ಏಕಕಾಲಕ್ಕೆ ಗರ್ಭಿಣಿಯಾರಾದ ಐಸಿಯುನಲ್ಲಿ ಕೆಲಸ ಮಾಡುವ 16 ನರ್ಸ್’ಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Nurse--01
ಅರಿಜೋನಾ. ಆ. 21 : ಅಮೇರಿಕಾದ ಅರಿಜೋನಾ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ಕಾರ್ಯ ನಿರ್ವಹಿಸುವ 16 ನರ್ಸ್ ಗಳು ಏಕಕಾಲಕ್ಕೆ ಗರ್ಭಿಣಿಯರಾಗಿದ್ದಾರೆ. ಈ ವಿಷಯ ಬೆಳಕಿಗೆ ಬಂದಿದ್ದು ಫೇಸ್ಬುಕ್ ಮೂಲಕ. ಹೌದು, ಇಲ್ಲಿ ಕೆಲಸ ಮಾಡುವ ನರ್ಸಗಳಲ್ಲಿ 16 ನರ್ಸ್ ಗಳು ಏಕಕಾಲಕ್ಕೆ ಗರ್ಭಿಣಿಯರಾಗಿರುವುದು ಫೇಸ್ಬುಕ್ ಗ್ರೂಪ್ ಚಾಟ್ ಮಾಡುವಾಗ ಗೊತ್ತಾಗಿದೆ. ಈ ನರ್ಸ್ ಗಳು ಸೆಪ್ಟೆಂಬರ್ ಮತ್ತು ಜನವರಿ ತಿಂಗಳುಗಳ ಅಂತರದಲ್ಲಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ.

ಜೊತೆಜೊತೆಗೆ ಕೆಲಸ ಮಾಡುತ್ತಿದ್ದರೂ ತಾವು ಗರ್ಭಿಣಿಯಾಗಿರುವ ವಿಷಯವನ್ನು ನೇರವಾಗಿ ಹಂಚಿಕೊಂಡಿರಲಿಲ್ಲ, ಆದರೆ ಫೇಸ್ಬುಕ್ ಗ್ರೂಪ್ ಚಾಟಿಂಗ್ ವೇಳೆ ಈ ವಿಷಯ ಬಯಲಾಗಿದೆ.

Nurse--02

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin