ನೆರೆಸಂತ್ರಸ್ತರಿಗೆ ಖುದ್ದಾಗಿ ಪರಿಹಾರ ಸಾಮಗ್ರಿ ಕೊಂಡೊಯ್ದ ಶೋಭಾ ಕರಂದ್ಲಾಜೆ

ಈ ಸುದ್ದಿಯನ್ನು ಶೇರ್ ಮಾಡಿ

Shobha--01

ಬೆಂಗಳೂರು. ಆ. 18 : ಔಷಧಿಗಳು,ಬಿಸ್ಕೀಟ್ ಗಳು, ಬ್ಲಾಂಕೆಟ್, ಅಕ್ಕಿ,ಸೀರೆ,ನೈಟಿಗಳು, ಸ್ಯಾನಿಟರಿ ಪ್ಯಾಡ್ ಸೇರಿದಂತೆ ಒಂದು ಲಾರಿ ಲೋಡು ಪರಿಹಾರ ಸಾಮಗ್ರಿ ಗಳನ್ನು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕು.ಶೋಭಾ ಕರಂದ್ಲಾಜೆ ಅವರು ಖುದ್ದಾಗಿ ಕೊಡಗು ಜಿಲ್ಲೆಗೆ ಒಯ್ಯುತ್ತಿದ್ದಾರೆ. ಕೊಡಗು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದು ಮನೆಗಳನ್ನು ಕಳೆದುಕೊಂಡ ಜನರಿಗೆ ಬಟ್ಟೆ, ಬ್ಲಾಂಕೆಟ್ ಮತ್ತಿತರ ಅಗತ್ಯಗಳಿವೆ ಎಂದು ತಿಳಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಅಗತ್ಯ ಸಾಮಗ್ರಿ ಗಳನ್ನು ಕಳಿಸುವ ಸಂಬಂಧ ಸಭೆ ನಡಸಲಾಗಿದೆ. ನೆರೆ ಪ್ರದೇಶಗಳ ಅಗತ್ಯ ತಿಳಿದು ಬೆಂಗಳೂರು ನಿಂದ ಸಾಮಗ್ರಿಗಳು ರವಾನಿ‌ಸಲಾಗುವುದು.

Shobha--02

ಹಾನಿಯಾದ ಉಳಿದ ಜಿಲ್ಲೆಗಳಲ್ಲೂ ಪರಿಹಾರ ಸಾಮಗ್ರಿ ಕಳಿಸಲು ಬಿಜೆಪಿ ಸಿದ್ಧವಿದೆ.ಸಾರ್ವಜನಿಕರೂ ಉದಾರ ನೆರವು ನೀಡಲು ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.. ಪಕ್ಷದ ರಾಜ್ಯ ಕಾರ್ಯಾಲಯದ ಮುಂದೆ ಸಾಮಗ್ರಿಗಳನ್ನು ಹೊತ್ತಿರುವ ಲಾರಿಗೆ ಶೋಭಾ ಕರಂದ್ಲಾಜೆ ಅವರು ಹಸಿರು ನಿಶಾನೆ ತೋರಿಸಿದರು.

Facebook Comments

Sri Raghav

Admin