ಪೂಜಿಸಲ್ಪಡಬೇಕಾದ ನಾರಿಯರಿಗೆ ಭಾರತದಲ್ಲೇಕೆ ಇಂಥ ಸ್ಥಿತಿ..?

ಈ ಸುದ್ದಿಯನ್ನು ಶೇರ್ ಮಾಡಿ

Please--Stop

– ಸುದರ್ಶನ್ ಎಂ.ವಿ.

ಭಾರತದಲ್ಲಿ ಹೆಣ್ಣನ್ನು ಭೂಮಿತಾಯಿ ಹೀಗೆ ವಿವಿಧ ರೀತಿಯಲ್ಲಿ ದೇವರಿಗೆ ಹೋಲಿಸಿ ಪೂಜಿಸುತ್ತಾರೆ. ಅದೇ ರೀತಿ ಹೆಣ್ಣನ್ನು ಗೌರವಿಸುವುದು ಕೂಡ ನಮ್ಮ ಸಂಸ್ಕøತಿ. ಆದರೆ ಇಂದಿನ ಸಮಾಜದಲ್ಲಿ ಸ್ತ್ರೀಯರು ಶೈಕ್ಷಣಿಕ, ವೈಜ್ಞಾನಿಕ, ಸಾಮಾಜಿಕವಾಗಿ ಸಾಕಷ್ಟು ಮುಂದುವರೆದಿದ್ದರೂ ಸ್ತ್ರೀಯರ ಮೇಲೆ ಅತ್ಯಾಚಾರ, ಹಿಂಸೆಗಳಂತಹ ಕೃತ್ಯಗಳು ನಿರಂತರವಾಗಿ ನಡೆಯುತ್ತಲೇ ಇದೆ.

ಸಂಸ್ಕøತಿ, ಸಂಪ್ರದಾಯಗಳ ಪುಣ್ಯಭೂಮಿಯಾದ ಭಾರತದ ನಾಗರಿಕರೇ ಇಂದು ಎಷ್ಟರಮಟ್ಟಿಗೆ ಅಧೋಗತಿಗಿಳಿದಿದ್ದಾರೆ ಎಂದರೆ ಹೆಣ್ಣು ಮಕ್ಕಳನ್ನು ಆದರದಿಂದ ಕಾಣುವ ಮನಸ್ಸೇ ಇಲ್ಲದಂತಾಗಿದೆ. ತಮ್ಮ ತಾಯಿ, ಅಕ್ಕ-ತಂಗಿ, ಮಗಳನ್ನು ಪ್ರೀತಿ, ವಾತ್ಸಲ್ಯದಿಂದ ಕಾಣುವಂತೆ ಬೇರೆ ಕುಟುಂಬದ ಹೆಣ್ಣುಮಕ್ಕಳನ್ನು ಆದರಿಸುವುದಿಲ್ಲ, ಬದಲಿಗೆ ಕೆಟ್ಟ ಭಾವನೆಯಿಂದ ನಡೆದುಕೊಳ್ಳುವುದೇಕೆ? ಮನುಷ್ಯನ ಮನಸ್ಸು ಅಷ್ಟೊಂದು ದುರ್ಬಲವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸದೆ ಇರದು. ಹೆಣ್ಣನ್ನು ಕೇವಲ ಭೋಗದ ವಸ್ತುವಾಗಿ ಪರಿಗಣಿಸಿರುವುದೇಕೆ?

ಇತ್ತೀಚೆಗಷ್ಟೇ ದಾನಮ್ಮ, ಆಸೀಫಾ ಎಂಬ ಮುಗ್ಧ ಹೆಣ್ಣು ಮಕ್ಕಳು ಕಾಮುಕರ ಕೈಗೆ ಸಿಲುಕಿ ಸಾವನ್ನಪ್ಪಿರುವಂತಹ ದುರ್ಘಟನೆ ಮರೆಯುವಷ್ಟರಲ್ಲಿಯೇ ಹಾವೇರಿ ಜಿಲ್ಲೆಯ ಕಾಲೇಜು ವಿದ್ಯಾರ್ಥಿನಿಯೊಬ್ಬರನ್ನು ಅಪಹರಿಸಿ ಅತ್ಯಾಚಾರವೆಸಗಿ ಸುಟ್ಟುಹಾಕಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

ಇಂತಹ ದುಷ್ಕøತ್ಯಗಳ ವಿರುದ್ಧ ಸಿಡಿದೇಳುವ ಸಂದರ್ಭವೂ ಎದುರಾಗಿದೆ. ಇಂತಹ ಕೆಲವೇ ಕೆಲವು ಪುರುಷರಿಂದಾಗಿ ಇತರರೂ ಸಹ ತಲೆ ತಗ್ಗಿಸುವ ಪರಿಸ್ಥಿತಿ ಎದುರಾಗಿದೆ. ಹಿಂದಿನಿಂದಲೂ ಹೆಣ್ಣು ಮಕ್ಕಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿದ್ದಾರೆ. ಸಂಕಷ್ಟಗಳ ಹಿನ್ನೆಲೆಯಲ್ಲಿ ಭ್ರೂಣವನ್ನೇ ನಾಶ ಮಾಡುವಂತಹ ಪಾಪಿಗಳಿಂದ ಹಿಡಿದು ತಾನು ಬೆಳೆಯುವ ಪ್ರತಿ ಹಂತದಲ್ಲೂ ಹೆಣ್ಣು ಮಕ್ಕಳು ಒಂದಲ್ಲ ಒಂದು ರೀತಿಯ ಕಿರುಕುಳ ಮತ್ತಿತರ ಮುಜುಗರ ಸಂದರ್ಭಗಳನ್ನು ಹಿಮ್ಮೆಟ್ಟಿಯೇ ಸಾಗಬೇಕಾಗುತ್ತದೆ.   ಇಂದಿನ ಸಮಾಜದಲ್ಲೂ ಹೆಣ್ಣು ಮಕ್ಕಳನ್ನು ಶೋಷಣೆ ಮಾಡುತ್ತಿರುವ ಪುರುಷರಿಗೆ ನಾಚಿಕೆಯಾಗಬೇಕು. ತಾನೂ ಸಹ ಒಂದು ಹೆಣ್ಣಿನಿಂದಲೇ ಜನ್ಮ ತಳೆದವನು ಎಂಬುದನ್ನು ಅರಿಯಬೇಕು.

ಇಂತಹ ಕಾಮುಕರಿಗೆ ಕ್ರೂರ ಶಿಕ್ಷೆ ನೀಡುವುದರಿಂದ ಮಾತ್ರ ಇವರಿಂದ ನೋವನ್ನು ಅನುಭವಿಸಿ ಸಾವನ್ನಪ್ಪಿದ ಅದೆಷ್ಟೋ ಮುಗ್ಧ ಜೀವಗಳಿಗೆ ಶಾಂತಿ ಸಿಗುವುದು. ಅಂದು ಮಹಾತ್ಮಗಾಂಧೀಜಿಯವರು ಮಧ್ಯರಾತ್ರಿಯಲ್ಲಿ ಹೆಣ್ಣು ಮಗಳೊಬ್ಬಳು ಓಡಾಡುವಂತಾದರೆ ಅದೇ ನಿಜವಾದ ಸ್ವಾತಂತ್ರ್ಯ ಎಂದು ಹೇಳಿದಂತಹ ಸಂದರ್ಭ ಇನ್ನೂ ಒದಗಿ ಬಂದಿಲ್ಲ.

ಹೆಣ್ಣು ಮಗಳೊಬ್ಬಳನ್ನು ಮನೆಯಿಂದ ಆಚೆ ಕಳುಹಿಸುವಾಗಿನಿಂದ ಹಿಡಿದು ಹಿಂತಿರುಗುವವರೆಗೂ ಎಚ್ಚರಿಕೆ ವಹಿಸಲೇಬೇಕಾದಂತಹ ಪರಿಸ್ಥಿತಿ ನಮ್ಮ ದೇಶದಲ್ಲಿದೆ. ಬೇರೆ ದೇಶಗಳಿಗೆ ಅದೆಷ್ಟೋ ಕ್ಷೇತ್ರಗಳಲ್ಲಿ ಸ್ಪರ್ಧೆಯೊಡ್ಡುವ ಭಾರತ ಅತ್ಯಾಚಾರ ಪ್ರಕರಣಗಳಲ್ಲಿ ನಂ.1 ಸ್ಥಾನದಲ್ಲಿದೆ ಎಂದು ಸಮೀಕ್ಷೆಯೊಂದು ಹೇಳುತ್ತದೆ. ಇಂತಹ ವಿಷಯ ಪುರುಷಪ್ರಧಾನ ಸಮಾಜಕ್ಕೆ ಹೇಸಿಗೆ ಎನಿಸುವುದಿಲ್ಲವೇ ?

ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ 16 ವರ್ಷದೊಳಗಿನ ಹೆಣ್ಣು ಮಕ್ಕಳ ಮೇಲೆ ಪ್ರತಿ 155 ನಿಮಿಷಕ್ಕೆ ಒಂದು ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ನಡೆಯುತ್ತಿವೆ. 2015ರಲ್ಲಿ 10 ಸಾವಿರಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆದಿರುವ ಬಗ್ಗೆ ಅಂಕಿಅಂಶಗಳಿವೆ. ಈ ಸಮಾಜದಲ್ಲಿ ವಿಕೃತ ಮನಸ್ಸಿನವರೇ ಹೆಚ್ಚು ಮಂದಿ ತುಂಬಿರುವುದು ಬೇಸರದ ಸಂಗತಿ. ಇಂತಹವರನ್ನು ನಿಯಂತ್ರಿಸಲು ಕಠಿಣವಾದ ಕ್ರಮಕೈಗೊಳ್ಳುವುದು ಅತ್ಯಂತ ಅಗತ್ಯ.

ಸರ್ಕಾರಗಳು ಇಂತಹ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಕಾಮುಕರು ಶಿಕ್ಷೆಯಿಂದ ಬಚಾವಾಗಲು ಬಿಡದಂತೆ ಎಲ್ಲಾ ರೀತಿಯ ಕ್ರಮ ವಹಿಸಬೇಕು. ದೇಶದಲ್ಲಿ ಅತ್ಯಾಚಾರದಂತಹ ಕೃತ್ಯಗಳ ಹೆಚ್ಚಳಕ್ಕೆ ಕಾರಣ ಏನು ಎಂಬ ಬಗ್ಗೆ ಅವಲೋಕಿಸಿದಾಗ ಒಂದೆಡೆ ಪುರುಷರ ವಿಕೃತ ಮನಸ್ಸುಗಳು ಎನಿಸಿದರೂ ತಪ್ಪುದಾರಿಗೆ ಎಳೆಯಲು ಅದೆಷ್ಟೋ ವಿಷಯಗಳು ಇವೆ. ಅದರಲ್ಲಿ ಇಂದಿನ ತಲೆಮಾರಿನ ಸಿನಿಮಾ, ಪಾಶ್ಚಿಮಾತ್ಯ ಸಂಸ್ಕøತಿ ಅನುಕರಣೆ, ಮೊಬೈಲ್‍ಗಳು, ಅಂತರ್ಜಾಲ ಬಳಕೆಯಿಂದಾಗಿ ಅಗತ್ಯಕ್ಕಿಂತ ಹೆಚ್ಚು ವಿಷಯಗಳು ಅವರನ್ನು ವಿವೇಚನೆ ರಹಿತವಾಗಿ ನಡೆದುಕೊಳ್ಳುವಂತಾಗಿದೆ.

ಹೀಗಾಗಿ ಟಿ.ವಿ.ಮಾಧ್ಯಮಗಳಲ್ಲಿ ಮೌಲ್ಯಯುತವಾದ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವ ಜೊತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡುವಂತಹ ಚಲನಚಿತ್ರಗಳಿಗೆ ಒತ್ತು ನೀಡುವಂತಾಗಬೇಕು. ಇನ್ನೂ ಅಂತರ್ಜಾಲದ ವಿಷಯಕ್ಕೆ ಮೊದಲು ಯುವಜನರಲ್ಲಿ ತಪ್ಪು, ಸರಿ, ಒಳ್ಳೆಯ-ಕೆಟ್ಟ ವಿಷಯಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವ ಮನಸ್ಥಿತಿಗೆ ಅವರನ್ನು ತರುವ ನಿಟ್ಟಿನಲ್ಲಿ ಪೆÇೀಷಕರು ಮುತುವರ್ಜಿ ವಹಿಸಬೇಕು.

ಲೋಪದಿಂದಾಗಿ ಸಿನಿಮಾ, ಸೀರಿಯಲ್ ಹಾಗೂ ಅಂತರ್ಜಾಲಗಳ ಪ್ರಭಾವಕ್ಕೆ ಒಳಗಾಗಿ ಇಂತಹ ಕೃತ್ಯಗಳಿಗೂ ಕಾರಣವಾಗುತ್ತಿವೆ ಎಂಬುದು ಸುಳ್ಳಲ್ಲ. ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ ಕುರಿತಂತೆ ನಡೆದ ಸಂಶೋಧನೆಗಳ ಹಿನ್ನೆಲೆಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಕೆಲವೊಂದು ಅಭಿಪ್ರಾಯಗಳು ಕೇಳಿಬಂದಿವೆ. ಅವೆಂದರೆ ಅತ್ಯಾಚಾರ ಪ್ರಕರಣದಲ್ಲಿ 17 ವರ್ಷದೊಳಗಿನ ಗಂಡು ಮಕ್ಕಳಿಗೆ ಶಿಕ್ಷೆಯಾದರೆ ಅವರಿಗೆ ಬಾಲಾಪರಾಧಿ ಎಂದು ಪರಿಗಣಿಸಿ ರಿಮ್ಯಾಂಡ್ ಹೋಂಗೆ ಕಳುಹಿಸಲಾಗುತ್ತಿದೆ. ಆದರೆ ಅನಂತರವೂ ಆತನಿಗೆ ಶಿಕ್ಷೆ ವಿಧಿಸುವಂತಾಗಬೇಕು.

ಇನ್ನು ಹೆಣ್ಣು ಮಕ್ಕಳು ಸಹ ತಮ್ಮ ಸುರಕ್ಷತೆಗಾಗಿ ಕೆಲವೊಂದು ಕ್ರಮಗಳನ್ನು ಅನುಸರಿಸಬೇಕು. ಅವುಗಳಲ್ಲಿ ಪ್ರಮುಖವಾಗಿ ಕರಾಟೆಯಂತಹ ಶಿಕ್ಷಣ ಪಡೆಯುವುದು, ಸ್ವರಕ್ಷಣೆಗೆ ಅಗತ್ಯಾದ ಸಾಧನಗಳನ್ನು ಹೆಣ್ಣು ಮಕ್ಕಳು ಸದಾ ತಮ್ಮ ಬಳಿ ಇರಿಸಿಕೊಳ್ಳಬೇಕು. ಅಪಾಯದ ಸಂದರ್ಭದಲ್ಲಿ ಮಾಹಿತಿ ಸಂದೇಶ ರವಾನಿಸುವಂತಹ ಮೊಬೈಲ್ ಮತ್ತಿತರ ವೈಜ್ಞಾನಿಕ ಸಾಧನ-ಸಲಕರಣೆ ಬಳಸಬೇಕು. ಹೆಣ್ಣಿನ ಮೇಲೆ ಇಂತಹ ಕೃತ್ಯಗಳು ಮುಂದುವರೆಯುತ್ತಲೇ ಹೋದರೆ ಸಹನಾಮಯಿ ಸಹೃದಯಿಯಾದ ಹೆಣ್ಣು ತನ್ನ ವಿರುದ್ಧದ ಇಂತಹ ಕೃತ್ಯಗಳಿಗಾಗಿ ಪುರುಷ ಜನಾಂಗದ ವಿರುದ್ಧ ನಿಂತು ಪಾಠ ಕಲಿಸುವುದಂತೂ ನಿಶ್ಚಿತ.

Facebook Comments

Sri Raghav

Admin

6 thoughts on “ಪೂಜಿಸಲ್ಪಡಬೇಕಾದ ನಾರಿಯರಿಗೆ ಭಾರತದಲ್ಲೇಕೆ ಇಂಥ ಸ್ಥಿತಿ..?

Comments are closed.