ಕೇರಳ, ಮಂಗಳೂರಿಗೆ ಕೆಎಸ್ಆರ್‌ಟಿಸಿ ಬಸ್ ಸಂಚಾರ ಪುನಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

BUs-KSRTC

ಬೆಂಗಳೂರು,ಆ.20- ಕೇರಳ ಹಾಗೂ ಮಂಗಳೂರು ಭಾಗದಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಸ್ಥಗಿತಗೊಳಿಸಲಾಗಿದ್ದ ಕೆಎಸ್ಆರ್‌ಟಿಸಿ ಬಸ್ ಸಂಚಾರವನ್ನು ಆರಂಭಿಸಲಾಗಿದೆ.

ಕಳೆದ ಮೂರು ದಿನಗಳಿಂದ ಕುದುರೆಮುಖ ಮಾರ್ಗವಾಗಿ ಹಗಲು ಹೊತ್ತಿನಲ್ಲಿ ಮಾತ್ರ ಬಸ್ ಸೇವೆ ಒದಗಿಸಲಾಗಿತ್ತು. ನಿನ್ನೆ ರಾತ್ರಿ ಮಂಗಳೂರಿನಿಂದ ಕೊಟ್ಟಿಗೆಹಾರದ ಮೂಲಕ ಯಶಸ್ವಿಯಾಗಿ ಬಸ್ ಸಂಚಾರವನ್ನು ನಡೆಸಲಾಗಿದೆ ಎಂದು ಕೆಎಸ್‍ಆರ್‍ಟಿಸಿ ಮೂಲಗಳು ತಿಳಿಸಿವೆ. ರಾತ್ರಿ ಬಸ್ ಸಂಚಾರದ ಸಂದರ್ಭದಲ್ಲಿ ಮಂಗಳೂರು ವಿಭಾಗದ ಸಿಬ್ಬಂದಿಗಳನ್ನು ಮಾರ್ಗಮಧ್ಯದಲ್ಲಿ ನಿಯೋಜಿಸಿ ತ್ವರಿತವಾಗಿ ಸ್ಪಂದಿಸಲು ಅನುಕೂಲವಾಗುವಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗಿತ್ತು. ಪ್ರಯಾಣಿಕರಿಂದ ರಾತ್ರಿ ವೇಳೆ ಐರಾವತ ಬಸ್ ಸೇವೆಗಳನ್ನು ಆರಂಭಿಸುವಂತೆ ಬೇಡಿಕೆ ಹೆಚ್ಚಾಗಿತ್ತು.

ಹೀಗಾಗಿ ಮಂಗಳೂರಿನಿಂದ ಹಾಸನ ತಲುಪುವವರೆಗೂ ಕೆಎಸ್‍ಆರ್‍ಟಿಸಿ ಸಿಬ್ಬಂದಿ ಬೆಂಗಾವಲು ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದರು ಎಂದು ಕೆಎಸ್‍ಆರ್‍ಟಿಸಿ ಮೂಲಗಳು ತಿಳಿಸಿವೆ. ವೇಗಧೂತ ಬಸ್‍ಗಳು ಮಾತ್ರ ಚಾರ್ಮುಡಿಘಾಟ್ ಮಾರ್ಗದ ರಸ್ತೆಗಳಲ್ಲಿ ಸಂಚರಿಸುತ್ತಿವೆ.  ಕೇರಳದ ಯರ್ನಾಕುಲಂ, ಕೊಟ್ಟಾಯಂ, ತ್ರಿಶೂರ್, ಪಾಲ್ಗಾಟ್, ಕಲಿಕಟ್, ತ್ರಿವೇಂಡ್ರಮ್ ಭಾಗಗಳಿಗೆ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಕೇರಳ ಮತ್ತು ಬೆಂಗಳೂರು ನಡುವೆ 32 ಬಸ್ ಆರಂಭವಾಗಿದೆ. ಕಾಸರಗೋಡನ್ನು ಹೊರತುಪಡಿಸಿ ಕೇರಳದ ಇತರೆ ಭಾಗಗಳಿಗೆ ಬಸ್ ಸಂಪರ್ಕ ಕಲ್ಪಿಸಲಾಗಿದೆ.  ಮಡಿಕೇರಿ, ಕುಶಾಲನಗರ ಭಾಗಗಳ ಬಸ್ ಸಂಚಾರವು ಯಥಾರೀತಿಗೆ ಮರಳಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

Facebook Comments

Sri Raghav

Admin