ಶಾಲಾ ಪಠ್ಯವಾಗಲಿದೆ ಅಜಾತಶತ್ರು ವಾಜಪೇಯಿ ಜೀವನ ಚರಿತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

Vajapeyi--01
ಜೈಪುರ, ಆ.19(ಪಿಟಿಐ)- ಅಜಾತಶತ್ರು, ಕವಿ ಹೃದಯಿ, ಮಾಜಿ ಪ್ರಧಾನಿ, ಭಾರತ ರತ್ನ ಅಟಲ್‍ಬಿಹಾರಿ ವಾಜಪೇಯಿ ಅವರ ಜೀವನ ಚರಿತ್ರೆಯನ್ನು ಪಠ್ಯದಲ್ಲಿ ಅಳವಡಿಸಲು ರಾಜಸ್ಥಾನ ಸರ್ಕಾರ ಚಿಂತಿಸಿದೆ ಎಂದು ಶಿಕ್ಷಣ ಸಚಿವ ವಾಸುದೇವ ದೇವ್‍ನಾನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಾಜಪೇಯಿ ಅವರ ಜೀವನ, ರಾಜಕೀಯ ವ್ಯಕ್ತಿತ್ವವೂ ಯುವ ಜನತೆಗೆ ಸ್ಫೂರ್ತಿದಾಯಕವಾಗಿರುವುದರಿಂದ, ಸೂಕ್ತ ಕಾಯಕಲ್ಪದೊಂದಿಗೆ ವಾಜಪೇಯಿ ಅವರ ಪಠ್ಯವನ್ನು ಹೊರ ತರಲು ಸರ್ಕಾರ ಚಿಂತಿಸಿದೆ ಎಂದರು. ಆದರೆ ವಾಜಪೇಯಿ ಅವರ ಜೀವನಚರಿತ್ರೆಯನ್ನು ಯಾವ ತರಗತಿಯ ಪಠ್ಯದಲ್ಲಿ ಅಳವಡಿಸಬೇಕೆಂದು ತೀರ್ಮಾನವಾಗಿಲ್ಲವಾದರೂ, ಆ ಪಠ್ಯದಲ್ಲಿ ಅಟಲ್‍ಜೀಯವರ ಬಾಲ್ಯ ಜೀವನ, ತುರ್ತು ಪರಿಸ್ಥಿತಿ ಅವಧಿಯಲ್ಲಿ ಅವರು ಕೈಗೊಂಡ ಹೋರಾಟದ ಕ್ರಮಗಳು, ಪೋಕ್ರಾನ್ ನ್ಯೂಕ್ಲಿಯರ್ ಪರೀಕ್ಷೆ, ಕಾರ್ಗಿಲ್ ಸಮಯ ಜಯಭೇರಿ, ಜಾಗತಿಕ ಬೆಳವಣಿಗೆಗಳಿಗೆ ಅವರು ನೀಡಿದ ಕೊಡುಗೆಗಳು ಈ ಪಠ್ಯದ ಅಧ್ಯಾಯನದಲ್ಲಿ ಇರಲಿದೆ.

ಈಗಾಗಲೇ ಆರ್‍ಎಸ್‍ಎಸ್‍ನ ವೀರ್ ಸರ್ವಾಕರ್, ಬಿಜೆಪಿ ಪಕ್ಷದ ಸಂಸ್ಥಾಪಕ ದೀನ್ ದಯಾಳ್ ಉಪಾಧ್ಯಾಯರ ಪಠ್ಯವನ್ನು ಹೊರಡಿಸಿರುವುದೇ ಅಲ್ಲದೆ 2016ರಲ್ಲಿ ಪರಿಷ್ಕøತಗೊಂಡ 9ನೆ ತರಗತಿಯ ಪುಸ್ತಕದಲ್ಲಿ ವಾಜಪೇಯಿ ಅವರ ಕುರಿತ ಸಂಕ್ಷಿಪ್ತ ವಿವರಣೆಯನ್ನು ಅಳವಡಿಸಲಾಗಿತ್ತು, ಈಗ ಮುಂದಿನ ವರ್ಷದಿಂದ ಅಟಲ್ ಬಿಹಾರಿ ವಾಜಪೇಯಿಯವರ ಪೂರ್ಣ ಪ್ರಮಾಣದ ಪಠ್ಯವನ್ನು ಅಳವಡಿಸಲಾಗುವುದು ಎಂದರು. ವಾಜಪೇಯಿ ಅವರ ಛಾಯಾಚಿತ್ರಗಳಲ್ಲದೆ, ಅವರು ಬರೆದ ಪುಸ್ತಕಗಳು ಹಾಗೂ ಕವನ ಸಂಕಲನಗಳನ್ನು ಗ್ರಂಥಾಲಯದಲ್ಲಿ ಇಡಲಾಗುವುದು.

Facebook Comments

Sri Raghav

Admin