ಇರಾಕ್ ವಾಯು ದಾಳಿಗೆ 32 ಐಎಸ್ ಉಗ್ರರು ಖತಂ

ಈ ಸುದ್ದಿಯನ್ನು ಶೇರ್ ಮಾಡಿ

Iraq

ಇರ್ಬಿಲ್, ಆ.18-ವಿಶ್ವದ ಅತ್ಯಂತ ಕ್ರೂರ ಭಯೋತ್ಪಾದನೆ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಇರಾಕ್ ಕಾರ್ಯಾಚರಣೆ ತೀವ್ರಗೊಂಡಿದೆ. ಸಿರಿಯಾದಲ್ಲಿ ಐಎಸ್ ಬಂಡುಕೋರರನ್ನು ಗುರಿಯಾಗಿಟ್ಟುಕೊಂಡು ಇರಾಕ್ ನಡೆಸಿದ ವಾಯು ದಾಳಿಯಲ್ಲಿ 32ಕ್ಕೂ ಹೆಚ್ಚು ಉಗ್ರಗಾಮಿಗಳು ಹತರಾಗಿದ್ದಾರೆ.

ಮುಂದಿನ ವಾರ ಇರಾಕ್ ಆತ್ಮಹತ್ಯಾ ದಾಳಿಗಳ ಮೂಲಕ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಿದ್ದರಾಗಿದ್ದ ಐಎಸ್ ಉಗ್ರರ ಕುತಂತ್ರ ಈ ದಾಳಿಯೊಂದಿಗೆ ಬುಡಮೇಲಾಗಿದೆ. ಮುಂದಿನ ವಾರ ಇರಾಕ್ ಮತ್ತು ಸಿರಿಯಾದಲ್ಲಿ ಈದ್ ಈದುಲ್ ಅಝ್ ಹಾ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಾನವ ಬಾಂಬ್ ದಾಳಿಗಳನ್ನು ನಡೆಸಲು ನಿರ್ಧರಿಸಿದ್ದ ಉಗ್ರರು ಇರ್ಬಿಲ್ ಪ್ರದೇಶದಲ್ಲಿ ಗೋಪ್ಯ ಸಭೈ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಎರಡು ಎಫ್-16 ಯುದ್ಧ ವಿಮಾನಗಳು ನಿಖರ ವಾಯು ದಾಳಿ ನಡೆಸಿದವು ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದರ ಹಿಂದೆ ಒಂದರಂತೆ ನಡೆದ ಎರಡು ದಾಳಿಗಳಲ್ಲಿ ಒಟ್ಟು 32 ಮಂದಿ ಭಯೋತ್ಪಾದಕರು ಹತರಾಗಿದ್ದು, ಅನೇಕರು ತೀವ್ರ ಗಾಯಗೊಂಡಿದ್ದಾರೆ. ಉಗ್ರರ ಪಾಳಯದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿರಬಹುದು ಎಂದು ಶಂಕಿಸಲಾಗಿದೆ.

Facebook Comments

Sri Raghav

Admin