ಭಾರತಕ್ಕೆ 203 ರನ್‍ಗಳ ಭರ್ಜರಿ ಗೆಲುವು, ಸರಣಿ ಜೀವಂತ

ಈ ಸುದ್ದಿಯನ್ನು ಶೇರ್ ಮಾಡಿ

Kohli--01

ನ್ಯಾಂಟಿಂಗ್‍ಹ್ಯಾಮ್,ಆ. 22- ಸರಣಿ ಉಳಿಸಿಕೊಳ್ಳಲು ಮಹತ್ತರ ಪಂದ್ಯವೆಂದೇ ಬಿಂಬಿಸಿಕೊಂಡಿದ್ದ ಟೆಸ್ಟ್‍ನಲ್ಲಿ ಭಾರತ ತಂಡವು 203 ರನ್‍ಗಳ ವಿರೋಚಿತ ಗೆಲುವು ಸಾಧಿಸಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ತೃತೀಯ ಟೆಸ್ಟ್‍ನ 4ನೆ ದಿನದಾಟಕ್ಕೆ ಗೆಲುವನ್ನು ಖಚಿತಪಡಿಸಿಕೊಂಡಿದ್ದ ವಿರಾಟ್ ಪಡೆ ಇಂದು ಪಂದ್ಯ ಆರಂಭಗೊಂಡ 2.5 ಓವರ್‍ಗಳಲ್ಲೇ ಗೆದ್ದು ಬೀಗಿತು.

ಆ್ಯಂಡ್ರರ್ಸನ್ ಹಾಗೂ ಅದಿಲ್ ರಶೀದ್ ಆರಂಭದೆರಡು ಓವರ್‍ಗಳಲ್ಲಿ ಎಚ್ಚರಿಕೆಯ ಆಟವನ್ನು ಪ್ರದರ್ಶಿಸಿದರೂ ಅಂತಿಮ ದಿನದ 3ನೆ ಓವರ್ ಮಾಡಿದ ಅಶ್ವಿನ್, ಆ್ಯಂಡ್ರಸನ್‍ರನ್ನು ಔಟ್ ಮಾಡುವ ಮೂಲಕ ಇಂಗ್ಲೆಂಡ್ ಅನ್ನು ಅಲೌಟ್ ಮಾಡಿತು.
ಅದಿಲ್ ರಶೀದ್ 5 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸುವ ಮೂಲಕ 33 ರನ್‍ಗಳನ್ನು ಗಳಿಸಿ ಅಜೇಯರಾಗಿ ಉಳಿದರು. ಭಾರತ ತಂಡದ ಪರ ಜಸ್‍ಪ್ರೀತ್ ಬೂಮ್ರಾ 5 ವಿಕೆಟ್, ಇಶಾಂತ್ ಶರ್ಮಾ 2, ಅಶ್ವಿನ್, ಶಮಿ, ಪಾಂಡ್ಯಾ ತಲಾ 1 ವಿಕೆಟ್ ಕೆಡವಿದರು.

ಸಂಕ್ಷಿಪ್ತ ಸ್ಕೋರ್:
ಭಾರತ : ಮೊದಲ ಇನ್ನಿಂಗ್ಸ್ 329, ಎರಡನೇ ಇನ್ನಿಂಗ್ಸ್ 352/7 ಡಿಕ್ಲೇರ್ಡ್
ಇಂಗ್ಲೆಂಡ್ : ಮೊದಲ ಇನ್ನಿಂಗ್ಸ್ 161, ದ್ವಿತೀಯ ಇನ್ನಿಂಗ್ಸ್ 317
ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ

Facebook Comments

Sri Raghav

Admin