ಮನೆಯೊಳಗೆ ಓಡುವ ಕುದುರೆಗಳ ಚಿತ್ರಗಳನ್ನು ಹಾಕೋದೇಕೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Horses--01

ಸಾಕಷ್ಟು ಜನರ ಮನೆಯಲ್ಲಿ ಗೋಡೆಗೆ ಕುದುರೆ ಫೋಟೋ ಮತ್ತೆ ಬಾಗಿಲಿಗೆ ಕೊದುರೆ ಲಾಳ ಹಾಕಿರ್ತಾರೆ ಆದ್ರೆ ಏಕೆ ಏನು ಎಂದು ನಾವು ಮಾಹಿತಿ ತಿಳಿಯುವುದಿಲ್ಲ ಇದರ ಬಗ್ಗೆ ಕೇಳಿದರು ಸಹ ಅವ್ರು ಸಹ ಮಾಹಿತಿ ಕೊಡೋದಿಲ್ಲ, ಶಾಸ್ತ್ರದ ಪ್ರಕಾರ ಮನೆಯಲ್ಲಿ ಓಡುತ್ತಿರುವ ಕುದುರೆ ಚಿತ್ರ ಹಾಕುವುದು. ಶುಭಕರ ಮನೆಗೆ ಬರುವ ವಿಪತ್ತನ್ನು ಇದು ತಡೆಯುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗಿದೆ. ಓಡುತ್ತಿರುವ ಕುದುರೆ ಶುಭ ಹೌದು ಆದರೆ ಅದಕ್ಕೂ ಕೆಲ ನಿಯಮಗಳಿವೆ ಯಾವಾಗ್ಲೂ ಕುದುರೆ ಸಂಖ್ಯೆ ಏಳಕ್ಕಿಂತ ಹೆಚ್ಚಿರಬಾರದು. ಇಂದ್ರ ಧನುಸ್ಸಿನ ಸಂಖ್ಯೆ ಏಳು ಇರುತ್ತದೆ ಸಪ್ತ ಋಷಿ , ಸಪ್ತಪದಿ, ಸಪ್ತ ಜನ್ಮ ಎಲ್ಲವೂ ಏಳರ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ.

ಮನೆಯೊಳಗೇ ಗೋಡೆಗಳಿಗೆ ಓದುತ್ತಿರುವ ಕುದುರೆ ಫೋಟೋ ಹಾಕುವುದು(ಫೆಂಗ್‍ಷುಯ್ ವಾಸ್ತು) ಕೂಡ ಒಂದು ವಾಸ್ತುಶಾಸ್ತ್ರ. ಓದು, ಕೆರಿಯರ್, ವೈಯಕ್ತಿಕ ಜೀವನ, ಜ್ಞಾನದಂತಹ ಎಷ್ಟೋ ಅಂಶಗಳನ್ನು ಈ ವಾಸ್ತು ಪ್ರಭಾವಿಸುತ್ತದೆ. ವ್ಯಾಪಾರವಾಗಲಿ, ಉದ್ಯೋಗವಾಗಲಿ ಅದರಲ್ಲಿ ವೃದ್ಧಿ ಸಾಧಿಸಬೇಕಾದರೆ ಈ ವಾಸ್ತು ಉಪಯೋಗಕ್ಕೆ ಬರುತ್ತದೆ. ಆದರೆ ಎಷ್ಟು ಕಷ್ಟಪಟ್ಟು ಕೆಲಸ ಮಾಡಿದಾಗ್ಯೂ ವಾಸ್ತು ಪ್ರಕಾರ ಲಕ್ ಸಹ ಕೂಡಿಬರಬೇಕು. ಆ ರೀತಿ ಕೂಡಿಬಂದರೇನೇ ಅದೃಷ್ಟ ಉಂಟಾಗುತ್ತದೆ. ಇದರಿಂದ ವ್ಯಾಪಾರವಾಗಲಿ, ಉದ್ಯೋಗವಾಗಲಿ ವೃದ್ಧಿಯಾಗುತ್ತದೆ.

Horse--02

# ಫೆಂಗ್‍ಷುಯ್ ವಾಸ್ತುಪ್ರಕಾರ ಏನು ಮಾಡಬೇಕು, ಏನು ಮಾಡಬಾರದು ..?

ಫೆಂಗ್ ಷುಯ್ ಪ್ರಕಾರ ಕುದುರೆಗಳು ಶಕ್ತಿಗೆ ನಿದರ್ಶನ. ಇವು ಪಾಸಿಟೀವ್ ಶಕ್ತಿಯನ್ನು ಕೊಡುತ್ತವೆ. ಹಾಗಾಗಿ ಕುದುವೆ ಚಿತ್ರಗಳು ಮನೆ ಅಥವಾ ಆಫೀಸಿನಲ್ಲಿ ಇಟ್ಟುಕೊಂಡರೆ ಆ ಮೂಲಕ ಮೇಲೆ ತಿಳಿಸಿದ ವಿಧದಲ್ಲಿ ಉದ್ಯೋಗ ಅಥವಾ ವ್ಯಾಪಾರದಲ್ಲಿ ವೃದ್ದಿ ಸಾಧಿಸಬಹುದು.  ಹಗ್ಗಗಳೊಂದಿಗೆ ಇರುವ ಕುದುವೆ ಚಿತ್ರಗಳನ್ನು ಮಾತ್ರ ಇಟ್ಟುಕೊಳ್ಳಬೇಕು. ಮೈಮೇಲೆ ಏನೂ ಇಲ್ಲದ ಖಾಲಿ ಕುದುರೆ ಚಿತ್ರಗಳನ್ನು ಇಟ್ಟುಕೊಳ್ಳಬಾರದು. ಇಟ್ಟರೆ ಅವು ನೆಗಟೀವ್ ಎನರ್ಜಿಗೆ ಸಂಕೇತಗಳು ಆದಕಾರಣ ಅದೇ ಎನರ್ಜಿ ಪ್ರಸಾರವಾಗುತ್ತದೆ. ಇದರಿಂದ ಅದೃಷ್ಟ ಕೂಡಿಬರಲ್ಲ. ಆದಕಾರಣ ಹಗ್ಗ ಅಥವಾ ಜೀನು ಇರುವ ಕುದುವೆ ಚಿತ್ರಗಳನ್ನು ಇಟ್ಟುಕೊಳ್ಳಬೇಕು. ಇದರಿಂದ ಲಕ್ ಕೂಡಿಬರುತ್ತದೆ. ಎಲ್ಲವೂ ಒಳಿತೇ ಆಗುತ್ತದೆ. ಎಲ್ಲದರಲ್ಲೂ ವೃದ್ಧಿ ಸಾಧಿಸುತ್ತೀರಿ. ಸಂಪತ್ತು ಬರುತ್ತದೆ.

ಮನೆ ಅಥವಾ ಆಫೀಸಿನಲ್ಲಿ ದಕ್ಷಿಣ ದಿಕ್ಕಿನಲ್ಲಿ ಕುದುರೆ ಚಿತ್ರಗಳನ್ನು ಇಟ್ಟರೆ ಅದರಿಂದ ಹೆಸರು ಕೀರ್ತಿ ಬರುತ್ತದೆ. ಬಿಜಿನೆಸ್‌ನಲ್ಲಿ ಕೈಗೊಳ್ಳುವ ಪ್ರಾಜೆಕ್ಟ್‌ಗಳು ಯಶಸ್ವಿಯಾಗುತ್ತವೆ. ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಉತ್ತರ ದಿಕ್ಕಿನಲ್ಲಿ ಕುದುರೆ ಚಿತ್ರಗಳನ್ನು ಇಟ್ಟರೆ ಕೆರಿಯರ್ ಪರವಾಗಿ ಸೆಟ್ ಆಗುತ್ತದೆ. ಆ ಸಮಸ್ಯೆಗಳನ್ನು ಎದುರಿಸುತ್ತಿರುವವರು, ಆರ್ಥಿಕ ಸಮಸ್ಯೆಗಳು ಇರುವವರು ಕುದುರೆ ಚಿತ್ರಗಳನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು. ಇದರಿಂದ ಲಕ್ ಸಹ ಕೂಡಿಬಂದು ಅಂದುಕೊಂಡ ಕೆಲಸಗಳು ನೆರವೇರುತ್ತವೆ.
Horse--01
ಬಾಗಿಲುಗಳು ಅಥವಾ ಕಿಟಕಿಗಳಿಗೆ ಎದುರಾಗಿ ಕುದುರೆ ಚಿತ್ರಗಳ ತಲೆ ಬರುವಂತೆ ಇಟ್ಟರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಅಂದುಕೊಂಡ ಕೆಲಸಗಳು ನೆರವೇರುತ್ತವೆ. ಎರಡು ಜೋಡಿ ಕುದುರೆ ಚಿತ್ರಗಳನ್ನು ಬೆಡ್ ರೂಂನಲ್ಲಿ ಇಟ್ಟುಕೊಂಡರೆ ದಂಪತಿಗಳ ನಡುವೆ ಕಲಹಗಳು ಇರಲ್ಲ. ಗಲಾಟೆ ಇಲ್ಲದ ಸಂಸಾರದೊಂದಿಗೆ ಸುಖವಾಗಿ ಬದುಕುತ್ತಾರೆ. ಬೆಡ್ ರೂಂನಲ್ಲಿ ಯಾವಾಗಲೂ ಒಂಟಿ ಕುದುರೆ ಚಿತ್ರವನ್ನು ಇಡಬಾರದು. ಜೋಡಿ ಕುದುವೆ ಚಿತ್ರಗಳೇ ಇಟ್ಟುಕೊಳ್ಳಬೇಕು. ಕುದುರೆ ಚಿತ್ರವನ್ನೇ ಇಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ಕುದುರೆ ಫೋಟೋವನ್ನು ಮನೆ ಅಥವಾ ಆಫೀಸಿನಲ್ಲಿ ನೇತಾಕಿದರೂ ಮೇಲೆ ತಿಳಿಸಿದ ಫಲಿತಾಂಶ ಸಿಗುತ್ತದೆ.

ಏಳು ಕುದುರೆಗಳು ಅಕ್ಕಪಕ್ಕ ಓಡುತ್ತಿರುವಂತೆ ಇರುವ ಫೋಟೋ ಅಥವಾ ವಿಗ್ರಹವನ್ನು ಇಟ್ಟುಕೊಂಡರೆ ತುಂಬಾ ಒಳ್ಳೆಯದು. ಇದರಿಂದ ಮನೆ ಅಥವಾ ಆಫೀಸಿನಲಿ ಇರುವ ನೆಗಟೀವ್ ಎನರ್ಜಿ ತೊಲಗುತ್ತದೆ. ಸಮಸ್ಯೆಗಳು ಏನೇ ಇರಲಿ ಮಂಜಿನಂತೆ ಕರಗಿಹೋಗುತ್ತವೆ. ಏಳು ಕುದುರೆಗಳ ಫೋಟೋ ಹಾಕುವುದರಿಂದ ಜೀವನದಲ್ಲಿ ಏರಿಳಿತಗಳಾಗುವುದಿಲ್ಲ. ಮನೆಯಲ್ಲಿ ಲಕ್ಷ್ಮೀ ವಾಸಿಸುತ್ತಾಳೆ. ಇದಕ್ಕಾಗಿ ಮನೆಯ ಮುಖ್ಯ ಹಾಲ್ ನಲ್ಲಿ ಮನೆಯೊಳಗೆ ಬರುತ್ತಾ ಇರುವಂತಹ ಕುದುರೆಯ ಚಿತ್ರವನ್ನು ಹಾಕಬೇಕು.

ಜೊತೆಗೆ ಬಹಳ ಮುಖ್ಯವಾದುದು ಕುದುರೆಯ ಪಾದಕ್ಕೆ ಉಪಯೋಗಿಸಿ ಕುದುರೆಯಿಂದ ಉಪಯೋಗಿಸಲ್ಪಟ್ಟ ಲಾಳವು ಹೆಚ್ಚು ಶುಭಕರವಾಗಿದೆ. ಏಕೆಂದರೆ ಜೀವನೋತ್ಸಾಹ ಸದೃಢತೆಯೊಂದಿಗೆ ಕುದುರೆ ಲಾಳವನ್ನು ಉಪಯೋಗಿಸಿಕೊಂಡು ಅದಮ್ಯ ಚೇತನವನ್ನು ಶಕ್ತಿಯನ್ನು ಚಿಮ್ಮಿಸಿರುವುದರಿಂದ ಕುದುರೆಗಳು ಉಪಯೋಗಿಸಿದ ಲಾಳಗಳಿಗೆ ಹೆಚ್ಚು ವಾಸ್ತುಶಾಸ್ತ್ರ  ನೀಡಬೇಕು. ಕುದುರೆಯ ಲಾಳದ ಮನೆ ಬಾಗಿಲಿಗೆ ಪತ್ರವಾದುದು ಎಂಬುದು ನಮ್ಮ ಸಂಸ್ಕೃತಿ ಮಾತ್ರವಲ್ಲ ಪಾಶ್ಚಾತ್ಯ ದೇಶಗಳು ಒಪ್ಪಿಕೊಂಡಿವೆ. ಹೀಗಾಗಿ ಗೃಹವೊಂದರ ಅಭ್ಯುದಯಕ್ಕೆ ಇದು ಆಧಾರ. ಇನ್ನು ಔದಾರ್ಯತೆ ಇದೆಯೆಂದು ಆ ಲಾಳವನ್ನು ಬೆಳ್ಳಿಯಲ್ಲಾಗಲೀ ಚಿನ್ನದಲ್ಲಾಗಲೀ ಮಾಡಿಸಬಾರದು. ಧನಾತ್ಮಕ ಆಗಿರದ ಸ್ಪಂದನಗಳು ಮನೆಯೊಳಗಡೆ ಬಾರದಂತೆ ತಡೆಯುವುದಕ್ಕೆ ಕಬ್ಬಿಣವೇ ಶ್ರೇಷ್ಠ. ಎಲ್ಲದಕ್ಕೂ ಒಂದೊಂದು ನಿಯಮಗಳಿರುತ್ತವೆ.    ಸಂಧಾನಗಳಿವೆ. ಹಾಗಾಗಿ ಯಾವುದನ್ನು ಬದಲಾಯಿಸಬಾರದು.

Facebook Comments

Sri Raghav

Admin