ಚಿರಂಜೀವಿ ಅಭಿನಯದ ‘ಸೈರಾ ನರಸಿಂಹ ರೆಡ್ಡಿ’ ಟೀಸರ್ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Syra-Reddy
ರಾಮ್ಚರಣ್ ತೇಜ ನಿರ್ಮಾಣದ ಹಾಗೂ ಚಿರಂಜೀವಿ ಅಭಿನಯದ 151 ನೇ ಬಹು ನಿರೀಕ್ಷಿತ ಸಿನಿಮಾ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದ ಟೀಸರ್ ಇಂದು (ಆ.21) ಬಿಡುಗಡೆಯಾಗಿದೆ. ನಾಳೆ (ಆ.22)ಕ್ಕೆ ಚಿರಂಜೀವಿ ಅವರ ಹುಟ್ಟುಹಬ್ಬವಿದ್ದು, ಅದಕ್ಕೆ ಉಡುಗೊರೆಯಾಗಿ ಮಗ ರಾಮ್ಚರಣ್ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, ಕಿಚ್ಚ ಸುದೀಪ್, ನಯನತಾರಾ, ಜಗಪತಿ ಬಾಬು, ತಮ್ಮನ್ನಾ, ವಿಜಯ್ ಸೇತುಪತಿ, ಬ್ರಹ್ಮಾಜೀ ಸೇರಿದಂತೆ ಬಹುತಾರಾಗಣವಿದೆ. ಸುರೇಂದರ್ ರೆಡ್ಡಿ ನಿರ್ದೇಶನದ ಈ ಸಿನಿಮಾಗೆ ಅಮಿತ್ ತ್ರಿವೇದಿ ಸಂಗೀತ ನೀಡಿದ್ದಾರೆ.

ಅಲ್ಲದೇ ಬಿಡುಗಡೆಯಾದಗಿನಿಂದ ಇಲ್ಲಿಯವೆರೆಗೂ ಕಾಂಟ್ಯಾಂತರ ಸಿನಿಪ್ರಿಯರು ಟೀಸರ್ ವೀಕ್ಷಿಸಿ, ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಚಿತ್ರವು ಸ್ವಾತಂತ್ರ್ಯ ಹೋರಾಟಗಾರ ಉಯ್ಯಲವಾಡು ನರಸಿಂಹ ರೆಡ್ಡಿಯವರ ಜೀವನಚರಿತ್ರೆಯನ್ನು ಆಧರಿಸಿದ್ದು, ಸುರೇಂದರ್ ರೆಡ್ಡಿ ನಿರ್ದೇಶನವಿದೆ. ಅಲ್ಲದೇ ಕೊನಿದೆಲ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಚಿತ್ರ ತಯಾರಾಗುತ್ತಿದ್ದು, ಅಮಿತ್ ತ್ರಿವೇದಿ ಸಂಗಿತ ಮತ್ತು ಎ.ಶ್ರೀಕಾಂತ್ ಪ್ರಸಾದ್ ಸಂಕಲನ ಚಿತ್ರಕ್ಕಿದೆ.

Facebook Comments

Sri Raghav

Admin