ಬೇರೊಬ್ಬರ ಮಗುವಿಗೆ ಎದೆಹಾಲುಣಿಸಿದ ಪೊಲೀಸ್ ಅಧಿಕಾರಿಗೆ ಸಿಕ್ತು ಭರ್ಜರಿ ಗಿಫ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

Bresrt-DFeed

ಬ್ಯೂನೆಸ್. ಆ. 21: ಅರ್ಜೆಂಟೀನಾ ರಾಜಧಾನಿ ಬ್ಯೂನೆಸ್ನಲ್ಲಿ ಅಪೌಷ್ಟಿಕತೆ ಮತ್ತು ಹಸಿವಿನಿಂದ ಬಳಲುತ್ತಿದ್ದ ಮಗುವಿಗೆ ಎದೆಹಾಲುಣಿದ ಪೊಲೀಸ್ ಅಧಿಕಾರಿಗೆ ಸರ್ಕಾರವು ಭರ್ಜರಿ ಗಿಫ್ಟ್ ನೀಡಿದೆ. ಸೆಲೆಸ್ಟೇ ಐಲಾ ಎಂಬ ಪೊಲೀಸ್ ಅಧಿಕಾರಿ ಆಸ್ಪತ್ರೆಯೊಂದರಲ್ಲಿ ಅಪೌಷ್ಟಿಕತೆ ಮತ್ತು ಹಸಿವಿನಿಂದ ಬಳಲುತ್ತಿರುವವರು ಬೇರೊಬ್ಬರ ಮಗುವಿಗೆ ಹಾಲುಣಿಸಿ ತಾಯ್ತನ ಮೆರೆದಿದ್ದಳು. ಈ ಪೊಲೀಸ್ ಅಧಿಕಾರಿ ಬಗ್ಗೆ ಅಲ್ಲಿನ ಸ್ಥಳೀಯ ಸರ್ಕಾರ ಹೆಮ್ಮೆ ವ್ಯಕ್ತಪಡಿಸಿದ್ದು, ಇದು ತಾಯ್ತನದ ಸ್ವಾಭಾವಿಕ ಪ್ರೀತಿ, ಆ ಪೊಲೀಸ್ ಅಧಿಕಾರಿ ಬಗ್ಗೆ ನಮಗೆ ಹೆಮ್ಮೆ ಎದೆ ಎಂದು ಹೇಳಿಕೊಂಡಿದೆ. ಮಹಿಳಾ ಪೊಲೀಸ್ ಅಧಿಕಾರಿ ಮಗುವಿಗೆ ಹಾಲುಣಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಸರ್ಕಾರ ಆ ಅಧಿಕಾರಿಗೆ ಬಡ್ತಿಯ ಗಿಫ್ಟ್ ನೀಡಿ ಗೌರವಿಸಿದೆ.

ಹಸಿವಿನಿಂದ ಬಳಲಿದ ಮಗು ಆಳುತ್ತಿದ್ದಾಗ ಬಂದ ಪೊಲೀಸ್ ಅಧಿಕಾರಿ ಮಗುವನ್ನು ಎತ್ತಿಕೊಂಡು ಹಾಲುಣಿಸಿದಳು, ತಕ್ಷಣ ಮಗು ಅಳು ನಿಲ್ಲಿಸಿ ಶಾಂತವಾಯಿತು ಎಂದು ವರದಿಯಾಗಿದೆ.

Bresrt-DFeed-1

Facebook Comments

Sri Raghav

Admin