ಕಬ್ಬನ್ ಪಾರ್ಕ್‍ನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Kabban-Park

ಬೆಂಗಳೂರು, ಆ.19- ಪ್ರೇಮವೈಫಲ್ಯದಿಂದ ನೊಂದ ಯುವತಿಯೊಬ್ಬಳು ನಗರದ ಕಬ್ಬನ್ ಪಾರ್ಕ್‍ನಲ್ಲಿ ಮರದ ಕೊಂಬೆಯೊಂದಕ್ಕೆ ವೇಲ್‍ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮುಂಜಾನೆ ನಡೆದಿದೆ. ಡಿಸೋಜಾ ಬಡಾವಣೆಯ ನಿವಾಸಿ ಸಂತೋಷಿ (21) ಆತ್ಮಹತ್ಯೆಗೆ ಶರಣಾದವರು. ನೇಪಾಳ ಮೂಲದ ಖಾಸಗಿ ಭದ್ರತಾ ಸಿಬ್ಬಂದಿಯ ಪುತ್ರಿಯಾದ ಈಕೆ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆದರೆ ಪ್ರೇಮವೈಫಲ್ಯದಿಂದ ನೊಂದ ಈಕೆ ಇಂದು ಮುಂಜಾನೆ ಕಬ್ಬನ್ ಪಾರ್ಕ್‍ಗೆ ಬಂದು ಮರವೊಂದರ ಕೊಂಬೆಗೆ ವೇಲ್‍ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕಬ್ಬನ್ ಪಾರ್ಕ್ ಸಿಬ್ಬಂದಿ ಇಂದು ಬೆಳಗ್ಗೆ ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.

Facebook Comments

Sri Raghav

Admin