ಶಿರಾಡಿಘಾಟ್‍ನಲ್ಲಿ 6 ದಿನಗಳ ನಂತರ ಪತ್ತೆಯಾಯ್ತು ಟ್ಯಾಂಕರ್ ಚಾಲಕನ ಮೃತದೇಹ

ಈ ಸುದ್ದಿಯನ್ನು ಶೇರ್ ಮಾಡಿ

Dead-Body--01
ಹಾಸನ, ಆ.19- ಟ್ಯಾಂಕರ್ ಪಲ್ಟಿಯಾಗಿ ಸಂಭವಿಸಿದ್ದ ಅಪಘಾತದ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಚಾಲಕನ ಮೃತ ದೇಹ ಆರು ದಿನಗಳ ನಂತರ ಪತ್ತೆಯಾಗಿದೆ. ಶಿರಾಡಿಘಾಟ್‍ನಲ್ಲಿ ಸಂಭವಿಸಿದ ಈ ಅಪಘಾತದ ವೇಳೆ ಚಾಲಕ ನಾಪತ್ತೆಯಾಗಿದ್ದು , ಸಂಪೂರ್ಣ ಕೊಳೆತ ಸ್ಥಿತಿಯಲ್ಲಿರುವ ಮೃತ ದೇಹ ದೊರೆತಿದೆ.

ಆ.14ರಂದು ರಾತ್ರಿ ದೊಡ್ಡ ತಪ್ಪಲು ಬಳಿ ಗುಡ್ಡ ಕುಸಿದು ಟ್ಯಾಂಕರ್ ಹಳ್ಳಕ್ಕೆ ಬಿದ್ದು ಸಂಭವಿಸಿದ ಕ್ಲೀನರ್ ಶವವನ್ನು ಎರಡು ದಿನಗಳ ನಂತರ ಹೊರ ತೆಗೆಯಲಾಗಿತ್ತು. ಕೆ.ಆರ್.ಪೇಟೆ ತಾಲ್ಲೂಕಿನ ಆನೆಗೊಳ ಗ್ರಾಮದ ಚಾಲಕ ಸಂತೋಷ್ ಕುಟುಂಬಸ್ಥರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ರೋಹಿಣಿ ಸಿಂಧೂರಿ ಅವರಿಗೆ ಸಂತೋಷ್ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದರು. ಅಪಘಾತ ನಡೆದ ದಿನದಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಇಂದು ಮೃತ ದೇಹ ಪತ್ತೆಯಾಗಿದ್ದು , ಸಂತೋಷ್ ಸಾವಿನ ಸುದ್ದಿ ತಿಳಿದ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು.

charmadi ghat

# 5 ತಿಂಗಳ ಕಾಲ ಶಿರಾಡಿಘಾಟ್ ರಸ್ತೆ ಸಂಚಾರ ಬಂದ್..!
ಮಳೆ ಹಾಗೂ ಭೂ ಕುಸಿತದಿಂದ ಸಂಪೂರ್ಣವಾಗಿ ಹಾಳಾಗಿರುವ ಶಿರಾಡಿಘಾಟ್ ರಸ್ತೆ ದುರಸ್ತಿಗಾಗಿ ಐದು ತಿಂಗಳ ಕಾಲ ಬಂದ್ ಮಾಡಲಾಗಿದೆ. ಶಿರಾಡಿಘಾಟ್ ರಸ್ತೆಗಳಲ್ಲಿ ಗುಡ್ಡ ಕುಸಿತದಿಂದ ಕಳೆದ ಕೆಲವು ದಿನಗಳಿಂದ ಸಂಚಾರಕ್ಕೆ ತೀವ್ರ ತೊಂದರೆ ಎದುರಾಗಿತ್ತು. ಇದೀಗ ಆಗಿರುವ ಮಳೆ ಅನಾಹುತದಿಂದಾಗಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಸುಮಾರು 130 ಕೋಟಿಗೂ ಹೆಚ್ಚು ಹಣ ವ್ಯಯಿಸಿ ರಸ್ತೆ ದುರಸ್ತಿಗೊಳಿಸಬೇಕಿದೆ.  ಈ ಹಿನ್ನೆಲೆಯಲ್ಲಿ ಐದು ತಿಂಗಳ ಕಾಲ ರಸ್ತೆ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ. ಕೊಡಗು, ಮಡಿಕೇರಿ ರಸ್ತೆಗಳೂ ಸಹ ಸಂಪೂರ್ಣವಾಗಿ ಹಾಳಾಗಿದ್ದು, ಸುತ್ತಮುತ್ತಲ ಗ್ರಾಮಗಳು ಸಹ ಮಳೆಯ ಆರ್ಭಟದಿಂದ ನಲುಗಿ

Facebook Comments

Sri Raghav

Admin