ಕೊಡಗು ಪುನರ್ ನಿರ್ಮಾಣಕ್ಕೆ ಕೈ ಜೋಡಿಸಿದ ಬಿಬಿಎಂಪಿ ಪೌರಕಾರ್ಮಿಕರು

ಈ ಸುದ್ದಿಯನ್ನು ಶೇರ್ ಮಾಡಿ

BBMP--01

ಬೆಂಗಳೂರು,ಆ.20- ಮಳೆಹಾನಿಯಿಂದ ಹದಗೆಟ್ಟಿ ಹೋಗಿರುವ ಕೊಡಗು ಪುನರ್ ನಿರ್ಮಾಣಕ್ಕೆ ಬಿಬಿಎಂಪಿಯ 305 ಪೌರಕಾರ್ಮಿಕರು ಕೈ ಜೋಡಿಸಿದ್ದಾರೆ. ನಿನ್ನೆ ರಾತ್ರಿ ಮೂರು ಬಸ್‍ಗಳಲ್ಲಿ ತೆರಳಿದ 97 ಪೌರಕಾರ್ಮಿಕರು ಕುಶಾಲನಗರ ತಲುಪಿದ್ದು, ಇಂದಿನಿಂದ ಗಬ್ಬೆದ್ದು ಹೋಗಿರುವ ಕುಶಾಲನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಮಳೆಯಿಂದ ಎಲ್ಲೆಡೆ ನೀರು ನಿಂತಿರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಪೌರಕಾರ್ಮಿಕರು ಮುಖಕ್ಕೆ ಮಾಸ್ಕ್ , ಕೈ ಗ್ಲೌಸ್ ಹಾಗೂ ಕಾಲಿಗೆ ಗಮ್‍ಬೂಟ್ ಧರಿಸಿ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂದು ಮತ್ತೆ ನಾಲ್ಕು ಬಸ್‍ನಲ್ಲಿ ಸುಮಾರು 208 ಪೌರಕಾರ್ಮಿಕರು ಕೊಡಗಿನತ್ತ ಪ್ರಯಾಣ ಬೆಳೆಸಿದ್ದಾರೆ.

ಇವರೊಂದಿಗೆ ಓರ್ವ ಡಾಕ್ಟರ್ ಹಾಗೂ 20 ಹೆಲ್ತ್ ಇನ್‍ಸ್ಪೆಕ್ಟರ್‍ಗಳು ಕೊಡಗಿಗೆ ಧಾವಿಸಿದ್ದಾರೆ.   ಮಳೆಯಿಂದ ಅನಾರೋಗ್ಯಕ್ಕೀಡಾಗಿರುವವರಿಗೆ ಚಿಕಿತ್ಸೆ ನೀಡುವುದರೊಂದಿಗೆ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

Facebook Comments

Sri Raghav

Admin