ನಿಮಗೆ ಗೊತ್ತೇ ಈರುಳ್ಳಿಯ ಈ 20 ಹೆಲ್ತ್ ಬೆನಿಫಿಟ್ಸ್..?

ಈ ಸುದ್ದಿಯನ್ನು ಶೇರ್ ಮಾಡಿ

Onion--01

ಈರುಳ್ಳಿ ಎಂದಾಕ್ಷಣ ಎಲ್ಲರಿಗೂ ಮೊದಲು ತಲೆಗೆ ಹೊಳೆಯುವುದು ಕಣ್ಣಲ್ಲಿ ನೀರು, ಕಣ್ಣು ಉರಿ. ಆದರೆ, ಪ್ರತೀ ದಿನ ಕಣ್ಣಲ್ಲಿ ನೀರು ತರಿಸುವ ಈ ಈರುಳ್ಳಿ ದೇಹವನ್ನು ಆರೋಗ್ಯವಾಗಿರಿಸುವಲ್ಲಿ ಚಮತ್ಕಾರಿ ಗುಣಗಳನ್ನು ಹೊಂದಿದೆ. ಈರುಳ್ಳಿಯಲ್ಲಿ ದೇಹಕ್ಕೆ ಉತ್ತಮ ಪೋಷಣೆ ಒದಗಿಸಬಲ್ಲ ವಿಟಮಿನ್ ಗಳು ಹೇರಳವಾಗಿದ್ದು, ಇದು ನಮ್ಮ ದೇಹದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸಹಾಕಾರಿಯಾಗಿದೆ. ಆರೋಗ್ಯ ವೃದ್ಧಿಗೆ ಸಿದ್ಧೌಷಧವಾಗಿರುವ ಈ ಈರುಳ್ಳಿಯನ್ನು ಪ್ರತೀ ನಿತ್ಯ ಸೇವಿಸುತ್ತಾ ಬಂದರೆ ಹದಗೆಟ್ಟ ಆರೋಗ್ಯವೂ ಸುಧಾರಿಸುತ್ತದೆ. ವೈದ್ಯ ಪ್ರಪಂಚದಲ್ಲಿಯೂ ಔಷಧಿಗಳಿಗೆ ಈರುಳ್ಳಿಯನ್ನು ಬಳಕೆ ಮಾಡುವುದುಂಟು.

ಇದು ಅಡುಗೆಯ ಒಂದು ಅವಿಭಾಜ್ಯ ಅಂಗವಾಗಿ ಮತ್ತು ಔಷಧೀಯ ಪದಾರ್ಥವಾಗಿ ಚಿರಪರಿಚಿತ. ಶತಶತಮಾನಗಳಿಂದ ಮನುಕುಲ ಇದನ್ನು ಬಳಸುತ್ತಿದೆ. ಕ್ರಿ.ಪೂ. 7000ರಿಂದಲೂ ಇದನ್ನು ಉಪಯೋಗಿಸುತ್ತಾ ಬಂದಿರುವ ಪುರಾವೆಗಳಿವೆ. ಪುರಾಣ ಗ್ರಂಥಗಳಲ್ಲೂ ಇದರ ಬಗ್ಗೆ ಉಲ್ಲೇಖವಿದೆ. ಈರುಳ್ಳಿ ವಿಶ್ವದ ಅತ್ಯಂತ ಸಾಮಾನ್ಯ ಆಹಾರ.ಭಾರತ, ಚೀನಾ, ಅಮೆರಿಕ ಮತ್ತು ಈಜಿಪ್ಟ್‍ನಲ್ಲಿ ಹೆಚ್ಚಾಗಿ ಇದನ್ನು ಬಳಸುತ್ತಾರೆ.ಈರುಳ್ಳಿ ಇಲ್ಲದ ಖಾದ್ಯ ಪದಾರ್ಥವನ್ನು ಊಹಿಸಿಕೊಳ್ಳುವುದು ಕಷ್ಟ.ಅಷ್ಟರಮಟ್ಟಿಗೆ ಈರುಳ್ಳಿ ಇದು ಅಡುಗೆಯಲ್ಲಿ ಹಾಸುಹೊಕ್ಕಾಗಿದೆ. ಸಸ್ಯಾಹಾರ ಮತ್ತು ಮಾಂಸಾಹಾರದ ರುಚಿ ಹೆಚ್ಚಿಸುವ ಈರುಳ್ಳಿಯ 20 ಹೆಲ್ತ್ ಬೆನಿಫಿಟ್ಸ್ ಇಲ್ಲಿವೆ ನೋಡಿ.

Onion--02
1. ಉಷ್ಣತೆಯಿಂದ ಹೊಟ್ಟೆ ನೋವು ಕಾಣಿಸಿಕೊಂಡಾಗ ಈರುಳ್ಳಿಯನ್ನು ಸಣ್ಣ ತುಂಡು ಮಾಡಿ ದನದ ತುಪ್ಪದಲ್ಲಿ
ಹುರಿದು ಊಟದ ಪ್ರಾರಂಭದಲ್ಲಿ ಸೇವಿಸಬೇಕು.
2. ಈರುಳ್ಳಿಯನ್ನು ಹಸಿಯಾಗಿ ಅಥವಾ ತುಪ್ಪದಲ್ಲಿ ಹುರಿದು ತಿನ್ನುವುದರಿಂದ ಬಾಯಿರುಚಿ, ಜೀರ್ಣಶಕ್ತಿ   ಅಧಿಕವಾಗುತ್ತದೆ ಮತ್ತು ಹೊಟ್ಟೆ ಹುಳದ ಬಾಧೆ ನಿವಾರಣೆಯಾಗುತ್ತದೆ.
3. ಈರುಳ್ಳಿಯನ್ನು ಬೆಲ್ಲದೊಂದಿಗೆ ಸೇರಿಸಿ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
4. ಈರುಳ್ಳಿರಸ ಮತ್ತು ತುಳಸಿ ರಸವನ್ನು ಸಮಪ್ರಮಾಣದಲ್ಲಿ ಸೇರಿಸಿ 5 ರಿಂದ 10 ಮಿಲೀ ಯಷ್ಟು ಕುಡಿಸಿದರೆ ವಾಂತಿ ಹಾಗು ಭೇದಿಯು ಕಡಿಮೆಯಾಗುತ್ತದೆ.
5. ಈರುಳ್ಳಿಯ ತುಂಡುಗಳನ್ನು ಮೊಸರಿನೊಂದಿಗೆ ಜಜ್ಜಿ ಸೇವಿಸಿದರೆ ರಕ್ತಸ್ರಾವಯುಕ್ತ ಮೂಲವ್ಯಾಧಿಯು ಕಡಿಮೆಯಾಗುತ್ತದೆ.
6. ಈರುಳ್ಳಿಯನ್ನು ಸುಲಿದು ಬಿಸಿಲಿನಲ್ಲಿ ಒಣಗಿಸಿ ನಂತರ ತುಪ್ಪದಲ್ಲಿ ಹುರಿದ ಎಳ್ಳು ಮತ್ತು ಕಲ್ಲುಸಕ್ಕರೆ  ಸೇರಿಸಿ ಪ್ರತಿನಿತ್ಯ ಸೇವಿಸುವುದರಿಂದ ಮೂಲವ್ಯಾಧಿಯು ಗುಣವಾಗುತ್ತದೆ.
7. ಈರುಳ್ಳಿ ರಸವನ್ನು ಶುಂಠಿ ,ಜೇನು ಮತ್ತು ದನದ ತುಪ್ಪದೊಂದಿಗೆ ಮಿಶ್ರ ಮಾಡಿ ಪ್ರತಿದಿನ ಬೆಳಗ್ಗೆ  ತಿನ್ನುವುದರಿಂದ ಶರೀರದ ನಿತ್ರಾಣ ಹಾಗು ಬಲಕ್ಷಯ ನಿವಾರಣೆಯಾಗುತ್ತದೆ.
8. ಈರುಳ್ಳಿಯನ್ನು ತುಪ್ಪದಲ್ಲಿ ಹುರಿದು ಅಥವಾ ಹಾಗೆಯೇ ಬೆಲ್ಲದೊಂದಿಗೆ ಸೇವಿಸಿದರೆ ಕಪ ಹಾಗು ಕೆಮ್ಮು  ವಾಸಿಯಾಗುತ್ತದೆ.
9. ಸರಿಯಾಗಿ ಮೂತ್ರಪ್ರವೃತ್ತಿ ಆಗದಿದ್ದರೆ ಅಥವಾ ನೋವಿನಿಂದ ಕೂಡಿದ್ದರೆ ಈರುಳ್ಳಿ ರಸವನ್ನು ತುಪ್ಪದಲ್ಲಿ ಮಿಶ್ರ  ಮಾಡಿ ಸೇವಿಸಬೇಕು.
10. ಈರುಳ್ಳಿಯು ಹೃದಯಕ್ಕೆ ಬಲದಾಯಕವಾಗಿದ್ದು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡಲು ಸಹಕರಿಸುತ್ತದೆ ಮತ್ತು ಶರೀರದಲ್ಲಿನ ಕೆಟ್ಟ ಕೊಬ್ಬಿನ ಅಂಶವನ್ನು ಸಹ ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
11. ಈರುಳ್ಳಿಯು ಶರೀರದ ಒಳಗೆ ರಕ್ತಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತದೆ.
12. ಈರುಳ್ಳಿಯ ನಿತ್ಯ ಬಳಕೆಯಿಂದ ಮಧುಮೇಹ ರೋಗವು ನಿಯಂತ್ರಣದಲ್ಲಿ ಇಡಲು ಸಹಕಾರಿಯಾಗುತ್ತದೆ
13. ಈರುಳ್ಳಿಯು ಪಿತ್ತ ಜನಕಾಂಗಕ್ಕೆ ಬಲದಾಯಕವಾಗಿದ್ದು ಕಾಮಾಲೆ ರೋಗಿಗಳಿಗೆ ಇದು ಉತ್ತಮ ಪಥ್ಯ ಆಹಾರವಾಗಿದೆ.
14. ಈರುಳ್ಳಿಯ ನಿತ್ಯ ಬಳಕೆಯಿಂದ ಬುದ್ಧಿಶಕ್ತಿ,ನೆನಪು ಶಕ್ತಿ ಇತ್ಯಾದಿಗಳು ಅಧಿಕವಾಗುತ್ತದೆ.
15. ಇತ್ತೀಚೆಗಿನ ಅಧ್ಯಯನದ ಪ್ರಕಾರ ಈರುಳ್ಳಿಯು ಕ್ಯಾನ್ಸರನ್ನು ತಡೆಗಟ್ಟಲು ಸಹ ಪರಿಣಾಮಕಾರಿಯಾಗಿ ಸಹಕರಿಸುತ್ತದೆ.
16. ಮಾರಕ ರೋಗಗಳಾದ ಕ್ಯಾನ್ಸರ್, ಅದರಲ್ಲೂ ಉದರ ಮತ್ತು ಕರುಳು ಕ್ಯಾನ್ಸರ್, ಪ್ರೋಸ್ಟೆಟ್ ಕ್ಯಾನ್ಸರ್ ನಿವಾರಣೆಯಲ್ಲಿ ಈರುಳ್ಳಿ ಪ್ರಮುಖ ಪಾತ್ರವಹಿಸುತ್ತದೆ.
17. ರಕ್ತ ಪರಿಚಲನೆ, ಚರ್ಮ ಮತ್ತು ಕೂದಲು ಆರೈಕೆ, ಜೀರ್ಣ ಕ್ರಿಯೆ, ದೇಹದಿಂದ ವಿಷ ವಸ್ತುಗಳನ್ನು ಹೊರ ಹಾಕುವಲ್ಲಿ ಈರುಳ್ಳಿ ಪರಿಣಾಮಕಾರಿ. ಉತ್ತಮ ನಿದ್ರೆ ಮತ್ತು ಮಾನಸಿಕ ಚೇತನಕ್ಕೂ ಇದು ಸಹಕಾರಿ.
18. ಅರ್ಧ ಚಮಚ ಈರುಳ್ಳಿ ರಸದೊಂದಿಗೆ ಒಂದು ಟೀ ಚಮಚ ಜೇನುತುಪ್ಪವನ್ನು ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸುವುದರಿಂದ ನೆಗಡಿ ಮತ್ತು ನಾಯಿ ಕೆಮ್ಮು ನಿವಾರಣೆಯಾಗುತ್ತದೆ. ಈರುಳ್ಳಿಯನ್ನು ಜಜ್ಜಿ ಹಣೆಗೆ ಹಚ್ಚುವುದರಿಂದ ತಲೆನೋವು ಕಡಿಮೆಯಾಗುತ್ತದೆ.
19. ಈರುಳ್ಳಿಯ ರಸವನ್ನು ತೊಟ್ಟು ತೊಟ್ಟಾಗಿ ಕಿವಿಗೆ ಹಾಕುವುದರಿಂದ ಕಿವಿ ನೋವು ದೂರವಾಗುತ್ತದೆ. ಚೇಳು ಕುಟುಕಿದಾಗ ಈರುಳ್ಳಿಯನ್ನು ಎರಡು ಹೋಳಾಗಿ ಕತ್ತರಿಸಿ ಕುಟುಕಿದ ಜಾಗಕ್ಕೆ ಹಾಕುವುದರಿಂದ ನಂಜು ಏರುವುದಿಲ್ಲ.
20. ಪ್ರತಿದಿನ ಊಟದೊಂದಿಗೆ ಒಂದು ಗಡ್ಡೆ ಈರುಳ್ಳಿಯನ್ನು ಸೇವಿಸುವುದರಿಂದ ಕಣ್ಣು ನೋವು, ಕಣ್ಣುರಿ, ತಲೆನೋವು ಗುಣವಾಗುತ್ತದೆ. ವಿವಿಧ ಚರ್ಮರೋಗಗಳಿಗೆ ಈರುಳ್ಳಿ ಮತ್ತು ಅರಿಶಿಣದ ಮಿಶ್ರಣವನ್ನು ಲೇಪಿಸಿದರೆ ದೋಷ ನಿವಾರಣೆಯಾಗುತ್ತದೆ.

Facebook Comments

Sri Raghav

Admin