ಮಂಡಿ ನೋವು ಉಲ್ಬಣಗೊಂಡು ಫೈನಲ್‍ನಿಂದ ನಿರ್ಗಮಿಸಿದ ದೀಪಾ ಕರ್ಮಕರ್

ಈ ಸುದ್ದಿಯನ್ನು ಶೇರ್ ಮಾಡಿ

Deepa--01

ಜಕಾರ್ತ, ಆ.22-ಇಂಡೋನೆಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‍ನಲ್ಲಿ ಇಂದು ಭಾರತೀಯರಿಗೆ ದೊಡ್ಡ ನಿರಾಶೆಯಾಗಿದೆ. ಭಾರತದ ಸ್ಟಾರ್ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಕರ್ ತೀವ್ರ ಮಂಡಿ ನೋವಿನಿಂದಾಗಿ ಆರ್ಟಿಸ್ಟಿಕ್ ತಂಡ ಫೈನಲ್ ಪಂದ್ಯದಿಂದ ನಿರ್ಗಮಿಸಿದ್ದಾರೆ.

ಕೆಲವು ದಿನಗಳಿಂದ ದೀಪಾ ತೀವ್ರ ಮಂಡಿ ನೋವಿನಿಂದ ಬಳಲುತ್ತಿದ್ದರು. ಈಗ ಅದು ಮತ್ತಷ್ಟು ಉಲ್ಬಣಗೊಂಡಿದೆ. ದೀಪಾ ಜಿಮ್ನಾಸ್ಟಿಕ್‍ನಲ್ಲಿ ಕಸರತ್ತು ಪ್ರದರ್ಶಿಸಿದರೆ ಅದು ಮತ್ತಷ್ಟು ಅಪಾಯಕಾರಿ ಗಾಯವಾಗುವ ಆತಂಕವಿದೆ. ಹೀಗಾಗಿ ಆಕೆ ಆರ್ಟಿಸ್ಟಿಕ್ ತಂಡದ ಫೈನಲ್ ಪಂದ್ಯದಿಂದ ಅನಿವಾರ್ಯವಾಗಿ ಹೊರ ಬರಬೇಕಾಯಿತು. ಟೀಮ್ ಇವೆಂಟ್‍ನಿಂದ ಆಕೆಗೆ ಸಂಪೂರ್ಣ ವಿಶ್ರಾಂತಿ ನೀಡಲಾಗಿದೆ. ಬ್ಯಾಲೆನ್ಸಿಂಗ್ ಬೀಮ್ ಫೈನಲ್ಸ್‍ನಲ್ಲಿ ದೀಪಾ ಖಂಡಿತಾ ಉತ್ತಮ ಪ್ರದರ್ಶನ ನೀಡುತ್ತಾರೆಂಬ ವಿಶ್ವಾಸವಿದೆ ಎಂದು ಅವರ ಕೋಚ್ ಬಿಶ್ವೇಶ್ವರ್ ನಂದಿ ತಿಳಿಸಿದ್ದಾರೆ.

Deepa--02

ಬ್ಯಾಲೆನ್ಸಿಂಗ್ ಬೀಮ್ ಫೈನಲ್‍ನಲ್ಲಿ ಸ್ಪರ್ಧಿಸುವುದರಿಂದ ದೀಪಾ ಅವರ ಮಂಡಿ ಮೇಲೆ ದುಷ್ಪರಿಣಾಮ ಉಂಟಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲ, ಬ್ಯಾಲೆನ್ಸಿಂಗ್ ಬೀಮ್ ಸ್ಪಧೆಯಲ್ಲಿ ಮಂಡಿ ಮೇಲೆ ಅಷ್ಟಾಗಿ ಒತ್ತಡ ಇರುವುದಿಲ್ಲ. ಲ್ಯಾಂಡಿಂಗ್ ಕೂಡ ಕಠಿಣವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪೋಡಿಯಂ ಪ್ರಾಕ್ಟಿಸ್ ಅಭ್ಯಾಸದ ವೇಳೆ ಮಂಡಿಯಲ್ಲಿ ಜರ್ಕ್ ಅನುಭವವಾದ ನಂತರ ಆಕೆಗೆ ಪದೇ ಪದೇ ನೋವು ಕಾಣಿಸಿಕೊಳ್ಳುತ್ತಿದೆ.

Facebook Comments

Sri Raghav

Admin