1 ದಿನದ ವೇತನ ನೀಡಿ ಕೊಡಗಿನ ಜನರ ಕಷ್ಟಕ್ಕೆ ಮಿಡಿದ ಕೆಎಸ್‌ಆರ್‌ಟಿಸಿ ಸಿಬ್ಬಂದಿ

ಈ ಸುದ್ದಿಯನ್ನು ಶೇರ್ ಮಾಡಿ
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಬೆಂಗಳೂರು, ಆ.21- ಕೊಡಗಿನಲ್ಲಿ ಸುರಿದ ಭಾರೀ ಮಳೆಯಿಂದ ಮನೆ, ಮಠ ಕಳೆದುಕೊಂಡು ನಿರಾಶ್ರಿತರಾದ ನೆರೆ ಸಂತ್ರಸ್ತರಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳು ತಮ್ಮ ಒಂದು ದಿನದ ವೇತನ 11.80 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ.  ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಂದ ಒಟ್ಟು 1.16 ಲಕ್ಷ ಸಿಬ್ಬಂದಿಗಳು ಒಂದು ದಿನದ ವೇತನವನ್ನು ನೀಡುವ ಮೂಲಕ ನೆರೆ ಸಂತ್ರಸ್ತರ ನೆರವಿಗೆ ಮುಂದಾಗಿದ್ದಾರೆ. ಈಗಾಗಲೇ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆ ತರಲು ಉಚಿತ ಸೇವೆಯನ್ನು ಒದಗಿಸುವ ಜತೆಗೆ ವಿವಿಧೆಡೆ ಸಾರ್ವಜನಿಕರು ನೀಡುವ ದೈನಂದಿನ ಹಾಗೂ ಸಾಮಗ್ರಿಗಳನ್ನು ಉಚಿತವಾಗಿ ಸರಬರಾಜು ಮಾಡುತ್ತಿದೆ.

ಕೊಡಗು , ಕುಂದಾಪುರ , ಮಡಿಕೇರಿ , ಬೆಂಗಳೂರು ಸ್ಯಾಟ್‍ಲೈಟ್ ನಿಲ್ದಾಣಗಳಲ್ಲಿ ಈ ವಸ್ತುಗಳನ್ನು ಇರಿಸಲು ಕೋಣೆಯನ್ನು ಕೂಡ ವ್ಯವಸ್ಥೆ ಮಾಡಲಾಗಿದ್ದು , ಮುಕ್ತವಾಗಿ ಸಾರ್ವಜನಿಕರು ಸ್ಪಂದನೆಗೆ ನಿಗಮ ಧನ್ಯವಾದ ಅರ್ಪಿಸುತ್ತಿದೆ.

Facebook Comments

Sri Raghav

Admin