ಹೊಸ ಕಾಮಿಕ್ ಪಾತ್ರಗಳ ಸೃಷ್ಟಿಗೆ ವೇದಿಕೆಯಾದ ಕಾಮಿಕ್ ಕಾನ್‍ ಸಮಾವೇಶ..!

ಈ ಸುದ್ದಿಯನ್ನು ಶೇರ್ ಮಾಡಿ

Ds
ಕಾಮಿಕ್ ಪುಸ್ತಕಗಳು ಮತ್ತು ಅವುಗಳಲ್ಲಿನ ಪಾತ್ರಗಳನ್ನು ಮಕ್ಕಳು ಬಹುವಾಗಿ ಇಷ್ಟಪಡುತ್ತಾರೆ. ಕಾಮಿಕ್ ಪಾತ್ರಗಳು ಎಷ್ಟೋ ಹಾಲಿವುಡ್ ಸಿನಿಮಾಗಳಿಗೆ ಪ್ರೇರಣೆಯೂ ಆಗಿದೆ. ಅಮೆರಿಕದ ಸ್ಯಾನ್ ಡೀಗೋನಲ್ಲಿ ನಡೆದ ಕಾಮಿಕ್-ಕಾನ್ ಸಮಾವೇಶವೂ ಇದಕ್ಕೆ ಸ್ಫೂರ್ತಿ ನೀಡುತ್ತಿದೆ. ಬನ್ನಿ ಇಲ್ಲೊಂದು ಸುತ್ತು ಹಾಕಿ ಬರೋಣ. ಸೂಪರ್ ಹೀರೋಗಳು, ಕಾಮಿಕ್ ಪಾತ್ರಗಳು ಹಾಗೂ ಅನಿಮೀ ವೇಷಭೂಷಣಗಳಲ್ಲಿ ಕಾಣಿಸಿಕೊಳ್ಳುವ ಕ್ರೇಜ್‍ಗೆ ವೇದಿಕೆ ಕಲ್ಪಿಸುವ ಒಂದು ಸಮಾವೇಶವೇ ಕಾಮಿಕ್ ಕನ್ವೆಷನ್. ಇದು ಕಾಮಿಕ್ ಕಾನ್ ಎಂದೇ ಎಲ್ಲ ದೇಶಗಳಲ್ಲೂ ಲೋಕಪ್ರಿಯತೆ ಪಡೆಯುತ್ತಿದೆ.

Ds-1

ಅಮೆರಿಕದ ಸ್ಯಾನ್ ಡೀಗೊ ಕಾಮಿಕ್ ಕಾನ್‍ನಲ್ಲಿ ನಡೆದ ಈ ವರ್ಷದ ನಾಲ್ಕು ದಿನಗಳ ಕಾರ್ಯಕ್ರಮ ವಿಶೇಷವಾಗಿತ್ತು. ಕಾಮಿಕ್ ಪುಸ್ತಕ, ಸಿನಿಮಾ, ಅನಿಮೇಷನ್, ವಿಡಿಯೋಗೇಮ್ ಮತ್ತು ಟಿವಿ ಅಭಿಮಾನಿಗಳಲ್ಲಿ ಸಂಭ್ರಮೋಲ್ಲಾಸ ಮೂಡಿಸಿತು. ಕಾಮಿಕ್, ಸೂಪರ್ ಹೀರೋ ಮತ್ತು ಅನಿಮೀ ಅಭಿಮಾನಿಗಳು ಈ ಸಮಾವೇಶದಲ್ಲಿ ಭಾಗವಹಿಸಿದರು.  1970ರಿಂದಲೂ ಕಾಮಿಕ್ ಕಾನ್ ಸ್ಯಾನ್ ಡಿಗೋದಲ್ಲಿ ನಡೆಯುತ್ತಿದೆ. ಈ ವರ್ಷ ಸಮಾವೇಶದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಮುಂಬರುವ ಚಿತ್ರಗಳ ಸೃಷ್ಟಿಗೆ ಒಂದು ಬಹು ಮುಖ್ಯ ವೇದಿಕೆಯಾದ ಕಾಮಿಕ್ ಕಾನ್‍ನನ್ನು ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರ ಜಾಲವನ್ನು ಹೊಂದಿರುವ ಸ್ಟುಡಿಯೋಸ್ ಅಂಡ್ ಟೆಲಿವಿಷನ್ ನೆಟ್‍ವರ್ಕ್ ನಿಂದ ಆಯೋಜಿಸಲಾಗಿತ್ತು.  ತಮ್ಮ ನೆಚ್ಚಿನ ಸೂಪರ್ ಹೀರೋಗಳು, ಕಾಮಿಕ್ ಪಾತ್ರಧಾರಿಗಳು ಮತ್ತು ಭಯಾನಕ ವಿಲನ್‍ಗಳಂತೆ ವೇಷಭೂಷಣ ಧರಿಸಿದ ಅನೇಕ ಪುರುಷರು ಮತ್ತು ಮಹಿಳೆಯರು ಇಲ್ಲಿ ಗಮನಸೆಳೆದರು. ಡಿಸ್ನೆ, ಮಾರ್ವೆಲ್, ಮತ್ತು ವಾರ್ನರ್ ಬ್ರದರ್ಸ್‍ನಂಥ ವಿಶ್ವವಿಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಗಳ ಬೃಹತ್ ಮಲ್ಡಿಮೀಡಿಯಾ ಉತ್ಪನ್ನಗಳ ಪ್ರದರ್ಶನಕ್ಕೂ ಇದು ವೇದಿಕೆಯಾಗಿತ್ತು.  ಡಾಕ್ಟರ್ ಹು, ಬ್ರೇಕಿಂಗ್ ಬ್ಯಾಡ್, ಎಕ್ಸ್-ಫೈಲ್ಸ್, ದಿ ನೈಟ್ ಬೀಫೋರ್ ಕ್ರಿಸ್ಮಸ್, ಸ್ಟ್ರೇಂಜರ್ಸ್ ಇನ್ ದಿ ಪ್ಯಾರಾಡೈಸ್ ಮತ್ತು ಜುರಾಸಿಕ್ ಪಾರ್ಕ್ ಸಿನಿಮಾದ ಪ್ರತಿರೂಪಗಳು ಈ ವರ್ಷದ ವಿಶೇಷ ಆಕರ್ಷಣೆಯಾಗಿದ್ದವು.

Facebook Comments

Sri Raghav

Admin