ವಾಹನದ ಮೇಲೆ ಗುಡ್ಡ ಕುಸಿದು ನಾಲ್ವರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

4-Killed--01

ಕಿಶ್ತ್ವಾರ್(ಜೆಕೆ), ಆ.20-ಭೂಕುಸಿತದಿಂದ ಗುಡ್ಡವೊಂದು ಕುಸಿತು ವಾಹನದ ಮೇಲೆ ಉರುಳಿ ಬಿದ್ದು, ನಾಲ್ವರು ಪ್ರಯಾಣಿಕರು ಮೃತಪಟ್ಟ ದುರಂತ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಪರ್ವತಮಯ ಪ್ರದೇಶದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.  ಈ ದುರ್ಘಟನೆಯಲ್ಲಿ ಇತರೆ ಒಂಭತ್ತು ಮಂದಿ ತೀವ್ರ ಗಾಯಗೊಂಡಿದ್ಧಾರೆ.   ವಾಹನವು ಕಿಶ್ತ್ವಾರ್-ಪಡ್ಡರ್ ರಸ್ತೆಯಲ್ಲಿ ಕುಲ್ಲಿಗಡ್ ಬಳಿ ಸಾಗುತ್ತಿದ್ದಾಗ ಭೂಕುಸಿತ ಉಂಟಾಗಿ ದೊಡ್ಡ ಗುಡ್ಡದ ಒಂದು ಭಾಗ ಕುಸಿಯಿತು. ಕಲ್ಲುಬಂಡೆಗಳ ಕೆಳಗೆ ವಾಹನ ಸಿಲುಕಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೀಂದರ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.

ತೀವ್ರ ಗಾಯಗೊಂಡ ಒಂಭತ್ತು ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ. ಉಧಾಂಪುರದಿಂದ ಭಕ್ತರ ಗುಂಪೊಂದು ಪಡ್ಡರ್ ಕಣಿವೆಯ ಮಚೈಲ್‍ನ ಮಂದಿರಕ್ಕೆ ತೆರೆಳುತ್ತಿದ್ದಾಗ ಈ ದುರಂತ ಸಂಭವಿಸಿತು.

Facebook Comments

Sri Raghav

Admin