ಚಲಿಸುತ್ತಿರುವ ಬಸ್ಸಿನಿಂದ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ..!

ಈ ಸುದ್ದಿಯನ್ನು ಶೇರ್ ಮಾಡಿ

Suicide-Man
ಬೆಂಗಳೂರು. ಆ.19 : ಅಪರಿಚಿತ ವ್ಯಕ್ತಿ ಚಲಿಸುತ್ತಿರುವ ಬಸ್ಸಿನಿಂದ ತುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಘಟನೆ ಇಂದು ನಡೆದಿದೆ.
ಭಾನುವಾರ ಮಧ್ಯಾಹ್ನ ಎರಡು ಮೂವತ್ತು ವೇಳೆಗೆ ರಾಜ್ಯ ರಸ್ತೆ ಸಾರಿಗೆ ಬಸ್ನಲ್ಲಿ ಸಂಚರಿಸಿದ್ದ ವ್ಯಕ್ತಿಯೋರ್ವ ಇದ್ದಕ್ಕಿದ್ದಂತೆ ಬಸ್ಸಿನಿಂದ ಜಿಗಿದು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಕಾವೇರಿ ನದಿಗೆ ಹಾರಿ ಮೃತಪಟ್ಟ ವ್ಯಕ್ತಿಯ ವಿವರ ತಿಳಿದು ಬಂದಿಲ್ಲ ಈತ ನದಿಗೆ ಹಾರುವ ವೇಳೆ ಕಾವೇರಿ ನೀರಿನ ಮಟ್ಟವನ್ನು ವೀಕ್ಷಣೆ ಮಾಡಲು ಬಂದಂತಹ ಪ್ರಯಾಣಿಕರು ತಮ್ಮ ಮೊಬೈಲಲ್ಲಿ ನೀರಿನ ಹರಿಯುವಿಕೆಯನ್ನು ಸೆರೆಹಿಡಿಯ ವೇಳೆ ನೀರಿಗೆ ಹಾರುವ ವ್ಯಕ್ತಿಯ ದೃಶ್ಯ ಕಂಡು ಬಂದಿದೆ. ಈ ಘಟನೆ ಕುರಿತು ಮತ್ತಷ್ಟು ಮಾಹಿತಿಗಳು ಇನ್ನಷ್ಟೇ ತಿಳಿದುಬರಬೇಕು.

Facebook Comments

Sri Raghav

Admin