ದೇಶದ ಮೊದಲ ಸ್ಮಾರ್ಟ್ ಹೈಬ್ರಿಡ್ ಸಿಯಾಜ್ ಕಾರು ಮಾರುಕಟ್ಟೆಗೆ..!

ಈ ಸುದ್ದಿಯನ್ನು ಶೇರ್ ಮಾಡಿ

maruti--ciaz-car

ಬೆಂಗಳೂರು, ಆ.21- ಮಾರುಕಟ್ಟೆಗೆ ಇದೀಗ ಸಿಯಾಜ್ ಕಾರು ಬಿಡುಗಡೆಯಾಗಿದ್ದು, ದೇಶದ ಮೊದಲ ಸ್ಮಾರ್ಟ್ ಹೈಬ್ರಿಡ್ ಕಾರು ಇದಾಗಿದೆ. ಆಧುನಿಕ ತಂತ್ರಜ್ಞಾನದಿಂದ ರೂಪಿತವಾಗಿದೆ. ಹೊಸ ಸಿಯಾಜ್ ಕಾರು ಕೆ15 ಸ್ಮಾರ್ಟ್ ಹೈಬ್ರಿಡ್ ಗ್ಯಾಸೋಲಿನ್ ಎಂಜಿನ್, ಲೀಥಿಯಂ ಇಯಾನ್ ಬ್ಯಾಟರಿ ಹೊಂದಿದೆ. ಇದು ಗ್ರಾಹಕರ ಬಯಕೆಗೆ ಅನುಗುಣವಾಗಿ ತಯಾರಾಗಿದ್ದು, ಕಾರು ಪ್ರಿಯರು ಇಷ್ಟಪಡುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಮಾರುತಿ ಸುಜುಕಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆರ್.ಎಸ್.ಕೆನಿಷಿ ಅಯುಕಾವಾ ತಿಳಿಸಿದ್ದಾರೆ.

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಸಂಸ್ಥೆಯು ನೂತನ ರೂಪದ ಪ್ರೀಮಿಯಂ ಸೆಡಾನ್ ಕಾರು ಸಿಯಾಜ್ ಮಾರುಕಟ್ಟೆಗೆ ಪರಿಚಯಿಸಿದೆ. ಅಧಿಕ ಸಾಮಥ್ರ್ಯದೊಂದಿಗೆ 1.5 ಲೀ. ಕೆ15 ಪೆಟ್ರೋಲ್ ಎಂಜಿನ್, ಪವರ್ ಶೇ.13 ಮತ್ತು ಟಾರ್ಕ್ ಶೇ.6 ಹೊಂದಿದೆ. ಹೊಸ ಸಿಯಾಜ್ ಆಧುನಿಕ ತಲೆಮಾರಿನ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಅಳವಡಿಸಿಕೊಂಡಿದೆ. ಹೊಸ ಬಗೆಯ ಶೈಲಿಯಲ್ಲಿ ಸುರಕ್ಷತೆ ಮತ್ತು ಅನುಕೂಲಕರ ಅಂಶವನ್ನು ಒಳಗೊಂಡಿದೆ.

ಕೆ.15 ಎಂಜಿನ್ ವರ್ಗದ ಕಾರುಗಳ ಪೈಕಿ ಸಿಯಾಜ್ ಅಧಿಕ ಇಂಧನ ಕ್ಷಮತೆ, ಲೀಥಿಯಂ ಇಯಾನ್ ಬ್ಯಾಟರಿ, ಕಾಂಪ್ಯಾಕ್ಟ್ ಹೊಂದಿದೆ. ಪೆಟ್ರೋಲ್ ಲೀಟರ್‍ಗೆ 21.56ಕಿಮೀ ಮತ್ತು ಡೀಸೆಲ್ ಲೀಟರ್‍ಗೆ 28.09ಕಿಮೀ ದೂರ ಕ್ರಮಿಸುವಂತೆ ಇಂಧನ ಸಾಮಥ್ರ್ಯ ಪಡೆದಿದೆ. ಸಿಗ್ಮಾ, ಡೆಲ್ಟಾ, ಝೀಟಾ, ಆಲ್ಫಾ ಮಾದರಿಯಲ್ಲಿ ಅನೇಕ ಬಣ್ಣದ ಶೈಲಿಯಲ್ಲಿರುವುದು ಕಾಣಬಹುದು. ಪೆಟ್ರೋಲ್ ಕಾರಿನ ದರವು ಆರಂಭದಲ್ಲಿ 8.1 ಲಕ್ಷದಿಂದ 9.9 ಲಕ್ಷದವರೆಗೆ ಹಾಗೂ ಡೀಸೆಲ್ ಕಾರಿನ ದರ 9.19 ಲಕ್ಷದಿಂದ 10.97 ಲಕ್ಷದವರೆಗೆ ಬೆಲೆಯನ್ನು ಹೊಂದಿದೆ. ವೇಗದಲ್ಲಿರುವಾಗ ಎಚ್ಚರಿಕೆ ನೀಡುವ ವ್ಯವಸ್ಥೆ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಮಕ್ಕಳಿಗಾಗಿ ಐಸೋಫಿಕ್ಸ್ ವ್ಯವಸ್ಥೆ, ಹಿಂಬದಿಯಲ್ಲಿ ಎಲ್‍ಇಡಿ ಕಾಂಬಿನೇಷನ್ ಲ್ಯಾಂಪ್, ಎಲ್‍ಇಡಿ ಫ್ರಂಟ್‍ಫಾಗ್ ಲ್ಯಾಂಪ್ ಅತ್ಯಧಿಕ ಫ್ಯೂಚರ್ ಹೀಗೆ ಇನ್ನಿತರ ವಿಶೇಷತೆಯನ್ನು ಹೊಸ ಸಿಯಾಜ್ ಹೊಂದಿದೆ.

Facebook Comments

Sri Raghav

Admin