ಅವಧಿಗೆ ಮುನ್ನ ಜನಿಸಿದ ಹೆಣ್ಣು ಪೆಂಗ್ವಿನ್ ಮರಿಯನ್ನು ರಕ್ಷಿಸಿದ ಮೃಗಾಲಯ ಸಿಬ್ಬಂದಿ..!

ಈ ಸುದ್ದಿಯನ್ನು ಶೇರ್ ಮಾಡಿ

ds

ಲಂಡನ್ ಮೃಗಾಲಯದಲ್ಲೊಂದು ವಿಸ್ಮಯ ಪ್ರಸಂಗ ನಡೆದಿದೆ. ಅವಧಿಗೆ ಮುನ್ನವೇ ಜನಿಸಿ ಅತ್ಯಂತ ಅಪಾಯ ಪರಿಸ್ಥಿತಿಯಲ್ಲಿದ್ದ ಹೆಣ್ಣು ಪೆಂಗ್ವಿನ್ ಮರಿಯನ್ನು ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಈ ಮುದ್ದಾದ ಮರಿಯ ಹೆಸರು ರೈನ್‍ಬೋ.. ಇದರ ತಾಯಿ ಆಕಸ್ಮಿಕವಾಗಿ ತನ್ನ ಮೊಟ್ಟೆಯನ್ನು ಒಡೆದ ಕಾರಣ ಅವಧಿಗೆ ಮುನ್ನವೇ ಹೊರ ಬಂದ ಇದು ಸಾವು-ಬದುಕಿನೊಂದಿಗೆ ಹೋರಾಡುತ್ತಿತ್ತು. ಲಂಡನ್ ಮೃಗಾಲಯದ ಸಿಬ್ಬಂದಿ ಅತ್ಯಂತ ಜತನದಿಂದ ಅತಿ ಪುಟ್ಟ ಹೆಣ್ಣು ಪೆಂಗ್ವಿನ್ ಮರಿಯ ಆರೈಕೆ ಮಾಡಿ ಬದುಕಿಸುವಲ್ಲಿ ಸಫಲರಾಗಿದ್ದಾರೆ.

ds-1

ತಾಯಿ ಪೆಂಗ್ವಿನ್ ಹಾಕಿದ್ದ ಮೊಟ್ಟೆ ಒಡೆದು ಹೋಗಿ ಅದರಲ್ಲಿ ಪುಟ್ಟ ಮರಿ ಜೀವಂತವಾಗಿದ್ದನ್ನು ಗಮನಿಸಿದ ಮೃಗಾಲಯದ ಸಿಬ್ಬಂದಿ ತತ್ತಿಯ ಸಿಪ್ಪೆಗಳನ್ನು ಅತ್ಯಂತ ಎಚ್ಚರಿಕೆಯಿಂದ ತೆಗೆದು ಅಪೂರ್ಣವಸ್ಥೆಯಲ್ಲಿದ್ದ ಮರಿಯನ್ನು ಇನ್‍ಕ್ಯುಬೇಷನ್ ರೂಮ್‍ಗೆ ಸ್ಥಳಾಂತರಿಸಿ ಅಲ್ಲಿ ಕೃತಕ ಶಾಖದಿಂದ ಮರಿಯನ್ನು ಬದುಕಿಸಿ ಬೆಳೆಯುವಂತೆ ಮಾಡಿದ್ದಾರೆ.

ಮೊಟ್ಟೆಯಿಂದ ಹೊರೆ ತೆಗೆದಾಗ ಇದು ಕೇವಲ 73 ಗ್ರಾಂ ತೂಕ ಹೊಂದಿತ್ತು. ಈಗ ಈ ಹೆಣ್ಣು ಮರಿ ದೊಡ್ಡದಾಗಿದ್ದ್ದು ಆರೋಗ್ಯವಾಗಿದೆ.  ಒಂದು ತಿಂಗಳ ಈ ಮರಿಯನ್ನು ಮುತುವರ್ಜಿಯಿಂದ ನೋಡಿಕೊಳ್ಳುತ್ತಿರುವ ಸಿಬ್ಬಂದಿ ಅದಕ್ಕಾಗಿ ವಿಶೇಷ ವ್ಯವಸ್ಥೆ ಕಲ್ಪಿಸಿದ್ದಾರೆ. ಇನ್ನೂ ಕೆಲವು ವಾರಗಳ ಕಾಲ ಅದು ವಿಶೇಷ ಆರೈಕೆ ಯಲ್ಲಿರಬೇಕಾಗುತ್ತದೆ. ಮೀನು, ವಿಟಮಿನ್ ಮತ್ತು ಖನಿಜಗಳನ್ನು ಒಳಗೊಂಡ ಪೆಂಗ್ವಿನ್ ಮಿಲ್ಕ್‍ಶೇಕ್ ನೀಡಿ ಅದನ್ನು ಬೆಳೆಸಲಾಗುತ್ತಿದೆ. ಇದು ಪ್ರತಿ ದಿನ ಶೇ.20ರಷ್ಟು ಬೆಳವಣಿಗೆ ಹೊಂದುತ್ತಿದೆ.

Facebook Comments