ಟಿದ್ದರು ಅವರು ಸಹ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು. ಜಿಲ್ಲಾಡಳಿತ ನಿನ್ನೆಯಿಂದ ಹಳೇ ಹಂಪಾಪುರ ಗ್ರಾಮದಲ್ಲಿ ಒಂದು ಗಂಜಿ ಕೇಂದ್ರ ತೆರೆದಿದೆ ಆದರೆ ಗಂಜಿ ಕೇಂದ್ರದಿಂದ ಸಂತ್ರಸ್ಥರಿಗೆ ಏನು ಪ್ರಯೋಜನವಿಲ್ಲ.  ಕೇವಲ ಸ್ವಲ್ಪ ಜನರಿಗೆ ಮಾತ್ರ ಅಡಿಗೆ ಮಾಡಿಸಲಾಗುತ್ತದೆ. ಸಂಬಂಧಪಟ್ಟವರನ್ನು ಕೇಳಿದರೆ ಕೇವಲ 8-9 ಕುಟುಂಬಗಳಿಗೆ ಮಾತ್ರ ಗಂಜಿ ಕೇಂದ್ರ ತೆರೆಯಲಾಗಿದೆ. ಎಲ್ಲರೂ  ಬಂದರೆ ಎಲ್ಲಿಂದ ಕೊಡುವುದು ಎನ್ನುತ್ತಾರೆ ಎಂದು ಸಂತ್ರಸ್ಥರು ಅಳಲು ತೋಡಿಕೊಂಡಿದ್ದಾರೆ.  ಇನ್ನಾದರು ಜಿಲ್ಲಾಡಳಿತ ಬರಿ ಭರವಸೆ ನೀಡುವುದನ್ನು ಬಿಟ್ಟು ಸಂಕಷ್ಟದಲ್ಲಿರುವ ಈ ಜನರ ಕಷ್ಟಕ್ಕೆ ಪ್ರಾಮಾಣಿಕವಾಗಿ ನೆರವಾಗಬೇಕಿದೆ. ನಿರಂತರವಾಗಿ ಕೂಲಿ ಇಲ್ಲದೆ ಮನೆಗಳಲ್ಲೆ ಕುಳಿತಿರುವ ಜನರಿಗೆ ಸಹಾಯ ಹಸ್ತ ಚಾಚಬೇಕಿದೆ. ಬರಿ ಭರವಸೆ ಹೊಟ್ಟೆ ತುಂಬುವುದಿಲ್ಲ ಅಲ್ಲವೆ ?

Facebook Comments

Sri Raghav

Admin