ಲವ್ ಮಾಡಿ ಮದುವೆಗೆ ರೆಡಿಯಾಗಿದ್ದ ಜೋಡಿ ಜಗಳವಾಡಿಕೊಂಡು ಆತ್ಮಹತ್ಯೆಗೆ ಯತ್ನ..!

ಈ ಸುದ್ದಿಯನ್ನು ಶೇರ್ ಮಾಡಿ

Love--01

ಕೆಜಿಎಫ್, ಆ.18- ಪರಸ್ಪರ ಪ್ರೀತಿಸಿ ಮದುವೆಗೆ ಸಿದ್ದರಾಗಿದ್ದ ಯುವ ಜೋಡಿ, ಜಗಳವಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ. ಡ್ರೈವರ್ಸ್ ಲೈನಿನ ಪಾಲ್ ಸತೀಶ್‍ಕುಮಾರ್ ಮತ್ತು ಊರಿಗಾಂ ಸ್ಕೇಟಿಂಗ್ ರಿಂಗ್ ನಿವಾಸಿ ಕರಿಷ ಆತ್ಮಹತ್ಯೆಗೆ ಪ್ರಯತ್ನಿಸಿದ ಜೋಡಿ. ಇಬ್ಬರೂ ಬಹುದಿನಗಳಿಂದ ಪ್ರೀತಿಸುತ್ತಿದ್ದರು. ಮದುವೆ ಕೂಡ ಆಗಸ್ಟ್ 16 ಕ್ಕೆ ನಿಶ್ಚಯವಾಗಿತ್ತು. ಆದರೆ ಮದುವೆ ಹಿಂದಿನ ದಿನ ರಾತ್ರಿ ಹುಡುಗ ಪಾಲ್ ಸತೀಶ್‍ಕುಮಾರ್ ನಿದ್ರೆ ಮಾತ್ರೆ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ.

ಮದುವೆ ನಿಂತಿದ್ದರಿಂದ ಬೇಸತ್ತ ಕರಿಷ್ಮ ಕೂಡ ಸೀಮೆಎಣ್ಣೆ ಕುಡಿದು, ಚಾಕುವಿನಿಂದ ಗಾಯ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆಡಂಬರದ ಮದುವೆ ಇಷ್ಟವಿಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಳ್ಳಲು ಹುಡುಗ ನಿಶ್ಚಯಿಸಿದ್ದನೆಂದು ಹೇಳಲಾಗುತ್ತಿದೆ. ಆದರೆ, ಮದುವೆ ನಿಲ್ಲಿಸಲು ಉದ್ದೇಶಪೂರ್ವಕವಾಗಿಯೇ ಸತೀಶ್‍ಕುಮಾರ್ ನಿದ್ರೆ ಮಾತ್ರೆ ಸೇವಿಸಿದ್ದಾನೆ ಎಂದು ಕರಿಷ್ಮ ಆರೋಪಿಸಿದ್ದಾಳೆ. ಒಟ್ಟಾರೆ ಮದುವೆ ನಿಂತು ಹೋಗಿದೆ. ಊರಿಗಾಂ ಪೊಲೀಸರು ಎರಡೂ ಪ್ರಕರಣವನ್ನು ದಾಖಲು ಮಾಡಿದ್ದಾರೆ.

Facebook Comments

Sri Raghav

Admin