ಇಂದಿನ ಪಂಚಾಗ ಮತ್ತು ರಾಶಿಫಲ (20-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಬುದ್ಧಿವಂತನಾದವನು ತನ್ನ ಹಣವನ್ನೂ, ಪ್ರಾಣವನ್ನೂ ಮತ್ತೊಬ್ಬರಿಗಾಗಿ ತ್ಯಾಗ ಮಾಡಬೇಕು. ಅವುಗಳಿಗೆ ವಿನಾಶವು ಸಿದ್ಧವೇ ಆಗಿರುವಾಗ ಒಳ್ಳೆಯ ಕಾರಣಕ್ಕಾಗಿ ತ್ಯಾಗ ಮಾಡುವುದು ಬಹಳ ಶ್ರೇಷ್ಠವಾದುದೇ ಆಗಿದೆ.  -ಹಿತೋಪದೇಶ

Rashi
ಪಂಚಾಂಗ : ಸೋಮವಾರ, 20.08.2018
ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.38
ಚಂದ್ರ ಉದಯ ಮ.02.03 / ಚಂದ್ರ ಅಸ್ತ ರಾ.01.47
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ : ದಶಮಿ (ರಾ.05.17)
ನಕ್ಷತ್ರ: ಜ್ಯೇಷ್ಠಾ (ರಾ.09.41) / ಯೋಗ: ವೈಧೃತಿ (ಮ.03.15)
ಕರಣ: ತೈತಿಲ-ಗರಜೆ (ಸಾ.04.13ರಾ.05.17)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 04

# ರಾಶಿ ಭವಿಷ್ಯ 
ಮೇಷ : ಹೊಸ ಕಾರ್ಯ ಪ್ರಾರಂಭಿಸಬಹುದು. ಅನಿರೀಕ್ಷಿತ ಧನಲಾಭ. ವಿದ್ಯಾರ್ಥಿಗಳಿಗೆ ಶುಭ
ವೃಷಭ : ಅತಿ ವಿನಯವಂತಿಕೆ ನಿಮಗೆ ಮುಳು ವಾಗಲಿದೆ. ವರಮಾನ ಕಡಿಮೆಯಾಗಬಹುದು
ಮಿಥುನ: ಕಚೇರಿಯಲ್ಲಿ ಉಳಿದವರಿಗಿಂತ ನಿಮ್ಮ ಕೆಲಸದ ಬಗ್ಗೆ ಹೆಚ್ಚಿನ ಗಮನ ಹರಿಸಲಿದ್ದೀರಿ
ಕಟಕ : ವ್ಯಾಪಾರದಲ್ಲಿ ಬದ ಲಾವಣೆ ಕಾಣುವ ಸಮಯ
ಸಿಂಹ: ಅಪಘಾತವಾಗುವ ಸಂಭವ ಹೆಚ್ಚಿರುವುದರಿಂದ ಎಚ್ಚರಿಕೆ ಅಗತ್ಯ
ಕನ್ಯಾ: ಬಹುಕಾಲದಿಂದ ಮನಸ್ಸಿನಲ್ಲಿದ್ದ ಸಂಶಯ ವೊಂದು ದೂರವಾಗಲಿದೆ
ತುಲಾ: ಉತ್ತಮ ಕೆಲಸದಿಂದ ಬಡ್ತಿ ಸಿಗುವ ಸಾಧ್ಯತೆ
ವೃಶ್ಚಿಕ: ಮನೆಯಲ್ಲಿ ಮಂಗಳಕಾರ್ಯ ನಡೆಯಲಿದೆ
ಧನುಸ್ಸು: ಹೆಚ್ಚಿನ ಆಹಾರ ಪದಾರ್ಥ ಸೇವನೆ ಯಿಂದ ಆರೋಗ್ಯಕ್ಕೆ ಹಾನಿಯಾಗುವ ಸಂಭವ
ಮಕರ: ಮಾಡುವ ಕಾರ್ಯದಲ್ಲಿ ಯಶಸ್ಸು ಸಿಗಲಿದೆ
ಕುಂಭ: ಧನಹಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ
ಮೀನ: ಮಿತ್ರರಲ್ಲಿ ಭಿನ್ನಮತ ಉಂಟಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin