‘ಅಮ್ಮನ ಮನೆಯಲ್ಲಿ’ ರಾಘಣ್ಣ ಪಿಟಿ ಮಾಸ್ಟರ್..!

ಈ ಸುದ್ದಿಯನ್ನು ಶೇರ್ ಮಾಡಿ

Amaana-mane-raghavendra-Raj
ಹದಿನೈದು ವರ್ಷಗಳ ನಂತರ ಮತ್ತೆ ರಾಘವೇಂದ್ರ ರಾಜ್‍ಕುಮಾರ್ ಬೆಳ್ಳಿ ಪರದೆಯ ಮೇಲೆ ಬರುತ್ತಿದ್ದು , ಅದು ಅಮ್ಮನ ಮನೆ ಚಿತ್ರದ ಮೂಲಕ. ನಿಖಿಲ್ ಮಂಜು ಅವರ ಸಾರಥ್ಯದಲ್ಲಿ ತಯಾ ರಾಗುತ್ತಿರುವ ಈ ಚಲನಚಿತ್ರದ ಮುಹೂರ್ತ ಸಮಾರಂಭ ಮೊನ್ನೆ ಬುಧವಾರ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಡಾ.ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್ ಸಹೋದರರಿಬ್ಬರೂ ಆಗಮಿಸಿ ಚಿತ್ರದ ಮೊದಲ ದೃಷ್ಯಕ್ಕೆ ಚಾಲನೆ ನೀಡಿದರು.

ಚೇಂಬರ್ ಅಧ್ಯಕ್ಷರಾದ ಚಿನ್ನೇಗೌಡರು ಹಾಗೂ ಹಿರಿಯ ನಿರ್ದೇಶಕ ಎಂ.ಎಸ್. ಸತ್ಯು ಅವರು ಕೂಡ ಆಗಮಿಸಿ ಚಿತ್ರಕ್ಕೆ ಶುಭ ಹಾರೈಸಿದರು.  ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ರಾಘವೇಂದ್ರ ರಾಜಕುಮಾರ್ ನಾನು 15 ವರ್ಷಗಳ ಬಳಿಕ ಅಭಿನಯಕ್ಕಿಳಿದಿ ದ್ದೇನೆ. ನಿರ್ದೇಶಕ ನಿಖಿಲ್ ಮಂಜು ಒಳ್ಳೆಯ ಕಥೆ ಮಾಡಿದ್ದಾರೆ, ಪಾತ್ರ ಇಷ್ಟವಾಯ್ತು ಮಾಡುತ್ತಿದ್ದೇನೆ. ಒಂದು ಒಳ್ಳೆಯ ಸಿನಿಮಾದ ಭಾಗವಾಗಿ ನಾನಿದ್ದೇನೆ. ಹಿಂದೆ ಮೊದಲ ಚಿತ್ರದ ಸಮಯದಲ್ಲಿ ಅಪ್ಪ, ಅಮ್ಮ ಇದ್ದರು. ಈಗ ಅವರಿಲ್ಲ. ಅವರನ್ನು ಈ ತಂಡದಲ್ಲಿ ನೋಡುತ್ತಿದ್ದೇನೆ. ನನ್ನನ್ನೇ ಏಕೆ ಈ ಪಾತ್ರಕ್ಕೆ ಸೆಲೆಕ್ಟ್ ಮಾಡಿದ್ದಿರಿ ಎಂದು ನಿಖಿಲ್‍ಗೆ ನಾನು ಕೇಳಿದಾಗ ಅವರು ಕಳೆದ 15 ವರ್ಷಗಳಿಂದ ನಿಮ್ಮ ಮನೆಯ ಜವಾಬ್ದಾರಿ ಹೊತ್ತು ಫ್ಯಾಮಿಲಿಯನ್ನು ತೂಗಿಸಿಕೊಂಡು ಸಹೋದರನ ಕೆರಿಯರ್ ಮತ್ತು ಮಕ್ಕಳ ಭವಿಷ್ಯವನ್ನು ನೀವು ರೂಪಿಸಿದ ಪರಿ ಇಷ್ಟವಾಯ್ತು. ನಮ್ಮ ಚಿತ್ರದಲ್ಲೂ ಅದೇ ಪಾತ್ರವಿದೆ. ಅನಾರೋಗ್ಯದಲ್ಲೂ ಬ್ಯಾಲೆನ್ಸ್ ಮಾಡುತ್ತಿರುವ ರಾಘಣ್ಣ ನಮಗೆ ಬೇಕು. ಅದಕ್ಕೇ ನೀವೇ ಈ ಪಾತ್ರವನ್ನು ಮಾಡಿದರೆ ಸರಿಯಾಗಿರುತ್ತೆ ಎಂದು ನಿರ್ಧರಿಸಿದೆವು ಎಂದು ಹೇಳಿಕೊಂಡರು. ಅವರು ಮಾಡಿದ್ದ ಸ್ಕ್ರಿಪ್ಟ್‍ನಲ್ಲಿ ನನ್ನ ತಾಯಿಯನ್ನು ಕಂಡೆ.

ಈ ಪಾತ್ರಕ್ಕೆ ನಾನು ಯಾವ ತಯಾರಿ ಮಾಡಿ ಕೊಂಡಿಲ್ಲ. ಖಾಲಿ ಹಾಳೆ ಥರ ಹೋಗ್ತಿನಿ. ನಿರ್ದೇಶಕರು ಬರೆದಂಗೆ ಬರೆಸಿಕೊಳ್ತೀನಿ. ನಾನು ಸಿನಿಮಾದಲ್ಲಿ ಇದೀನಿ ಅನ್ನೋದು ಬಿಟ್ಟರೆ, ಇದು ರಾಘವೇಂದ್ರ ರಾಜ್‍ಕುಮಾರ್ ಸಿನಿಮಾ ಅಲ್ಲ. ನಿರ್ದೇಶಕರು ಹೇಳಿದ್ದನ್ನು ಒಪ್ಪಿಸೋದಷ್ಟೇ ನನ್ನ ಕೆಲಸ. ಈ ಚಿತ್ರ ಹೇಗೆ ಬರುತ್ತೋ ಗೊತ್ತಿಲ್ಲ. ಉತ್ಸಾಹಿ ತಂಡವಿದೆ. ಈ ರೀತಿಯ ಚಿತ್ರಗಳು ಜನರಿಗೆ ತಲುಪಬೇಕೆಂಬ ಆಸೆ ನನ್ನದು ಎಂದು ಹೇಳಿದರು.

ರಾಘವೇಂದ್ರ ರಾಜ್‍ಕುಮಾರ್ ಅವರು ಈ ಚಿತ್ರದಲ್ಲಿ ಒಬ್ಬ ದೈಹಿಕ ಶಿಕ್ಷಕರಾಗಿ ಕಾಣಿಸಿಕೊಳ್ಳುತ್ತಿ ದ್ದಾರೆ. ಅವರ ತಾಯಿಯಾಗಿ ಬಿ. ಜಯಶ್ರೀ ಅವರು ಅಭಿನಯಿಸುತ್ತಿದ್ದಾರೆ. ಇದೊಂದು ತಾಯಿ ಮಗನ ನಡುವೆ ನಡೆವಂಥ ಕಥೆಯಾಗಿದೆ ಎಂದು ನಿರ್ದೇಶಕ ನಿಖಿಲ್ ಮಂಜು ಹೇಳಿದರು.  ಈ ಚಿತ್ರಕ್ಕೆ ಕುಮಾರ್ ನಿರ್ಮಾಪಕರು. ಬಹುತೇಕ ಬೆಂಗಳೂರಲ್ಲೇ ಚಿತ್ರೀಕರಣ ನಡೆಯಲಿದ್ದು, ಸೆಪ್ಟೆಂಬರ್ ಮೊದಲ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ರಾಘವೇಂದ್ರ ರಾಜ್‍ಕುಮಾರ್ ಅವರ ಹುಟ್ಟುಹಬ್ಬದಂದೇ ಚಿತ್ರ ಸೆಟ್ಟೇರಿರುವುದು ವಿಶೇಷ.

Facebook Comments

Sri Raghav

Admin