ಪರ್ಯಾಯ ಪಾಲಿಮಾರು ಮಠದಿಂದ ಕೊಡಗಿನ ಒಂದು ಗ್ರಾಮ ದತ್ತು

ಈ ಸುದ್ದಿಯನ್ನು ಶೇರ್ ಮಾಡಿ

Kodagu--01
ಉಡುಪಿ, ಆ.22- ಕೊಡಗು ಜಲ ಪ್ರಳಯದಿಂದ ತತ್ತರಿಸಿ ಹೋಗಿರುವ ಹಿನ್ನೆಲೆಯಲ್ಲಿ ಒಂದು ಗ್ರಾಮವನ್ನು ದತ್ತು ಪಡೆಯಲು ಪರ್ಯಾಯ ಪಾಲಿಮಾರು ಮಠ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ನಿರ್ಧರಿಸಿದ್ದಾರೆ.  ಈಗಾಗಲೇ ಜಲ ಪ್ರಳಯದಿಂದ ಅಲ್ಲಿನ ನಿವಾಸಿಗಳು ಮನೆ, ಮಠ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ತಾತ್ಕಾಲಿಕ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಅವರ ಸ್ಥಿತಿ ಶೋಚನೀಯವಾಗಿದ್ದು , ಸಾರ್ವಜನಿಕರ ನೆರವಿನಿಂದ ಗ್ರಾಮ ಪುನರ್ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಕೃಷ್ಣ ಮಠದ ಪರ್ಯಾಯ ಪೀಠವನ್ನು ಅಲಂಕರಿಸಲಿರುವ ಪಾಲಿಮಾರು ಸ್ವಾಮೀಜಿ ತಿಳಿಸಿದ್ದಾರೆ.

Facebook Comments

Sri Raghav

Admin