ರಾಜ್ಯಸಭೆ ಚುನಾವಣೆಗೆ ನೋಟಾ ರದ್ದು, ಶಾಸಕರ ಮತದಾನ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

Nota

ನವದೆಹಲಿ, ಆ.21- ರಾಜ್ಯಸಭಾ ಚುನಾವಣೆಯಲ್ಲಿ ನೋಟಾ (ನನ್ ಆಫ್ ದಿ ಅಬೌ-ಯಾವ ಅಭ್ಯರ್ಥಿಗೂ ಮತ ಇಲ್ಲ) ಆಯ್ಕೆಯನ್ನು ಸುಪ್ರೀಂಕೋರ್ಟ್ ಇಂದು ರದ್ದುಗೊಳಿಸಿದೆ. ಇದರಿಂದ ಸಂಸತ್‍ನ ಮೇಲ್ಮನೆ ಚುನಾವಣೆಯಲ್ಲಿ ಮತದಾರರು ಒಬ್ಬ ಅಭ್ಯರ್ಥಿಗೆ ಮತದಾನವನ್ನು ಕಡ್ಡಾಯಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ.ಕಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಪೀಠವು ರಾಜ್ಯಸಭೆ ಚುನಾವಣೆಗಾಗಿ ಮತಪತ್ರಗಳಲ್ಲಿ ನೋಟಾ ಆಯ್ಕೆಗೆ ಅವಕಾಶ ನೀಡುವ ಚುನಾವಣಾ ಆಯೋಗದ ಅಧಿಸೂಚನೆಯನ್ನು ಪಕ್ಕಕ್ಕಿರಿಸಿದೆ. ಚುನಾವಣಾ ಆಯೋಗದ ಈ ಅಧಿಸೂಚನೆ ಯನ್ನು ಪ್ರಶ್ನಿಸಿರುವ ಸರ್ವೋಚ್ಚ ನ್ಯಾಯಾಲಯ, ನೇರ ಚುನಾವಣೆಗಳಲ್ಲಿ ವೈಯಕ್ತಿಕ ಮತದಾರರಿಗೆ ಮಾತ್ರ ಅನ್ವಯವಾಗುತ್ತದೆ ಹೊರತು, ರಾಜ್ಯಸಭೆ ಚುನಾವಣೆಗೆ ಇದು ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕಳೆದ ರಾಜ್ಯಸಭೆ ಚುನಾವಣೆ ವೇಳೆ ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಮುಖ್ಯ ಸಚೇತಕರಾಗಿದ್ದ ಶೈಲೇಶ್ ಮನುಭಾಯ್ ಪಾರ್ಮರ್ ಅವರು ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಈ ಮಹತ್ವದ ಆದೇಶ ಹೊರಬಿದ್ದಿದೆ. ರಾಜ್ಯಸಭಾ ಚುನಾವಣೆಯ ಮತಪತ್ರದಲ್ಲಿ ನೋಟಾ ಆಯ್ಕೆಗೆ ಅವಕಾಶ ನೀಡಿರುವ ಚುನಾವಣಾ ಆಯೋಗದ ಅಧಿಸೂಚನೆಯನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್‍ಗೆ ಅವರು ಮೇಲ್ಮನವಿ ಸಲ್ಲಿಸಿದ್ದರು.

Facebook Comments

Sri Raghav

Admin