ಏಷ್ಯಾಡ್ ಹಾಕಿ: ಚೀನಾ ವಿರುದ್ಧ ಭಾರತಕ್ಕೆ 26-0 ಐತಿಹಾಸಿಕ ಜಯ

ಈ ಸುದ್ದಿಯನ್ನು ಶೇರ್ ಮಾಡಿ

Haki-Ashad-gams-Hongkong-ch
ಜಕಾರ್ತ, ಆ.22- ಭಾರತ ತಂಡ 86 ವರ್ಷಗಳ ಹಿಂದೆ ನಿರ್ಮಿಸಿದ್ದ 24-1 ಗೋಲುಗಳ ಅಂತರದ ಗೆಲುವನ್ನು ಇಂದಿಲ್ಲಿ ನಡೆದ ಏಷ್ಯಾಡ್ ಪಂದ್ಯದ ಹಾಂಗ್ ‘ಕಾಗ್  ಚೀನಾ ವಿರುದ್ಧ 26-0 ಗೋಲುಗಳ ಮೂಲಕ ಜಯ ಸಾಧಿಸುವ ಮೂಲಕ ಹಾಕಿ ಇತಿಹಾಸದಲ್ಲೇ ಹೊಸದೊಂದು ದಾಖಲೆಯನ್ನು ನಿರ್ಮಿಸಿದೆ. ಹಾಕಿ ರ್ಯಾಂಕಿಂಗ್‍ನಲ್ಲಿ 5 ಸ್ಥಾನದಲ್ಲಿರುವ ಭಾರತ ತಂಡಕ್ಕೆ 45 ನೆ ರ್ಯಾಂಕಿಂಗ್‍ನಲ್ಲಿರುವ ಹಾಂಗ್‍ಕಾಂಗ್ ಚೀನಾ ಸುಲಭದ ತುತ್ತಾಯಿತು. ಭಾರತ ತಂಡದ ಗೋಲ್‍ಕೀಪರ್ ಕೂಡ ಮೈದಾನಕ್ಕಿಳಿದು ಗೋಲ್ ಗಳಿಸಿದ್ದು ಹಾಂಗ್‍ಕಾಂಗ್‍ನ ಕಳಪೆ ಪ್ರದರ್ಶನವನ್ನು ತೋರಿಸುವಂತಿತ್ತು.

ಭಾರತದ ಪರ ಗೋಲ್ ಗಳಿಸಿದರು:
ರುಪೀಂದರ್ ಸಿಂಗ್ (3,5,30, 45, 59ನೆ ನಿಮಿಷ), ಹರ್ಮಾನ್‍ಪ್ರೀತ್‍ಸಿಂಗ್ (29, 52,53,54ನೆ ನಿಮಿಷ), ಆಕಾಶ್‍ದೀಪ್ ಸಿಂಗ್ (2, 32,35 ನಿಮಿಷ) ಹ್ಯಾಟ್ರಿಕ್ ಗೋಲು ಗಳಿಸಿದ್ದು ಕೂಡ ಪಂದ್ಯದ ವಿಶಿಷ್ಟವಾಗಿತ್ತು.  ಮನ್‍ಪ್ರೀತ್ ಸಿಂಗ್ (3, 17ನೆ ನಿಮಿಷ), ಲಲಿತ್ ಉಪಾಧ್ಯಾಯ (17, 19ನೆ ನಿಮಿಷ), ವರುಣ್‍ಕುಮಾರ್ (23, 30 ನಿಮಿಷ), ಎಸ್.ವಿ.ಸುನಿಲ್ (7ನೆ ನಿಮಿಷ), ವಿವೇಕ್ ಸಾಗರ್ ಪ್ರಸಾದ್ (14ನೆ ನಿಮಿಷ), ಮನ್‍ದೀಪ್ ಸಿಂಗ್ (21ನೆ ನಿಮಿಷ), ಅಮಿತ್ ರೋಹಿದಾಸ್ (27ನೆ ನಿಮಿಷ), ದಿಲ್‍ಪ್ರೀತ್ ಸಿಂಗ್ (48 ನಿಮಿಷ), ಚಿಂಗ್‍ಲೆನ್‍ಸನಾ ಸಿಂಗ್ (51ನೆ ನಿಮಿಷ), ಸಿಮ್‍ರಾನ್‍ಜಿತ್ ಸಿಂಗ್ (53 ನಿಮಿಷ), ಸುರೆಂದರ್ ಕುಮಾರ್ (55 ನವಿಮಿಷ).

ಭಾರತ ಮೊದಲ 5 ನಿಮಿಷಗಳಲ್ಲಿ ನಾಲ್ಕು ಗೋಲುಗಳನ್ನು ಗಳಿಸಿದರೆ, ಮೊದಲ ಸುತ್ತು ಮುಕ್ತಾಯದ ವೇಳೆಗೆ 14-0 ಯಿಂದ ಮುನ್ನಡೇ ಸಾಧಿಸಿತ್ತು.  ಭಾರತ ನಾಯಕ ಪಿ.ಆರ್. ಶ್ರೀಜೇಸ್ ಗೋಲ್ ಕೀಪರ್ ಪಾತ್ರ ನಿರ್ವಹಿಸಿದರೂ ಅವರಿಗೆ ಗೋಲು ತಡೆಯುವ ಕೆಲಸವೇ ಸಿಕ್ಕಿಲ್ಲವಾದರೂ ಹಾಂಕಾಂಗ್‍ಚೀನಾದ ಗೋಲ್ ಕೀಪರ್ ಮೈಕಲ್ ಚುಂಗ್‍ಗೆ ಮೈದಾನದಲ್ಲಿ ಬೆವರು ಅರಸಿದರು. ಇದು ಹಾಂಗ್‍ಕಾಂಗ್ ಚೀನಾದ ತೀರಾ ಕಳಪೆ ಪ್ರದರ್ಶನವಾಗಿದೆ. ಅತಿ ಹೆಚ್ಚು ಅಂತರದ ಗೆಲುವೆಂದರೆ 1994ರಲ್ಲಿ ನ್ಯೂಜಿಲೆಂಡ್ ಸಾಮೋಹಾ ವಿರುದ್ಧ ಗಳಿಸಿದ 36-1 ಭಾರೀ ಅಂತರದ ಗೋಲುಗಳ ಜಯ ಅಂತರಾಷ್ಟ್ರೀಯ ಪಂದ್ಯದಲ್ಲೇ ದಾಖಲೆಯಾಗಿದೆ.

Facebook Comments

Sri Raghav

Admin